Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪುದೀನಾ ಆಲೂ ಆನಿಯನ್ ರೈಸ್
ಬೇಕಾಗುವ ವಸ್ತುಗಳು :
ಸಣ್ಣಗೆ ಹೆಚ್ಚಿದ ಪುದೀನಾ -ಒಂದು ಹಿಡಿ
ಸಣ್ಣಗೆ ಹೆಚ್ಚಿದ ಆಲೂಗಡ್ಡೆ -ಒಂದು ಬಟ್ಟಲು
ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ -ಒಂದೂವರೆ ಬಟ್ಟಲು
ಕೊತ್ತಂಬರಿ ಸೊಪ್ಪು -ಒಂದು ಹಿಡಿ
ಅನ್ನ -ಎರಡು ಬಟ್ಟಲು
ಗೋಡಂಬಿ -ಅರ್ಧ ಹಿಡಿ
ಎಣ್ಣೆ -ಒಂದು ಬಟ್ಟಲು
ಮೆಣಸಿನಕಾಯಿ -ಎಂಟರಿಂದ ಹತ್ತು
ನಿಂಬೆ ರಸ ಅಥವಾ ಟೊಮೆಟೊ ರಸ(ಬೇಕು ಅನ್ನಿಸಿದರೆ) -ಅರ್ಧ ಬಟ್ಟಲು
ತುರಿದ ತೆಂಗಿನ ಕಾಯಿ
ಮಾಡುವ ವಿಧಾನ :
* ತುರಿದ ತೆಂಗಿನ ಕಾಯಿ, ಪುದೀನಾ, ಗೋಡಂಬಿ, ಹಸಿಮೆಣಸಿನ ಕಾಯಿಗಳನ್ನು ಎಣ್ಣೆಯಲ್ಲಿ ಕೆಂಪನೆಯ ಬಣ್ಣ ಬರುವ ತನಕ ಹುರಿದು ಕೊಳ್ಳಿ. ಅನಂತರ ಅದನ್ನು ನುಣ್ಣಗೆ ರುಬ್ಬಿ.
* ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಾಯಿಸಿ. ಎಣ್ಣೆ ಕಾದ ನಂತರ ಬೆಳ್ಳುಳ್ಳಿ, ಈರುಳ್ಳಿ, ಆಲೂಗಡ್ಡೆ ಸೇರಿಸಿ ಒಗ್ಗರಣೆ ಹಾಕಿ. ಆಮೇಲೆ ರುಬ್ಬಿ ರೆಡಿಮಾಡಿಕೊಂಡಿರುವ ಮಸಾಲೆ ಹಾಕಿ ಚೆನ್ನಾಗಿ ಕಲಸಿ.
* ನಂತರ ಅನ್ನಕ್ಕೆ ಒಗ್ಗರಣೆ ಮಸಾಲೆ ಸೇರಿಸಿ. ಆಗ ಅವಶ್ಯ ಅನ್ನಿಸಿದರೆ ನಿಂಬುಹಣ್ಣಿನ ರಸ ಅಥವಾ ಟೊಮೆಟೊ ರಸ ಹಾಕಬಹುದು. ಆಮೇಲೆ ಅಂತೀರಾ? ರೆಡಿಯಾಗಿರೋ ನ ರುಚಿ ನೋಡಿ!



Click it and Unblock the Notifications
