Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮೇಕ್ರೋವೇವ್ ನಲ್ಲಿ ಟೊಮೊಟೊ ರೈಸ್ ಟ್ರೈ ಮಾಡಿ

ಬೇಕಾಗುವ ಪದಾರ್ಥಗಳು:
* 4 ಟೊಮೊಟೊ
* 2 ಕಪ್ ಬಾಸುಮತಿ ಅಕ್ಕಿ
* 1 ಈರುಳ್ಳಿ
* 6 ಎಸಳು ಬೆಳ್ಳುಳ್ಳಿ
* ಶುಂಠಿ ಸ್ವಲ್ಪ
* 2 ಹಸಿರು ಮೆಣಸಿನಕಾಯಿ
* 5 ಮೆಣಸು
* ಚೆಕ್ಕೆ 2 ತುಂಡು, ಲವಂಗ 4
* 2 ಏಲಕ್ಕಿ
* 1 ಚಮಚ ಜೀರಿಗೆ ಪುಡಿ
* ತುಪ್ಪ, ಉಪ್ಪು
ಮೈಕ್ರೋವೇವ್ ನಲ್ಲಿ ಟೊಮೊಟೊ ರೈಸ್ ಮಾಡುವ ವಿಧಾನ:
ಅಕ್ಕಿಯನ್ನು ಚೆನ್ನಾಗಿ ತೊಳೆದು ಬಟ್ಟಲಿನಲ್ಲಿ ಅರ್ಧ ಗಂಟೆ ನೆನೆಸಿಡಬೇಕು. ನಂತರ ಟೊಮಟೊವನ್ನು ಚೆನ್ನಾಗಿ ಹಿಸುಕಿ ಒಂದೆಡೆ ಇಟ್ಟುಕೊಳ್ಳಬೇಕು. ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸ್ವಲ್ಪ ತರಿತರಿಯಂತೆ ಪೇಸ್ಟ್ ಮಾಡಬೇಕು.
ಮೈಕ್ರೋವೇವ್ ನಲ್ಲಿಡಬಹುದಾದ ದೊಡ್ಡ ಬಟ್ಟಲಿಗೆ ಸ್ವಲ್ಪ ತುಪ್ಪ ಹಾಕಿ 2 ನಿಮಿಷ ಓವೆನ್ ನಲ್ಲಿ ಕಾಯಿಸಬೇಕು. ಕಾಯಿಸಿದ ತುಪ್ಪಕ್ಕೆ ಮೆಣಸು, ಚೆಕ್ಕೆ, ಲವಂಗ ಮತ್ತು ಏಲಕ್ಕಿ ಹಾಕಿ 2 ನಿಮಿಷ ವಾಸನೆ ಘಮ್ಮೆನ್ನುವಂತೆ ಕಾಯಿಸಬೇಕು. ಪೇಸ್ಟ್ ಮಾಡಿಟ್ಟುಕೊಂಡಿದ್ದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಪೇಸ್ಟನ್ನು ಇದಕ್ಕೆ ಬೆರೆಸಿ ಮತ್ತೆ 2 ನಿಮಿಷ ಓವೆನ್ ನಲ್ಲಿಡಬೇಕು. ಈಗ ಹಿಸುಕಿದ್ದ ಟೊಮೊಟೊಗೆ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಎಲ್ಲವನ್ನೂ ಮಿಶ್ರಣ ಮಾಡಿ 2 ನಿಮಿಷ ಮೈಕ್ರೋವೇವ್ ನಲ್ಲಿಡಬೇಕು.
ಕೊನೆಗೆ ಜೀರಿಗೆ ಪುಡಿ, ಕತ್ತರಿಸಿದ ಹಸಿರು ಮೆಣಸಿನಕಾಯಿ ಮತ್ತು ಅಕ್ಕಿ ಬೆರೆಸಿ ಚೆನ್ನಾಗಿ ಕಲೆಸಿ 2 ನಿಮಿಷ ಓವೆನ್ ನಲ್ಲಿಡಬೇಕು. ನಂತರ 4 ಕಪ್ ನೀರು ಹಾಕಿ ಮುಚ್ಚುಳ ಮುಚ್ಚಿ 16-18 ನಿಮಿಷ 640 ಡಿಗ್ರಿ ಸೆಂಟಿಗ್ರೇಡ್ ನಲ್ಲಿ ಬೇಯಿಸಬೇಕು.
ಈಗ ಟೊಮೊಟೊ ರೈಸ್ ತಿನ್ನಲು ರೆಡಿಯಾಗಿದೆ. ಬೇಕೆಂದರೆ ಇದರ ಮೇಲೆ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಹಾಕಬಹುದು. ತರಕಾರಿ ಗ್ರೇವಿಯೊಂದಿಗೆ ಟೊಮೊಟೊ ರೈಸ್ ಬೆರೆಸಿ ತಿಂದರೆ ಇನ್ನೂ ರುಚಿಕರ.



Click it and Unblock the Notifications
