Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮನೆಬಿರಿಯಾನಿಗೆ ಶರಣಾದ ಬ್ಯಾಂಕಾಕ್ ಬ್ರಹ್ಮಚಾರಿ

ಬೇರೆ ಬೇರೆ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ನಾವು ನಾಲಕ್ಕು ಜನ ಸ್ನೇಹಿತರು ಒಂದಾಗಿ ಗ್ರೇಟರ್ ಬ್ಯಾಂಕಾಕ್ ನಲ್ಲಿ ಫ್ಲ್ಯಾಟ್ ಬಾಡಿಗೆಗೆ ಹಿಡಿದಿದೀವಿ. ಬೆಳಗ್ಗೆ ಟೀ ಕುಡಿದು ಹೊರಟರೆ ಮತ್ತೆ ಎಲ್ಲಾ ಸೇರುವುದು ರಾತ್ರಿನೇ. ಮಧ್ಯಾನ್ಹದ ಊಟ ಆಫೀಸಿನ ಸುತ್ತಮುತ್ತ ಏನು ಸಿಕ್ಕತ್ತೋ ಅದು. ಮುಖ್ಯವಾಗಿ ತಮಿಳರು ಇಟ್ಟಿರುವ ಹೋಟೆಲಿನಲ್ಲಿ ಅನ್ನ ಸಾಂಬಾರ್ ಮತ್ತು ಸಿಲೋನ್ ಪರೋಟ ತಿನ್ನೋದು ಜಾಸ್ತಿ. ರಾತ್ರಿ ಮನೆಗೆ ಬಂದ ನಂತರ ನಮ್ಮ ನಳಪಾಕ ಆರಂಭವಾಗತ್ತೆ. ನಮಗೆ ಹೆಂಗಸರ ರೀತಿ ಅಡುಗೆ ಮಾಡಕ್ಕೆ ಬರಲ್ಲ ಹಾಗೂ ಆದನ್ನು ಸವಿಸ್ತಾರವಾಗಿ ಬರೆದು ತಿಳಿಸುವುದಕ್ಕೆ ಬರುವುದಿಲ್ಲ. ಆದರೂ ಇವತ್ತು ರಾತ್ರಿ ನಾವು ನಾಲಕ್ಕೂ ಜನ ಸೇರಿಕೊಂಡು ನಾವು ಮಾಡುವ ಅಡುಗೆಯನ್ನು ದಟ್ಸ್ ಕನ್ನಡ ಡಾಟ್ ಕಾಮ್ಗೆ ಬರೆಯಕ್ಕೆ ಟ್ರೈ ಮಾಡ್ತಾಯಿದೀವಿ.
ಬೆಂಗಳೂರಿಗೆ ರಜೆಗೆ ಹೋದಾಗ ಮನೆಯಲ್ಲಿ ಎಲ್ಲರೂ ನಮಗೆ ರೇಗಿಸುತ್ತಾರೆ. 'ಏನ್ರೋ ನೀವೆಲ್ಲ ಥೈನಲ್ಲಿ ಹಾವು ಕಪ್ಪೆ ಇಲಿ ಬಿರಿಯಾನಿ ತಿಂತೀರಾ' ಎಂದು. ಆದರೆ ನಮ್ಮ ತೊಂದರೆ ನಮಗೆ ಗೊತ್ತು. ನಾವು ಪ್ಯೂರ್ ಸಸ್ಯಾಹಾರಿಗಳು ಆದರೆ ಕರ್ನಾಟಕದಂತಹ ಸಸ್ಯಾಹಾರಿ ಊಟ ಇಲ್ಲಿನ ಹೋಟೆಲುಗಳಲ್ಲಿ ಸಿಗಲ್ಲ. ನಾವು ಮಾಡಿಕೊಂಡರೆ ಉಂಟು ಇಲ್ಲದಿದ್ದರೆ ಒಣಗಣೇಶ. ಅದಕ್ಕೆ ನಾನು ಮಾಧವನ್ ಪಾರ್ಕ್ ಹತ್ತಿರದ ಜಯನಗರ ಮೂರನೇ ಬ್ಲಾಕಿನಲ್ಲಿರುವ ಸಾರಥಿ ಮೆಟಲ್ಸ್ ಅಂಗಡಿಯಿಂದ ಕೆಲವು ಅಡುಗೆ ಪಾತ್ರೆ ತಂದಿಟ್ಟುಕೊಂಡಿದೀನಿ. ಅದರಲ್ಲಿ ಮೇನ್ ಎಂದರೆ ಪ್ರೆಶರ್ ಕುಕ್ಕರ್. ಈ ಕುಕ್ಕರ್ ಥೈಲ್ಯಾಂಡಿನ ಅನ್ನಪೂರ್ಣೇಶ್ವರಿ ಎಂದರೆ ತಪ್ಪಾಗುವುದಿಲ್ಲ.
ವಾರಕ್ಕೆ ಕಡಿಮೆ ಎಂದರೆ ನಾಲಕ್ಕು ದಿವಸ ರಾತ್ರಿಹೊತ್ತು ನಾವು ಮಾಡುವುದು ವೆಜಿಟಬಲ್ ಬಿರಿಯಾನಿ. ತಪ್ಪಿದರೆ ಚಿತ್ರಾನ್ನ. ನಾವು ಮಾಡುವ ಬಿರಿಯಾನಿ ವಿಧಾನ ಹೀಗಿದೆ: ಇಲೆಕ್ಟ್ರಿಕ್ ಸ್ಟೌವ್ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಸ್ವಲ್ಪ ತುಪ್ಪ ಹಾಕುವುದು. ಅದು ಕಾದ ನಂತರ ಅದಕ್ಕೆ ಒಂದು ಚಮಚ ಶುಂಠಿ ಪೇಸ್ಟ್ ಒಂದು ಚಮಚ ಬೆಳ್ಳುಳ್ಳಿ ಪೇಸ್ಟ್ ಹಾಕುವುದು. ಏಳೋ ಎಂಟೋ ಹಸಿ ಅಥವಾ ಒಣ ಮೆಣಸಿನಕಾಯಿ ಹಾಕುವುದು. ಒಂದು ದಿವಸ ಯಾವ ಮೆಣಸಿನಕಾಯಿಯೂ ಸ್ಟಾಕ್ ಇಲ್ಲದಿದ್ದರಿಂದ ಟೇಬಲ್ ಪೆಪ್ಪರ್ ಪೌಡರ್ ಹಾಕಿದ್ವಿ. ಇಲ್ಲಿಗೆ ಸಮೀಪದ ತರಕಾರಿ ಅಂಗಡಿಯಲ್ಲಿ ಏನಾದರೂ ತರಕಾರಿ ತಂದು ಹೆಚ್ಚಿ ಹಾಕೋದು. ನಾಲಕ್ಕು ಜನಕ್ಕೆ ನಾಲಕ್ಕು ಪ್ಲಾಸ್ಟಿಕ್ ಕಪ್ ಬಸುಮತಿ ಅಕ್ಕಿ ತೊಳೆದು ಹಾಕಿ ಅದಕ್ಕೆ ಡಬ್ಬಲ್ ಪ್ರಮಾಣದ ಎಂಟುಕಪ್ಪು ನೀರು ಬೆರೆಸಿ ಉಪ್ಪು ಹಾಕಿ ಕುಕ್ಕರ್ ಮುಚ್ಚಿ ವೈಟ್ ಇಡೋದು.
ಮೂರು ವಿಸಲ್ ಗೆ ವೆಜಿಟಬಲ್ ಭಾತ್ ಆರ್ ವೆಜೆಟಬಲ್ ಪಲಾವ್ ಆರ್ ವೆಜಿಟಬಲ್ ಬಿರಿಯಾನಿ ರೆಡಿ ಆಗತ್ತೆ. ಕುಕ್ಕರ್ ಆರಿ ತಣ್ಣಗಾಗುವುದರಲ್ಲಿ ಟೂ ಬೈ ಫೋರ್ ವೆಸ್ಟರ್ನ ಬೀರು ಗಂಟಲಿನಲ್ಲಿ ಇಳಿದಿರುತ್ತದೆ. ಊಟ ಮಾಡಿ ಮಲಗಿದರೆ ಮತ್ತೆ ಬೆಳಗ್ಗೆ ಕಚೇರಿಗೆ ಓಡು.
ನಮ್ಮ ಕುಕ್ಕರ್ ಬಿರಿಯಾನಿ ವಾರಕ್ಕೆ ನಾಕೈದು ಸಲ ಆಗೇ ಆಗತ್ತೆ. ಶುಕ್ರವಾರ ಅಥವಾ ಶನಿವಾರ ತುಂಬಾ ದುಬಾರಿ ಹೋಟೆಲು ಪ್ಯಾಪಿ ಕೌ ಹೋಟೆಲಿಗೆ ಹೋಗಿ ಚೆನ್ನಾಗಿ ಊಟ ಜಡಿದು ಬರ್ತೀವಿ. ಹೊರದೇಶಗಳಲ್ಲಿ ಕೆಲಸಮಾಡುವ ಪಕ್ಕಾ ಸಸ್ಯಾಹಾರಿಗಳು ಈ ವೆಬ್ ಸೈಟು ನೋಡಿರಿ. http://gogreentravelgreen.com/green-restaurant-food/10-best-countries-for-vegetarian-or-vegan-travel/ ಇಲ್ಲಿ ನೋಡಿದ ಆನಂತರ Happy Cow Bangkok ಎಂದು ಗೂಗಲ್ ಮಾಡಿದರೆ ಗ್ರೇಟರ್ ಬ್ಯಾಂಕಾಕಿನ ವೆಜ್ ಹೋಟೆಲುಗಳ ವಿಳಾಸ ಸಿಗುತ್ತದೆ. ಪ್ಯಾಪಿ ಕೌಗೆ ವಾರಕ್ಕೆ ಒಂದು ಬಾರಿ ಅಥವಾ ತಿಂಗಳಿಗೆ ಒಂದು ಬಾರಿ ಹೋದರೆ ಕ್ಷೇಮ. ಉಳಿದಂತೆ ನಮ್ಮಂಥ ಬ್ರಹ್ಮಚಾರಿಗಳು ಬಸುಮತಿ ಬಿರಿಯಾನಿಗೆ ಶರಣಾದರೆ ಊಟನೂ ಸೇಫು, ಪರ್ಸೂ ಸೇಫು.



Click it and Unblock the Notifications
