Latest Updates
-
IND vs NZ ಪಂದ್ಯದ ವೇಳೆ ಜಗಳ ಬೇಡ: ದಂಪತಿಗಳಿಗಾಗಿ ಇಲ್ಲಿದೆ 12 ನಿಮಿಷಗಳ ಮ್ಯಾಜಿಕ್ ಒಪ್ಪಂದ! -
ದೆಹಲಿ ಮಾಲಿನ್ಯದ ಭೀತಿ: ₹1,500 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಮಾಡಿ 'DIY' ಏರ್ ಪ್ಯೂರಿಫೈಯರ್! -
ಕೇವಲ 40 ರೂಪಾಯಿಯಲ್ಲಿ ಪೌಷ್ಟಿಕ ಊಟ: ಪ್ರೋಟೀನ್ ಮತ್ತು ಐರನ್ ಹೆಚ್ಚಿಸುವ ಬೆಸ್ಟ್ ಡಯಟ್ ಪ್ಲಾನ್ ಇಲ್ಲಿದೆ! -
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ರೀಲೋಡೆಡ್: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಭರ್ಜರಿ ಡಿಸ್ಕೌಂಟ್! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ
ಈ ಅಕ್ಕಿಹಿಟ್ಟಿನ ಪೇಡಾ ತಿಂದು, ಹೊಸವರ್ಷವನ್ನು ಸ್ವಾಗತಿಸಿ
ಹೊಸವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಹೊಸತನವನ್ನು ಸ್ವಾಗತಿಸಲು ಎಲ್ಲೆಡೆ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದೆ. ಹೊಸವರ್ಷದಂದು, ಸಿಹಿ ಮಾಡಿ, ಸ್ವಾಗತಿಸಬೇಕೆಂದುಕೊಂಡವರಿಗೆ ನಾವಿಂದು ಸರಳವಾದ ಸಿಹಿತಿಂಡಿಯೊದನ್ನು ತಿಳಿಸಿಕೊಡಲಿದ್ದೇವೆ.

ಪೇಡಾದಲ್ಲಿ ತರಾವರಿ ವಿಧಗಳಿದ್ದು, ಪ್ರತಿಯೊಬ್ಬರಿಗೂ ಇಷ್ಟವಾಗುವ ಸಿಹಿತಿಂಡಿ ಅಂದರೆ, ತಪ್ಪಾಗಲ್ಲ. ಅದಕ್ಕಾಗಿ ನಾವಿಂದು, ಸರಳವಾಗಿ ಅಕ್ಕಿ ಹಿಟ್ಟಿನಿಂದ ಪೇಡಾ ಹೇಗೆ ತಯಾರು ಮಾಡುವುದು ಎಂಬುದನ್ನು ವಿವರಿಸಲಿದ್ದೇವೆ. ಇದು ದಿಢೀರ್ ಆಗಿ ತಯಾರಾಗುವಂತಹ ರೆಸಿಪಿಯಾಗಿದ್ದು, ಯಾವುದೇ ಹಬ್ಬ-ಹರಿದಿನ ಅಥವಾ ಅತಿಥಿಗಳು ಮನೆಗೆ ಭೇಟಿಕೊಟ್ಟಾಗ ಸಿದ್ಧಪಡಿಸಬಹುದು.
ಅಕ್ಕಿಹಿಟ್ಟಿನ ಪೇಡಾ ಮಾಡುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ:
Recipe By: Shreeraksha
Recipe Type: Snacks
Serves: 2
-
ಬೇಕಾಗುವ ಪದಾರ್ಥಗಳು:
1 ಕಪ್ ಅಕ್ಕಿ ಹಿಟ್ಟು
1 ಕಪ್ ಬೆಲ್ಲ
1 ಕಪ್ ನೀರು
1 ಕಪ್ ತೆಂಗಿನ ಹಾಲು
¼ ಟೀಸ್ಪೂನ್ ಏಲಕ್ಕಿ ಪುಡಿ
2 ಟೀಸ್ಪೂನ್ ತುಪ್ಪ
-
ತಯಾರಿಸುವ ವಿಧಾನ:
ಮೊದಲನೆಯದಾಗಿ, ಬಾಣಲೆಯಲ್ಲಿ 1 ಕಪ್ ಅಕ್ಕಿ ಹಿಟ್ಟನ್ನು ಹಾಕಿ, ಹಸಿ ಸುವಾಸನೆ ಹೋಗುವವರೆಗೆ ಕಡಿಮೆ ಉರಿಯಲ್ಲಿ ಹುರಿದು, ಪಕ್ಕಕ್ಕೆ ಇಡಿ.
ದೊಡ್ಡ ಕಡಾಯಿಯಲ್ಲಿ 1 ಕಪ್ ಬೆಲ್ಲ ಮತ್ತು 1 ಕಪ್ ನೀರು ಹಾಕಿ, ಬೆಲ್ಲವನ್ನು ಚೆನ್ನಾಗಿ ಕರಗಿಸಿ.
ಬೆಲ್ಲವು ಸಂಪೂರ್ಣವಾಗಿ ಕರಗಿದ ನಂತರ, 1 ಕಪ್ ತೆಂಗಿನ ಹಾಲು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಕುದಿಸಿ.
ಈಗ ಈ ಮಿಶ್ರಣಕ್ಕೆ ಹುರಿದ ಅಕ್ಕಿ ಹಿಟ್ಟು ಸೇರಿಸಿ, ಮಿಶ್ರಣವು ದಪ್ಪವಾಗುವವರೆಗೆ,ಉಂಡೆಗಟ್ಟದಂತೆ ನಿರಂತರವಾಗಿ ಮಿಕ್ಸ್ ಮಾಡಿ.
ಮುಂದೆ, ಇದಕ್ಕೆ ¼ ಟೀಸ್ಪೂನ್ ಏಲಕ್ಕಿ ಪುಡಿ ಮತ್ತು 2 ಟೀಸ್ಪೂನ್ ತುಪ್ಪ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
ಈ ಮಿಶ್ರಣವನ್ನು ಒಂದು ಬಟ್ಟಲಿಗೆ ವರ್ಗಾಯಿಸಿ, ಸ್ವಲ್ಪ ತಣ್ಣಗಾಗಲು ಬಿಡಿ.
ಮಿಶ್ರಣವು ಇನ್ನೂ ಬೆಚ್ಚಗಿರುವಾಗ, ಪೇಡಾದ ಅಚ್ಚು ಬಳಸಿ, ನಿಮಗೆ ಬೇಕಾದಂತೆ ತಯಾರಿಸಿ.
ತಿನ್ನುವ ಮೊದಲು ಪೇಡಾವನ್ನು 1 ಗಂಟೆ ಫ್ರಿಜರ್ನಲ್ಲಿಡಿ
ಅಗತ್ಯವಿದ್ದರೆ ಬೀಜಗಳಿಂದ ಅಲಂಕರಿಸಿ, ಅಕ್ಕಿ ಪೇಡಾವನ್ನು ಆನಂದಿಸಿ.
- People - 2
- ಕ್ಯಾಲೋರಿಗಳು - 104 ಕೆ.ಸಿ.ಎಲ್
- ಕೊಬ್ಬು - 4 ಗ್ರಾಂ
- ಪ್ರೋಟೀನ್ - 1 ಗ್ರಾಂ
- ಕಾರ್ಬೋಹೈಡ್ರೇಟ್ಗಳು - 17 ಗ್ರಾಂ



Click it and Unblock the Notifications
