Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸಬ್ಬಸಿಗೆ ಸೊಪ್ಪಿನ ಚಿತ್ರಾನ್ನ

ಬಿಸಿಬಿಸಿ ಅಡುಗೆ ಮಾಡಿ ಬಡಿಸುವ ಹೆಂಡತಿ ಊರಿಗೆ ಹೋಗಿರಲಿ, ಬಲವಂತ ಬ್ರಹ್ಮಚರ್ಯವಿರಲಿ, ಒಂಟಿ ರೂಮಿನಲಿ ಒಬ್ಬಂಟಿ ಜೀವನ ಸಾಗಿಸುವುದಿರಲಿ, ಅಡುಗೆ ಮಾಡಲು ಬರಲಿ, ಬಿಡಲಿ ಹೊಟ್ಟೆಯನ್ನಂತೂ ಹೇಗಾದರೂ ಮಾಡಿ ತುಂಬಿಸಿಕೊಳ್ಳಲೇಬೇಕು. ಅನ್ನ ಹೇಗೋ ಮಾಡಬಹುದು, ಸಾರು ಮಾಡುವುದು ಯಾರು ಸಾರ್!? ಹಾಗಾದ್ರೆ, ಇನ್ನೇನಿದೆ? ಚಿತ್ರಾನ್ನಕ್ಕಿಂತ ಅಲ್ಟಿಮೇಟಾಗಿರೋ ದಿಢೀರ್ ಅಡುಗೆ ಯಾವುದಿದೆ? ದಿನಾ ಚಿತ್ರಾನ್ನ ಅಂತೀರಾ? ವೇಟ್, ವೇಟ್. ಚಿತ್ರಾನ್ನ ಅಂದ್ರೆ ಹಳದಿ ಚಿತ್ರಾನ್ನ ಮಾತ್ರವಲ್ಲ. ನೂರೆಂಟು ಬಗೆಯ ಚಿತ್ರಾನ್ನ ಮಾಡಬಹುದು. ಸಬ್ಸಿಗೆ (ಸಬ್ಬಸಿಗೆ ಅಂತಾನೂ ಕರೆಯುತ್ತಾರೆ) ಚಿತ್ರಾನ್ನ ಎಂದಾದರೂ ತಯಾರಿಸಿದ್ದಿರಾ? ಇಲ್ಲವಾದರೆ ಇಲ್ಲಿದೆ ಅತ್ಯಂತ ಈಸಿ ಮೆಥಡ್.
ಅತ್ಯಂತ ರುಚಿಕಟ್ಟಾದ ಸಬ್ಬಸಿಗೆ ಚಿತ್ರಾನ್ನದಿಂದ ಹಲವು ರೂಪದ ಲಾಭಗಳೂ ಇವೆ. ಅತ್ಯಂತ ಬೇಗನೆ ತಯಾರಿಸಬಹುದು, ಪ್ರತಿ ದಿನ ತಿಂದರೂ ಬೇಜಾರಾಗುವುದಿಲ್ಲ, ಹಸಿರು ಸೊಪ್ಪಿನಲ್ಲಿ ಕಬ್ಬಿಣದ ಅಂಶ ಜಾಸ್ತಿ, ಹೊಟ್ಟೆ ನೋವಿಗೆ ರಾಮಬಾಣ ಇತ್ಯಾದಿ ಇತ್ಯಾದಿ.
ಬೇಕಾಗುವ ಸಾಮಾನುಗಳು :
1 ಪಾವು ಅಕ್ಕಿ
ಒಂದು ಕಂತೆ ಸಬ್ಸಿಗೆ ಸೊಪ್ಪು
6-7ಒಣ ಮೆಣಸಿನಕಾಯಿ (ತುಂಡು ಮಾಡಿಟ್ಟು ಕೋಳ್ಳಿ.)
2 ಈರುಳ್ಳಿ
1 ಬೆಳ್ಳುಳ್ಳಿ (ನಿಮಗೆ ಬಿಟ್ಟಿದ್ದು)
1 ಕಪ್ ತೆಂಗಿನತುರಿ
ಕೊತ್ತಂಬರಿ ಸೊಪ್ಪು(ಸ್ವಲ್ಪ)
ಮಾಡುವ ವಿಧಾನ : ಮೊದಲು ಅನ್ನಮಾಡಿ(ಉದುರಾಗಿರಲಿ) ಒಂದು ತಟ್ಟೆಯಲ್ಲಿ ಆರಲು ಹಾಕಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲಿಟ್ಟು ಕಾದಮೇಲೆ, ಹಿಂಗು ಸಾಸಿವೆ, ಕರಿಬೇವು, ಒಣ ಮೆಣಸಿನಕಾಯಿ, ಬೆಳ್ಳುಳ್ಳಿ ನಂತರ ಈರುಳ್ಳಿ (ಹೆಚ್ಚಿದ್ದು) ಹೀಗೆ ಒಂದರ ನಂತರ ಒಂದು ಹಾಕಿ ಬಾಡಿಸಿ.
ಮೇಲಿನ ಮಿಶ್ರಣಕ್ಕೆ ಚಿಕ್ಕದಾಗಿ ಹೆಚ್ಚಿ ತೊಳೆದ ಸಬ್ಬಸಿಗೆ ಸೊಪ್ಪನ್ನು ಹಾಕಿ ಸ್ವಲ್ಪ ಹೊತ್ತು ಬಾಡಿಸಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ತೆಂಗಿನ ತುರಿ ಹಾಕಿ ಕಲೆಸಿ ಇಳಿಸಿ. ಅನ್ನದ ಮೇಲೆ ಈ ಪಲ್ಯ, ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲೆಸಿ. ಇಷ್ಟವುಳ್ಳವರು 1 ನಿಂಬೆ ಹಣ್ಣಿನಿಂದ ರಸ ಹಾಕಬಹುದು. ಇದರ ಜೊತೆ ಹಸಿ ಮೂಲಂಗಿ ಅಥವ ಹಸಿ ಗಜ್ಜರಿ ಇದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ.
ಕೊನೆಯ ನುಡಿ : ಸಬ್ಬಸಿಗೆ ಚಿತ್ರಾನ್ನವನ್ನು ಹೆಂಡತಿ ಇದ್ದರೂ ಮಾಡಬಹುದು!



Click it and Unblock the Notifications
