Latest Updates
-
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ
ಕಾಯಿ ಸಾಸಿವೆ ಚಿತ್ರಾನ್ನ ಸೇವಿಸಿ
ಬಹುಮಂದಿಗೆ ಚಿತ್ರಾನ್ನ ಪ್ರಿಯ. ಇನ್ನು ಕೆಲವರಿಗೆ ಚಿತ್ರಾನ್ನವೆಂದರೆ ಆಗದು. ಬಹಳ ಸುಲಭವಾಗಿ ತಯಾರಿಸಬಹುದಾದ ಚಿತ್ರಾನ್ನ ಒಂದು ರೀತಿ ಬಹು ಜನಪ್ರಿಯ ದೈನಂದಿನಉಪಹಾರ ಎನ್ನಬಹುದು. ಅವಿವಾಹಿತರಿಗಂತೂ ತಂಗಳು ಚಿತ್ರಾನ್ನ ಸವಿಯೋದು ದಿನ್ಯನಿತ್ಯದವಿಷಯವಾಗಿರುತ್ತದೆ. ಚಿತ್ರಾನ್ನ ಅನ್ನೋ ಹೆಸರಿನ ಜತೆಗೆ ನಗರಗಳಲ್ಲಿ ಕಲರ್ ರೈಸ್, ಲೆಮನ್ ರೈಸ್ ಎಂತಲೂ, ಎಲ್ಲೋ ಕೆಲವೆಡೆ ರಾವಣಭಾತ್ ಎಂದು ಚಿತ್ರಾನ್ನಕ್ಕೆ ಕರೆದಿದ್ದನ್ನು ಕೇಳಿದ ನೆನಪು. ಮಾಮೂಲಿ ಚಿತ್ರಾನ್ನದ ಜೊತೆಗೆ ಎಳ್ಳು ಪುಡಿ ಚಿತ್ರಾನ್ನ, ಕಾಯಿಸಾಸಿವೆ ಚಿತ್ರಾನ್ನ, ಮಸಾಲೆ ಚಿತ್ರಾನ್ನ, ನಿಂಬೆ ಹಣ್ಣಿನ ಚಿತ್ರಾನ್ನ ಹೀಗೆ ತರಾವರಿ ಚಿತ್ರಾನ್ನಗಳನ್ನು ಮಾಡಿ ಸವಿಯಬಹುದು.
ಮನಸ್ವಿನಿ, ನಾರಾವಿ
ತಯಾರಿಸಲು ಬೇಕಾದ ಸಾಮಾಗ್ರಿ:
ಅಕ್ಕಿ : 1 ಪಾವು
ಹಸಿತೆಂಗಿನಕಾಯಿ :1 ದೊಡ್ಡ ಬಟ್ಟಲು
ಹಸಿಮೆಣಸಿನಕಾಯಿ :5
ಕೊತ್ತಂಬರಿ ಸೊಪ್ಪು:- 1 ಕಪ್
ಅರಿಶಿನ ಪುಡಿ: -ಕಾಲು ಟೀ ಚಮಚ
ಸಾಸಿವೆ: 2 ಟೀ ಚಮಚ
ಕಡಲೇಕಾಯಿಬೀಜ: 2ಟೀ ಚಮಚ
ಹುಣಸೆ ಹಣ್ಣು : ಅರ್ಧ ನಿಂಬೆ ಗಾತ್ರದ್ದು
ಕಡ್ಲೇಕಾಯಿ ಎಣ್ಣೆ :5 ಟೀ ಚಮಚ
ರುಚಿಗೆ ತಕ್ಕಷ್ಟು ಇಂಗು, ಉಪ್ಪು
ತಯಾರಿಸುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು ಉದುರುದುರಾಗಿ ಅನ್ನ ಮಾಡಿ ಆರಲು ಬಿಡಿ. ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಇಂಗು, ಅರಿಶಿನ, 1 ಚಮಚ ಸಾಸಿವೆ, ಉಪ್ಪು, ಸ್ವಲ್ಪ ಹುಣಸೆಹಣ್ಣು, ಕಾಯಿತುರಿ ಎಲ್ಲವನ್ನು ಮಿಕ್ಸಿಗೆ ಸ್ವಲ್ಪ ನೀರು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಿ..
ಒಗ್ಗರಣೆ: ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ, ಸಾಸಿವೆ ಹಾಕಿ. ಅದು ಚಿಟಗುಟ್ಟ ತೊಡಗಿದಾಗ ಕಡ್ಲೇಬೇಳೆ, ಉದ್ದಿನಬೇಳೆ ಹಾಕಿ ಹುರಿಯಿರಿ ಅದು ಕೆಂಪಗಾದಾಗ ಕಡಲೇಬೀಜ ಹಾಕಿ ಹುರಿಯಿರಿ ನಂತರ ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿರಿ. ಮಿಕ್ಸಿಯಿಂದ ರುಬ್ಬಿದ ಮಿಶ್ರಣವನ್ನು ಒಗ್ಗರಣೆ ಸಾಮಗ್ರಿಗಳ ಜೊತೆ ಬೆರೆಸಿರಿ.ಮಿಶ್ರಣವು ಕುದಿದ ನಂತರ ಅನ್ನದೊಡನೆ ಬೆರೆಸಿ ಸೇವಿಸಬಹುದು.
(ದಟ್ಸ್ ಕನ್ನಡ ಪಾಕಶಾಲೆ)



Click it and Unblock the Notifications
