Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಟೊಮೆಟೊ ಬಟಾಣಿ ಭಾತ್ : ಬೇಗ ಅಡುಗೆ, ಬೇಗ ಊಟ

ಬೇಕಾಗುವ ಸಾಮಗ್ರಿಗಳು:
1ಕಪ್ ಅಕ್ಕಿ
4-5 ಚೆನ್ನಾಗಿ ಹಣ್ಣಾಗಿರುವ ಟೊಮೆಟೊ
1/2 ಕಪ್ ಹಸಿ ಬಟಾಣಿ
2 ಈರುಳ್ಳಿ
2-3 ಹಸಿ ಮೆಣಸಿನಕಾಯಿ
1 ಚೆಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ
ಎಣ್ಣೆ ಸಾಸಿವೆ, ಜೀರಿಗೆ, ಕರಿಬೇವು
ಇಂಗು ( ಬೇಕಿದ್ದರೆ)
ಬೆಳ್ಳುಳ್ಳಿ ಮತ್ತು ಶುಂಠಿಪೇಸ್ಟ್
1/4 ಚಮಚ ಕಾರದ ಪುಡಿ
1/2 ಚಮಚ ಧನಿಯಾ ಪುಡಿ
1/4 ಚಮಚ ಗರಮ್ ಮಸಾಲ, ಉಪ್ಪು
2 ಕಪ್ ನೀರು, ಹೆಚ್ಚಿದ ಕೊತ್ತಂಬರಿ ಸೊಪ್ಪು
ಇಷ್ಟವೆನಿಸಿದರೆ ಕಾಯಿ ಅಥವಾ ಕೊಬ್ರಿ ತುರಿ
1 ಚಮಚ ನಿಂಬೆರಸ
ಮಾಡುವ ವಿಧಾನ :
* ಅಕ್ಕಿ ತೊಳೆದು ನೆನೆಹಾಕಿ. ಟೊಮೆಟೊ, ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹೆಚ್ಚಿಕೊಳ್ಳಿ.
* ಕುಕ್ಕರ್ ಅಥವಾ ದಪ್ಪ ತಳದ ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಜೀರಿಗೆ, ಚೆಕ್ಕೆ, ಲವಂಗ, ಏಲಕ್ಕಿ, ಎಲೆ ಹಾಕಿ, ಕರಿಬೇವು, ಇಂಗು ಹಾಕಿ ಆಮೇಲೆ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಹಾಕಬೇಕು.
* ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಬಾಡಿಸಿದ ನಂತರ 2 ನಿಮಿಷ ಬಿಟ್ಟು ಅರಿಶಿನ, ಟೊಮೆಟೊ ಹಾಕಿ ಚೆನ್ನಾಗಿ ಬೆರೆಸಿ. ಬಟಾಣಿ ಬೆರೆಸಿ 5 ನಿಮಿಷದ ನಂತರ ನೀರು ಮತ್ತು ಉಪ್ಪು ಹಾಕಿ ಜೊತೆಯಲ್ಲಿಯೇ ಪುಡಿಗಳನ್ನೆಲ್ಲ ಹಾಕಿ ಕೈಯಾಡಿಸಿ.
* ನೀರು ಕುದಿ ಬಂದ ನಂತರ ನೆನೆಸಿಟ್ಟುಕೊಂಡ ಅಕ್ಕಿ ಹಾಕಿ, ಬೇಕಾದರೆ ನಿಂಬೆರಸ ಹಿಂಡಿ. ಕಾಯಿತುರಿ ಹಾಕಿ ಮುಚ್ಚಳ ಮುಚ್ಚಿ. ಒಂದೇ ಏಟಿಗೆ ಅಡುಗೆ ತಯಾರಾಗುತ್ತೆ.
* ಹಪ್ಪಳ ಸಂಡಿಗೆ ಬಾಳಕ ಮೆಣಸಿನಕಾಯಿ ಪಕ್ಕದಲ್ಲಿದ್ದರೆ ಊಟದ ಗಮ್ಮತ್ತು ಹೆಚ್ಚಾಗುತ್ತದೆ.



Click it and Unblock the Notifications
