Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪಾಕಶಾಲೆ: ಮುಸುಕಿನ ಜೋಳದ ಪಲಾವ್
ಜೋಳದಿಂದ ತಯಾರಾದ ಹಲವಾರು ಆಹಾರ ಪದಾರ್ಥಗಳು ಇಂದು ಮಾರುಕಟ್ಟೆಗೆ ದಾಂಗುಡಿ ಇಟ್ಟಿವೆ. ಕಾರ್ನ್‌ಫ್ಲೇಕ್ಸ್ ನಂತಹ ಬಣ್ಣಬಣ್ಣದ ಜಾಹೀರಾತುಗಳು ಗ್ರಾಹಕರನ್ನು ಮರುಳುಗೊಳಿಸುತ್ತಿವೆ. ನಾವು ಮನೆಯಲ್ಲೇ ಅದಕ್ಕಿಂತಲೂ ಅಚ್ಚುಕಟ್ಟಾಗಿ ಜೋಳದ ಪಲಾವನ್ನು ತಯಾರಿಸಿಕೊಳ್ಳಬಹುದು. ಅದು ಹೇಗೆ ಅನ್ನುವುದನ್ನು ಬೆಂಗಳೂರಿನ ಶ್ರೀರಕ್ಷಾ ತಿಳಿಸಿದ್ದಾರೆ.
ಬೇಕಾದ ಸಾಮಗ್ರಿಗಳು
ಉದ್ದುದ್ದ ಕಾಳಿನ ಅಕ್ಕಿ (ಅಥವಾ ಬಾಸ್ಮತಿ ಅಕ್ಕಿ): 1 ಕಪ್
ತೆಂಗಿನ ಕಾಯಿ ನೀರು: 2 ಕಪ್
ಎಳೆ ಜೋಳದ ತೆನೆ: 3
ಎಣ್ಣೆ: 2 ½ ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಪಲಾವ್ ಎಲೆ: 1(ಅಥವಾ ದಾಲ್ಚಿನ್ನಿ 2)
ಲವಂಗ: ಸ್ವಲ್ಪ
ರುಬ್ಬಿಟ್ಟುಕೊಳ್ಳಬೇಕಾದ ಪದಾರ್ಥಗಳು
ಕೆಂಪು ಮೆಣಸಿನಕಾಯಿ: 4
ಹಸಿರು ಮೆಣಸಿನಕಾಯಿ: 5
ಗರಂ ಮಸಾಲೆ ಪುಡಿ: ¼ ಚಮಚ
ಪುದಿನ ಸೊಪ್ಪು: ½ ಕಟ್ಟು
ಕೊತ್ತಂಬರಿ ಸೊಪ್ಪು: ಸ್ವಲ್ಪ
ಬೆಳ್ಳುಳ್ಳಿ: 5 ತೊಳೆ
ಶುಂಠಿ: ½ ಇಂಚಿನ ತುಂಡು
ತೆಂಗಿನಕಾಯಿ ತುರಿ: 2 ಚಮಚ
ಮಾಡುವ ವಿಧಾನ
ಮೊದಲು ಅಕ್ಕಿಯನ್ನು ತೊಳೆದು 10 ನಿಮಿಷಗಳ ಕಾಲ ಪಕ್ಕಕ್ಕಿಡಿ. ಅಕ್ಕಿಯನ್ನು ½ ಚಮಚ ತುಪ್ಪದಲ್ಲಿ ಒಂದೆರಡು ನಿಮಿಷ ಹುರಿಯಿರಿ. ಪ್ರೆಷರ್ ಕುಕ್ಕರ್‌ಗೆ ಉಪ್ಪು ಬೆರೆಸಿದ ನೀರನ್ನು ಹಾಕಿ 10 ರಿಂದ 15 ನಿಮಿಷ ಬೇಯಿಸಿ. ಅದು ತಣ್ಣಗಾದ ನಂತರ ಬೀಜಗಳನ್ನು ಬಿಡಿಸಿ ಪಕ್ಕಕ್ಕಿಡಿ.
ನಂತರ ಪ್ರೆಷರ್ ಕುಕ್ಕರಿನಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಪಲಾವ್ ಎಲೆ, ದಾಲ್ಚಿನಿ ಮತ್ತು ಲವಂಗ ಸೇರಿಸಿ ಹುರಿಯಿರಿ. ಈಗ ರುಬ್ಬಿಟ್ಟುಕೊಂಡಿರುವ ಮಸಾಲೆ ಸೇರಿಸಿ. ಘಂ ಎಂದು ವಾಸನೆ ಬರುವವರೆಗೂ ಹುರಿಯಿರಿ.
ನಂತರ ಬೇಯಿಸಿದ ಜೋಳ ಮತ್ತು ತೆಂಗಿನಕಾಯಿ ನೀರನ್ನು ಹಾಕಿ ಮೃದುವಾಗಿ ಬೆರಸಿ. ಅದು ಕುದಿಯಲು ಪ್ರಾರಂಭವಾದಾಗ ಉಪ್ಪು ಮತ್ತು ಅಕ್ಕಿ ಸೇರಿಸಿ. ಚೆನ್ನಾಗಿ ಕಲಸಿ. ಕುಕ್ಕರಿನ ಮುಚ್ಚಳ ಹಾಕಿ. ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಬೇಯಿಸಿ. ಈಗ ಜೋಳದ ಪಲಾವ್ ಸಿದ್ಧವಾಗಿರುತ್ತದೆ. ಬೇಕಿದ್ದರೆ ಹುರಿದ ಗೋಡಂಬಿಯನ್ನು ಅಲಂಕಾರಕ್ಕಾಗಿ ಬಳಸಬಹುದು. ಬಿಸಿಬಿಸಿಯಾಗಿ ಬಡಿಸಿರಿ.



Click it and Unblock the Notifications
