Latest Updates
-
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ!
ಆಹಾ ಎಂಥಾ ಸ್ವಾದ, ಕಟ್ಟಂಬಲಿ ಜೊತೆ ಪಳದ್ಯ

ಈ ಸ್ವಾದಿಷ್ಟ ರೆಸಿಪಿಯನ್ನು ನಮ್ಮ ಮನೆಯಲ್ಲಿ ಶ್ರಾವಣ ಮಾಸದ ಕಡೆಯ ಶನಿವಾರದಂದು ತಪ್ಪದೆ ಮಾಡುತ್ತಾರೆ. ಈ ಖಾದ್ಯವೇ ಅಂದಿನ ವಿಶೇಷವಂತೆ. ಹಾಗಾಗಿ ಕಡೆಯ ಶ್ರಾವಣ ಶನಿವಾರದಂದು ಮನೆಯಲ್ಲಿ ಮಾಡಿದ್ದರು. ಅಮ್ಮನ ಕೈಯಡಿಗೆಯ ರುಚಿಯನ್ನಂತೂ ಕೇಳುವುದೇ ಬೇಡ.
ಇದನ್ನು ತಯಾರಿಸಲು ಕೂಡ ಹೆಚ್ಚು ಸಮಯ ಬೇಕಾಗಿಲ್ಲ. ತಯಾರಿಸುವುದು ಕೂಡ ಅತ್ಯಂತ ಸುಲಭ. ಜೊತೆಗೆ ಪಳದ್ಯ ಅಥವಾ ಮಜ್ಜಿಗೆ ಹುಳಿ ಇದ್ದರಂತೂ ಬಿಸಿಬಿಸಿ ಕಟ್ಟಂಬಲಿ ಹೊಟ್ಟೆಗಿಳಿಸಿದಷ್ಟು ಹಸಿವು ಹೆಚ್ಚುತ್ತಲೇ ಇರುತ್ತದೆ. ಹಲ್ಲಿಲ್ಲದ ಹಿರಿಯರಿಗೆ ಇದು ಹೇಳಿ ಮಾಡಿಸಿದ ತಿನಿಸು. ಕಟ್ಟಂಬಲಿಯನ್ನು ಮಾಡುವ ವಿಧಾನ ತಿಳಿಸುತ್ತೇನೆ.
ಬೇಕಾಗುವ ಪದಾರ್ಥಗಳು
ಅಕ್ಕಿ 1 ದೊಡ್ಡ ಲೋಟ
ಹಸಿ ಕೊಬ್ಬರಿ 1 ಬಟ್ಟಲು
ಹಸಿಮೆಣಸಿನಕಾಯಿ ನಾಲ್ಕು
ಒಗ್ಗರಣೆಗೆ ಎಣ್ಣೆ, ಸಾಸಿವೆ, ಅರಿಷಿಣ
ಉಪ್ಪು
ತಯಾರಿಸುವ ವಿಧಾನ
* ಅಕ್ಕಿಯನ್ನು ನುಚ್ಚಿನಂತೆ ಮಿಕ್ಸಿಯಲ್ಲಿ ಎರಡೇ ಎರಡು ನಿಮಿಷ ಗಿರಿಗಿಟ್ಟಿಸಿಕೊಂಡು ಕುಕ್ಕರಿನಲ್ಲಿ ಬೇಯಿಸಿಟ್ಟುಕೊಳ್ಳಬೇಕು.
* ಕುಕ್ಕರನ್ನು ಆರಲು ಬಿಟ್ಟು, ಒಂದು ದೊಡ್ಡ ಪಾತ್ರೆಯಲ್ಲಿ ತುಸುವೇ ಎಣ್ಣೆ ಹಾಕಿಕೊಂಡು ಸಾಸಿವೆ ಚಟಪಡಿಸಿ, ಅರಿಷಿಣ, ಹಸಿಮೆಣಸಿನಕಾಯಿ ಹಾಕಿ ತಾಳಿಸಿ.
* ಒಗ್ಗರಣೆಗೆ ಬೇಯಿಸಿಟ್ಟುಕೊಂಡ ಅನ್ನವನ್ನು ಸುರಿಯಿರಿ. ಅದಕ್ಕೆ ಹಸಿಕೊಬ್ಬರಿ ಸುರುವಿರಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಇನ್ನಷ್ಟು ನೀರು ಹಾಕಿ ಹತ್ತು ನಿಮಿಷಗಳ ಕಾಲ ಬೇಯಿಸಿ.
* ಇದೇ ಕಟ್ಟಂಬಲಿ. ಇದನ್ನು ಶ್ರಾವಣ ಶನಿವಾರದಂತೆ ಬನಶಂಕರಿ ದೇವಿಗೆ ನೈವೇದ್ಯವಾಗಿಯೂ ಇಡುತ್ತಾರೆ. ಪೂಜೆ ಮುಗಿಯುವ ಹೊತ್ತಿಗೆ ಹೊಟ್ಟೆ ಚುರುಗುಟ್ಟಲೂ ಪ್ರಾರಂಭಿಸಿರುತ್ತದೆ.
* ಊಟದ ಸಮಯ ಹರಡಿದ ಬಾಳೆ ಎಲೆಯಲ್ಲಿ ಇನ್ನಿತರ ಮಾಮೂಲಿ ಐಟಂಗಳನ್ನು ಹೆಚ್ಚು ತಿನ್ನದೆ, ಕಟ್ಟಂಬಲಿಯನ್ನೇ ತುಪ್ಪ ಮತ್ತು ಪಳದ್ಯದ ಜೊತೆ ಹೆಚ್ಚು ಜಮಾಯಿಸಿ. ಮಜ್ಜಿಗೆ ಹುಳಿ ಅಥವಾ ಪಳದ್ಯ ಮಾಡುವುದು ಹೇಗೆ ಅಂತ ಗೊತ್ತು ತಾನೆ?



Click it and Unblock the Notifications
