Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬಾಯಿ ಚಪ್ಪರಿಸುವಂತೆ ಮಾಡುವ ಮೆಂತ್ಯೆ ಪುಲಾವ್

ಬೇಕಾಗುವ ಸಾಮಾಗ್ರಿಗಳು:
* ಒಂದು ಬಟ್ಟಲು ಮೆಂತ್ಯೆ ಸೊಪ್ಪು
* ಕೊತ್ತಂಬರಿ, ಒಂದೆರಡು ಪುದೀನ ಎಲೆ
* 100 ಗ್ರಾಂ ಎಣ್ಣೆ
* ಒಗ್ಗರಣೆಗೆ ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಕರಿಬೇವು
* ಒಂದು ಕಪ್ ಎಚ್ಚಿದ ಈರುಳ್ಳಿ, ಒಂದು ಕಪ್ ಟೊಮೆಟೊ
* 4 ಮೆಣಸಿನಕಾಯಿ
* ಚಿಟಿಕೆ ಅರಿಶಿನ, ಚೆಕ್ಕೆ ಲವಂಗದ ಪುಡಿ, ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು.
ಹೀಗೆ ಮಾಡಿ: ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಕರಿಬೇವು, ಕಡಲೆ ಬೇಳೆ, ಉದ್ದಿನಬೇಳೆ ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು. ಆನಂತರ ಚೆನ್ನಾಗಿ ಜಜ್ಜಿಕೊಂಡಿದ್ದ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ ಚೂರು ಹಾಗೂ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಬೇಕು. ಸ್ವಲ್ಪ ಕೆಂಪಗಾದ ನಂತರ ಸಣ್ಣದಾಗಿ ಹೆಚ್ಚಿದ ಮೆಂತ್ಯೆ ಸೊಪ್ಪು ಹಾಗೂ ಸ್ವಲ್ಪ ಕೊತ್ತಂಬರಿ, ಪುದೀನ ಸೊಪ್ಪಿನ ಚೂರುಗಳನ್ನು ಹಾಕಬೇಕು.
5 ನಿಮಿಷ ಆದ ಮೇಲೆ ಟೊಮೆಟೊ ಹಾಕಿ ಹುರಿದುಕೊಳ್ಳಬೇಕು. ಅದಕ್ಕೆ ಅರಿಶಿನ, ಚೆಕ್ಕೆ, ಲವಂಗದ ಪುಡಿಯನ್ನು ಬೆರೆಸಬೇಕು. ಅಳತೆಮಾಡಿಕೊಂಡ ನೀರನ್ನು (ಎರಡು ಗ್ಲಾಸ್ ಅಕ್ಕಿಗೆ ನಾಲ್ಕು ಗ್ಲಾಸ್ ನೀರು) ಪಾತ್ರೆಗೆ ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಬೇಕು. ಅದು ಕುದಿಯಲು ಆರಂಭಿಸಿದ ನಂತರ ತೊಳೆದ ಅಕ್ಕಿಯನ್ನು ಕುದಿಯುವ ನೀರಿಗೆ ಹಾಕಿ ಹದವಾಗಿ ಬೇಯಿಸಿದರೆ ಆಯಿತು. ಕುಕ್ಕರ್ ನಲ್ಲಿ ಮಾಡುವವರು 3 ಕೂಗು ಕೂಗಿಸಿದ ನಂತರ ತೆಗೆದು ಚೆನ್ನಾಗಿ ಬೆರೆಸಿಕೊಂಡರೆ ರುಚಿರುಚಿಯಾದ ಮೆಂತ್ಯ ಪುಲಾವ್ ತಿನ್ನಲು ರೆಡಿ.....



Click it and Unblock the Notifications
