Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಯಮ್ಮೀ ಸ್ನ್ಯಾಕ್ಸ್ ರೆಸಿಪಿ: ಮೃದುವಾದ ಬಾಳೆಹಣ್ಣಿನ ಬೋಂಡಾ, ಆಹಾ ಸವಿದಷ್ಟೂ ಸಾಲದು
ಸಂಜೆಗೆ ಸ್ನ್ಯಾಕ್ಸ್‌ಗೆ ರುಚಿಕರವಾದ ತಿಂಡಿ ಮಾಡಬೇಕೆಂದಿದ್ದೀರಾ? ಹಾಗಾದರೆ ಬಾಳೆಹಣ್ಣಿನ ಬೋಂಡಾ ಏಕೆ ಟ್ರೈ ಮಾಡಬಾರದು? ಬಾಳೆಹಣ್ಣಿನ ಬೋಂಡಾ ತುಂಬಾನೇ ರುಚಿಯಾಗಿರುತ್ತದೆ, ಅಲ್ಲದೆ ಸುಲಭವಾಗಿ ಮಾಡಬಹುದು. ಇನ್ನು ತುಂಬಾ ಹಣ್ಣಾದ ಬಾಳೆಹಣ್ಣಿದ್ದರೆ ಅದನ್ನು ಬಳಸಿಯೂ ಈ ಬೋಂಡಾ ಮಾಡಬಹುದು. ನಾವಿಲ್ಲಿ ಬಾಳೆಹಣ್ಣಿನ ಬೋಂಡಾದ ಸಿಂಪಲ್ ರೆಸಿಪಿ ನಿಡಿದ್ದೇವೆ ನೋಡಿ.

ಬೇಕಾಗುವ ಸಾಮಗ್ರಿ
6 ಚಿಕ್ಕ ಬಾಳೆಹಣ್ಣು
1ಕಪ್ ಮೈದಾ
1/2 ಕಪ್ ಸಕ್ಕರೆ
1/4ಚಮಚ ಅಡುಗೆ ಸೋಡಾ
1/2ಚಮಚ ಏಲಕ್ಕಿ
ಮಾಡುವ ವಿಧಾನ
* 6 ಚಿಕ್ಕ ಬಾಳೆಹಣ್ಣಿನ ಸಿಪ್ಪೆ ಸುಲಿಯಿರಿ
* ನಂತರ ಅದನ್ನು ಚಿಕ್ಕದಾಗಿ ಕತ್ತರಿಸಿ 1/2 ಕಪ್ ಸಕ್ಕರೆ ಹಾಕಿ ರುಬ್ಬಿ
* ನಂತರ ಮಿಕ್ಸಿಂಗ್ ಬೌಲ್‌ನಲ್ಲಿ ಬಾಳೆಹಣ್ಣಿನ ಪೇಸ್ಟ್, 1 ಕಪ್ ಮೈದಾ, 1/4
ಚಮಚ ಅಡುಗೆ ಸೋಡಾ, 1/2 ಚಮಚ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ.
* ಮಿಕ್ಸ್ ಮಾಡುವಾಗ ಗಂಟು ಕಟ್ಟಬಾರದು, ಚೆನ್ನಾಗಿ ಮಿಕ್ಸ್ ಮಾಡಿ.
* ನಂತರ ಬಾಣಲೆಗೆ ಎಣ್ಣೆ ಹಾಕಿ ಕುದಿಸಿ
* ನಂತರ ಎಣ್ಣೆ ಕಾಯುವಾಗ ಕೈಯಿಂದ ಸ್ವಲ್ಪ ಹಿಟ್ಟು ತೆಗೆದು ಎಣ್ಣೆಯಲ್ಲಿ ಹಾಕಿ, ಆ
ಹಿಟ್ಟು ಚಿಕ್ಕ ಉಂಡೆಗಳಾಗುತ್ತದೆ.
* ಉಂಡೆ ಕಂದು ಬಣ್ಣ ಬರುವಾಗ ಎಣ್ಣೆಯಿಂದ ತೆಗೆಯಿರಿ.
ಎಳನೀರಿನ ಐಸ್‌ಕ್ರೀಂ: ಸುಲಭವಾಗಿ ತಯಾರಿಸಬಹುದು ಈ ಆರೋಗ್ಯಕರ ಐಸ್‌ಕ್ರೀಂ
ನೀವು ಈ ಬೋಂಡಾವನ್ನು ಮಾಡಿದರೆ ತುಂಬಾನೇ ಮೃದುವಾಗಿರುವುದರಿಂದ ಆಗಷ್ಟೇ ಹಲ್ಲು ಮೂಡುವ ಮಕ್ಕಳಿಂದ ಹಿಡಿದು ಹಲ್ಲು ಉದುರಿರುವ ಹಿರಿ ಜೀವಗಳು ಕೂಡ ಚಪ್ಪರಿಸಿಕೊಂಡು ಸವಿಯುತ್ತಾರೆ. ಸಕ್ಕರೆ ಬೆಲ್ಲ ಬಳಸಿದರೆ ಸಾಕೇ ಎಂದು ನೀವು ಕೇಳುವುದಾದೆ ನೀವು ಬೆಲ್ಲವನ್ನು ಕೂಡ ಬಳಸಬಹುದು. ಅಲ್ಲದೆ ಮನೆಯಲ್ಲಿ ತುಪ್ಪ ಅಧಿಕವಿದ್ದರೆ ತುಪ್ಪದಲ್ಲಿ ಕರಿದರೆ ಅಂತೂ ಇನ್ನೂ ಸ್ವಾದಿಷ್ಟವಾಗಿರುತ್ತದೆ.
ಸೂಚನೆ: ಈ ಬೋಂಡಾ ಮಾಡುವಾಗ ಹಿಟ್ಟನ್ನು ಎಣ್ಣೆಗೆ ಬಿಡುವಾಗ ಜಾಗ್ರತೆವಹಿಸಿ, ಇಲ್ಲದಿದ್ದರೆ ಬಿಸಿ ಎಣ್ಣೆ ರಟ್ಟಿ ಕೈ ಸುಡುವ ಸಾಧ್ಯತೆ ಈ ಬಗ್ಗೆ ಜಾಗ್ರತೆವಹಿಸಿ ಅಷ್ಟೇ.



Click it and Unblock the Notifications
