Latest Updates
-
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ
ರೆಸಿಪಿ ಟಿಪ್ಸ್: ಪೂರಿ ಚೆನ್ನಾಗಿ ಉಬ್ಬಿಕೊಂಡು, ಗರಿಗರಿಯಾಗಿರಲು ಯಾವ ಸಾಮಗ್ರಿ ಹಾಕಬೇಕು?
ನೀವು ರೆಸ್ಟೋರೆಂಟ್‌ಗಳಲ್ಲಿ ಪೂರಿ ಸವಿಯುವಾಗ ಅದು ಬಾಲ್ ರೀತಿ ಉಬ್ಬಿಕೊಂಡು ಅಷ್ಟೇ ತೆಳುವಾಗಿ ಇರುತ್ತದೆ. ಅದನ್ನು ಮುರಿದು ಬಾಯಿಗೆ ಹಾಕುವಾಗ ತುಂಬಾ ಚೆನ್ನಾಗಿರುತ್ತದೆ. ಅಲ್ಲದೆ ಉಬ್ಬಿಕೊಂಡಿರುವ ಪೂರಿ ಗರಿಗರಿಯಾಗಿರುತ್ತದೆ.
ಅದನ್ನು ತಿನ್ನುವಾಗ ಅರೇ ನಮ್ಮ ಮನೆಯಲ್ಲಿ ಮಾಡುವಾಗ ಪೂರಿ ಏಕೆ ಇಷ್ಟೊಂದು ದೊಡ್ಡ ಗಾತ್ರದಲ್ಲಿ ಉಬ್ಬಿ ಬರಲ್ಲ ಎಂದು ಅನಿಸುತ್ತೆ. ಆದರೆ ಪೂರಿ ಉಬ್ಬಿ ಬರಲು ನೀವೇನು ಮಾಡಬೇಕೆಂಬ ಟಿಪ್ಸ್ ನೀಡಿದ್ದೇವೆ ನೋಡಿ:

ಪೂರಿಗೆ ಹಿಟ್ಟು
ನೀವು ಮೈದಾ ಅಥವಾ ಗೋಧಿ ಹಿಟ್ಟು ಬಳಸಬಹುದು. ಅದನ್ನು ಒಂದು ಬೌಲ್‌ನಲ್ಲಿ ಹಾಕಿ
ಅದರಕ್ಕೆ ನೀರು, ಸ್ವಲ್ಪ ಉಪ್ಪು ಸೇರಿಸಿ ಕಲೆಸಿ. ಹೀಗೆ ಕಲೆಸುವಾಗ ಹಿಟ್ಟು ತುಂಬಾ
ನೀರಾಗಬಾರದು ಅಥವಾ ತುಂಬಾ ಗಟ್ಟಿಯಾಗಲೂ ಇರಬಾರದು, ಸ್ವಲ್ಪ ಗಟ್ಟಿಯಾಗಿ ಇರಬೇಕು.
ನೀವು ಹಿಟ್ಟು ಕಲೆಸುವಾಗ ದೊಡ್ಡ ಚಮಚದಲ್ಲಿ 1 ಚಮಚ ಸೂಚಿ ರವೆ ಸೇರಿಸಬೇಕು.
ಇದನ್ನು ಸೇರಿಸದರೆ ಪೂರಿ ತುಂಬಾನೇ ಗರಿಗರಿಯಾಗಿ ಬರುತ್ತದೆ.
ನೀವು ಹಿಟ್ಟನ್ನು ಚೆನ್ನಾಗಿ ಕಲೆಸಬೇಕು, ಒಂದು ವೇಳೆ ಹಿಟ್ಟು ತುಂಬಾ
ಗಟ್ಟಿಯಾಗಿದ್ದರೆ 1 ಚಮಚ ನೀರು ಸೇರಿಸಿ ಕಲೆಸಿ.
* ಹಿಟ್ಟು ಕಲೆಸಿದ ಮೇಲೆ ಒಂದು ಅಥವಾ ಎರಡು ಚಮಚ ಎಣ್ಣೆ ಸೇರಿಸಿ 5-10 ನಿಮಿಷ
ಇಡಿ.
* ಹಿಟ್ಟು ಕಲೆಸಿದ ಮೇಲೆ ತುಂಬಾ ಹೊತ್ತು ಇಡಬೇಡಿ. 5-10 ನಿಮಿಷ ಮಾತ್ರ ಇಟ್ಟರೆ
ಸಾಕು.
* ಹಿಟ್ಟನ್ನು ತಟ್ಟುವಾಗ ಸ್ವಲ್ಪ ಎಣ್ಣೆ ಹಾಕಿ ಕಲೆಸಿ
ಯಾವ ಎಣ್ಣೆ ಪೂರಿ ಮಾಡಲು ಒಳ್ಳೆಯದು?
ಪೂರಿ ಮಾಡುವಾಗ ನೀವು ಬೇಗನೆ ಹೊಗೆ ಬರದ ಎಣ್ಣೆಯನ್ನು ಬಳಸಿದರೆ ಒಳ್ಳೆಯದು,
ಆದ್ದರಿಂದ ಸೂರ್ಯಕಾಂತಿ ಎಣ್ಣೆ ಅಥವಾ ರೈಸ್ ಬ್ರಾನ್ ಬಳಸುವುದು ಒಳ್ಳೆಯದು.
ಎಣ್ಣೆ ಸಿಡಿಯದಿರಲು ಟಿಪ್ಸ್
ನೀವು ತಟ್ಟಿದ ಹಿಟ್ಟನ್ನು ಎಣ್ಣೆಗೆ ನೇರವಾಗಿ ಹಾಕಬೇಡಿ, ಹಾಗೆ ಮಾಡಿದರೆ ಎಣ್ಣೆ
ಸಿಡಿಯುವ ಅಪಾಯ ಇದೆ, ಆದ್ದರಿಂದ ಕಡಾಯಿ ಬಳಿ ಜಾರಿಸಿ.
ಬೇಕಾಗುವ ಸಾಮಗ್ರಿ
2 ಕಪ್ ಗೋಧಿ ಹಿಟ್ಟು
1/2 ಚಮಚ ಸೂಜಿ ರವೆ
1/2 ಚಮಚ ಉಪ್ಪು
1/2 ಕಪ್ ನೀರು +ಬೇಕಿದ್ದರೆ ಇನ್ನು ಸ್ವಲ್ಪ ಸೇರಿಸಿ
2 ಕಪ್ ಎಣ್ಣೆ
ಯಮ್ಮೀ ಸ್ನ್ಯಾಕ್ಸ್ ರೆಸಿಪಿ: ಮೃದುವಾದ ಬಾಳೆಹಣ್ಣಿನ ಬೋಂಡಾ, ಆಹಾ ಸವಿದಷ್ಟೂ ಸಾಲದು
ಮಾಡುವ ವಿಧಾನ
* ನೀವು ಗೋಧಿ, ರವೆ ಹಾಗೂ ಉಪ್ಪು ಈ ಮೂರು ಸಾಮಗ್ರಿ ಒಂದು ದೊಡ್ಡ ಕಪ್‌ನಲ್ಲಿ
ಹಾಕಿ.
* ನಂತರ ನೀರು (ಬಿಸಿ ನೀರು) ಹಾಕಿ ಕಲೆಸಿ, ಹಿಟ್ಟನ್ನು ಚೆನ್ನಾಗಿ ಕಲೆಸಿ, ನಂತರ
5-10ನಿಮಿಷ ಬಿಡಿ.
* ನಂತರ ಚಿಕ್ಕ-ಚಿಕ್ಕ ಉಂಡೆಗಳನ್ನು ಕಟ್ಟಿ
* ನಂತರ ಪ್ಯಾನ್‌ಗೆ ಎಣ್ಣೆ ಹಾಕಿ ಕುದಿಸಿ.
* ನಂತರ ಪೂರಿ ಹಾಕಿ, ಅದನ್ನು ಸೌಟ್‌ನಿಂದ ಪ್ರೆಸ್ ಮಾಡಿ, ಆವಾಗ ನೀವು ಉಬ್ಬಿ
ಬರುತ್ತದೆ.
* ನಂತರ ಮಗುಚಿ, ಈ ರೀತಿ ಮಾಡಿದರೆ ಪೂರಿ ಊದಿಕೊಂಡು ಬರುತ್ತದೆ.



Click it and Unblock the Notifications