Latest Updates
-
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ?
ಅವಲಕ್ಕಿ ಪೊಂಗಲ್ ಮತ್ತು ಹುಣಿಸೆ ಗೊಜ್ಜು

ನಾನೇ ಮನೆಯಲ್ಲಿ ಮಾಡಿದ್ದ ಗೊಜ್ಜವಲಕ್ಕಿ ಮತ್ತು ಅವರಿವರ ಮನೆಯಿಂದ ಬಂದ ತಿಂಡಿಗಳನ್ನು ತಿಂದು ರುಚಿಗೆಟ್ಟಿದ್ದ ನಾಲಿಗೆಗೆ ಅವಲಕ್ಕಿ ಪೊಂಗಲ್ ಅಪ್ಯಾಯಮಾನವೆನಿಸಿತು. ಜೊತೆಗಿದ್ದ ಹುಳಿಹುಳಿ ಹುಣಿಸೆ ಗೊಜ್ಜು ಹುಗ್ಗಿಯ ರುಚಿಯನ್ನು ದುಪ್ಪಟ್ಟು ಮಾಡಿತು. ಇದನ್ನು ಹೇಗೆ ಮಾಡುವುದೆಂದು ತಿಳಿದುಕೊಂಡು ನಿಮಗೆ ತಿಳಿಸಿದ್ದೇನೆ. ಇದು ಹೊಸರುಚಿ ಹೌದೋ ಅಲ್ಲವೋ ಗೊತ್ತಿಲ್ಲ, ರುಚಿಯಂತೂ ಸಖತ್ತಾಗಿದೆ. ನೀವೂ ಮಾಡಿ ನೋಡಿ.
ಈ ಸಾಮಗ್ರಿಗಳನ್ನು ಹೊಂದಿಸಿಕೊಳ್ಳಿ
ಗಟ್ಟಿ ಅವಲಕ್ಕಿ 1 ಕಪ್
ಹೆಸರುಬೇಳೆ 1/2 ಕಪ್
ಹೆರೆದ ಒಣ ಕೊಬ್ಬರಿ 3 ಟಿಸ್ಪೂನ್
ಜೀರಿಗೆ
ಮೆಣಸಿನ ಕಾಳು ಅಥವಾ ಮೆಣಸಿನ ಪುಡಿ
ಉಪ್ಪು
ಒಗ್ಗರಣೆಗೆ : ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಇಂಗು
ತಯಾರಿಸುವ ವಿಧಾನ
ಗಟ್ಟಿ ಅಥವಾ ದಪ್ಪ ಅವಲಕ್ಕಿಯನ್ನು ಐದು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ ಒಂದು ತಟ್ಟೆಯಲ್ಲಿ ತೆಗೆದಿಟ್ಟುಕೊಳ್ಳಿ. ಕುಕ್ಕರಿನಲ್ಲಿ ಹೆಸರುಬೇಳೆಯನ್ನು ಬೇಯಿಸಿಕೊಂಡ ನಂತರ ನೆನೆಸಿಟ್ಟ ಅವಲಕ್ಕಿಯನ್ನು ಅದಕ್ಕೆ ಸೇರಿಸಿ ಮತ್ತೆ ಒಲೆಯ ಮೇಲೆ ಕುದಿಯಲು ಇಡಬೇಕು.
ಅದನ್ನು ಕುದಿಯಲು ಬಿಟ್ಟು ಸ್ಟೌವಿನ ಇನ್ನೊಂದು ಒಲೆಯ ಮೇಲೆ ಒಗ್ಗರಣೆಯನ್ನು ತಯಾರಿಸಿಟ್ಟುಕೊಳ್ಳಿ. ಬೇಳೆ ಮತ್ತು ಅವಲಕ್ಕಿ ಹೊಂದಿಕೊಂಡು ಕುದಿಯಲು ಶುರುವಾದ ನಂತರ ಅದಕ್ಕೆ ಜೀರಿಗೆ ಮತ್ತು ಮೆಣಸಿನ ಕಾಳು ಸೇರಿಸಬೇಕು. ಅದಕ್ಕೆ ಒಣಕೊಬ್ಬರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನೇ ಸೇರಿಸಿ ಮೇಲೆ ಒಗ್ಗರಣೆ ಸುರಿಯಿರಿ. ಅಷ್ಟೇ ಅವಲಕ್ಕಿ ಪೊಂಗಲ್ ಅಥವಾ ಅವಲಕ್ಕಿ ಹುಗ್ಗಿ ತಯಾರ್.
ಹುಣಿಸೆಗೊಜ್ಜು ಮಾಡುವ ವಿಧಾನ
ಹುಣಿಸೇ ಹಣ್ಣಿನ ರಸಕ್ಕೆ ಸ್ವಲ್ಪ ಪುಟಾಣಿ ಪುಡಿ, ಉಪ್ಪು, ಖಾರದ ಪುಡಿ, ಬೆಲ್ಲ ಮತ್ತು ಖರ್ಜೂರದ ಪುಡಿಯನ್ನು ಹಾಕಿ ಒಲೆಯ ಮೇಲಿಟ್ಟು ಕುದಿಸಬೇಕು. ಮೊದಲೇ ಒಗ್ಗರಣೆಯನ್ನು ತಯಾರಿಸಿಟ್ಟುಕೊಂಡು ನಂತರ ಇವೆಲ್ಲ ಸೇರಿಸಿ ಕುದಿಸಬಹುದು ಅಥವಾ ಕುದಿದ ನಂತರ ಒಗ್ಗರಣೆ ಸೇರಿಸಬಹುದು.



Click it and Unblock the Notifications
