Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ರುಚಿಕರ ಮತ್ತು ಆರೋಗ್ಯಕ್ಕೆ ಹಿತಕರ ಪಾಲಕ್ ರೈಸ್ ರೆಸಿಪಿ

ಬೇಕಾಗುವ ಪದಾರ್ಥಗಳು
* 2 ಕಪ್ ಬೇಯಿಸಿದ ಅನ್ನ
* 1 ಕಪ್ ಪಾಲಕ್ ಸೊಪ್ಪು(ನುಣ್ಣಗೆ ಪೀಸ್ ಮಾಡಿ)
* ಒಂದು ದೊಡ್ಡ ಈರುಳ್ಳಿ
* 3-4 ಮೆಣಸು
* ಕೊಂಚ ದಾಲ್ಚಿನಿ
* ಒಂದೆರಡು ಹಸಿಮೆಣಸಿನಕಾಯಿ
* ಒಂದು ಟೀಸ್ಪೂನ್ ಸಾಸಿವೆ
* ಒಂದು ಟೀಸ್ಪೂನ್ ಜೀರಿಗೆ
* ಅರ್ಧಕಪ್ ಗೋಡಂಬಿ
* ಒಂದೆರಡು ಲವಂಗ
* ಉಪ್ಪು ರುಚಿಗೆ ತಕ್ಕಷ್ಟು
* ಎರಡು ಟೀಸ್ಪೂನ್ ಎಣ್ಣೆ
* ಒಂದು ನಿಂಬೆ
ಹೀಗೆ ಮಾಡಿ
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಅದಕ್ಕೆ ಸಾಸಿವಿ, ಜೀರಿಗೆ, ಮೆಣಸು, ಹಚ್ಚಿದ ಈರುಳ್ಳಿ ಹಾಕಿ. ಕೆಲವು ನಿಮಿಷಗಳ ಕಾಲ ಫ್ರೈಮಾಡಿರಿ. ನಂತರ ಚಿಕ್ಕದಾಗಿ ಹೆಚ್ಚಿದ ಪಾಲಕ್ ಹಾಕಿ ಸ್ವಲ್ಪಹೊತ್ತು ಫ್ರೈಮಾಡಿರಿ. ನಂತರ ಅರ್ಧ ಗ್ಲಾಸ್ ನೀರು ಹಾಕಿ. ನೀರು ಪೂರ್ತಿ ಆವಿಯಾಗುವರೆಗೆ ಕಾಯಿರಿ.
ಲವಂಗ, ದಾಲ್ಚಿನ್ನಿ ಮತ್ತು ಗೊಡಂಬಿಯನ್ನು ಪೇಸ್ಟ್ ಮಾಡಿ. ಪ್ರತ್ಯೇಕ ಬಾಣಲೆಯಲ್ಲಿ ಕೊಂಚ ಎಣ್ಣೆಹಾಕಿ ಫ್ರೈಮಾಡಿ. ಅದನ್ನು ಈ ಹಿಂದೆ ಮಾಡಿದ ಪಾಲಕ್ ಮಿಶ್ರಣದೊಂದಿಗೆ ಹಾಕಿ. ಚೆನ್ನಾಗಿ ಕದಡಿಸಿ ನಂತರ ಒಲೆಯಿಂದ ತೆಗೆದು ತಣಿಯಲು ಬಿಡಿ. ನಂತರ ಪಾಲಕ್ ಮಸಾಲೆಗೆ ಅನ್ನವನ್ನು ಮಿಶ್ರಣ ಮಾಡಿ. ಪಾಲಕ್ ಅನ್ನ ರೆಡಿ.



Click it and Unblock the Notifications
