Just In
Don't Miss
- News
ನಮಗೆ ಮಾತ್ರ ಏಕೆ ಕೋವ್ಯಾಕ್ಸಿನ್ ಲಸಿಕೆ?: ಸರ್ಕಾರಕ್ಕೆ ನಿವಾಸಿ ವೈದ್ಯರ ಪ್ರಶ್ನೆ
- Movies
ಸುದೀಪ್ 'ಫ್ಯಾಂಟಮ್' ಸಿನಿಮಾದ ಟೈಟಲ್ ಬದಲಾವಣೆ: ನಿರ್ದೇಶಕರು ಹೇಳಿದ್ದೇನು?
- Sports
ಭಾರತ vs ಆಸ್ಟ್ರೇಲಿಯಾ: ಅಂತಿಮ ಟೆಸ್ಟ್ ಪಂದ್ಯ ಗೆಲ್ಲಲು ಕಾರಣವಾದ ಐದು ಅಂಶಗಳು
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರೆಸಿಪಿ: ಸವಿರುಚಿಯ ಬಾಳೆಕಾಯಿ ಕಟ್ಲೇಟ್
ನೀವು ಬಾಳೆಕಾಯಿ ಚಿಪ್ಸ್ ಟ್ರೈ ಮಾಡಿರುತ್ತೀರಿ, ಆದರೆ ಬಾಳೆಕಾಯಿ ಕಟ್ಲೇಟ್ ಟ್ರೈ ಮಾಡಿದ್ದೀರಾ? ಇಲ್ಲ ಅಂದರೆ ಈ ಕಟ್ಲೇಟ್ ಒಮ್ಮೆ ಟ್ರೈ ಮಾಡಿ, ತುಂಬಾ ರುಚಿಯಾಗಿರುತ್ತೆ. ಇದನ್ನು ಮಾಡುವ ವಿಧಾನ ಸುಲಭವಾಗಿದ್ದು ರೆಸಿಪಿ ಇಲ್ಲಿ ನೀಡಲಾಗಿದೆ.
ಈ ಕಟ್ಲೇಟ್ ತಿನ್ನುವುದರಿಂದ ದೇಹಕ್ಕೆ ಅಗ್ಯತವಿರುವ ನಾರಿನಂಶ, ವಿಟಮಿನ್‌ಗಳು, ಖನಿಜಾಂಶ ಎಲ್ಲವೂ ದೊರೆಯುವುದು. ಇದನ್ನು ಉಪವಾಸದ ಸಮಯದಲ್ಲಿ ಕೂಡ ಮಾಡಿ ತಿನ್ನಬಹುದು.
Recipe By: ಮೀನಾ ಭಂಡಾರಿ
Recipe Type: ಸ್ನ್ಯಾಕ್ಸ್
Serves: 4
-
ಬೇಕಾಗುವ ಸಾಮಗ್ರಿ
ಬಾಳೆಕಾಯಿ 2
ಬೇಯಿಸಿದ ಆಲೂಗಡ್ಡೆ 2
ಕಲ್ಲುಪ್ಪು (ರುಚಿಗೆ ತಕ್ಕಷ್ಟು)
ಜೀರಿಗೆ ಪುಡಿ 1 ಚಮಚ
ಹಸಿ ಮೆಣಸಿನಕಾಯಿ 2-3(ಚಿಕ್ಕದಾಗಿ ಕತ್ತರಿಸಿದ್ದು)
ಕೊತ್ತಂಬರಿ ಸೊಪ್ಪು ಅರ್ಧ ಕಪ್
ತುಪ್ಪ 1 ಚಮಚ +2 ಚಮಚ
-
ಮಾಡುವುದು ಹೇಗೆ?
* ಬಾಳೆಕಾಯಿಯನ್ನ ಎರಡು ಭಾಗ ಮಾಡಿ ಬೇಯಿಸಿ.
* ನಂತರ ಅದರ ಸಿಪ್ಪೆ ಸುಲಿದು ತುರಿಯಿರಿ.
* ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ಸುಲಿದು ಅದನ್ನು ಕೂಡ ತುರಿಯಿರಿ.
* ತುರಿದ ಬಾಳೆಕಾಯಿ ಹಾಗೂ ಆಲೂಗಡ್ಡೆಯನ್ನು ಮಿಶ್ರ ಮಾಡಿ, ಅದಕ್ಕೆ ತುಪ್ಪ, ಹಸಿ ಮೆಣಸಿನಕಾಯಿ, ಕಲ್ಲುಪ್ಪು, ಜೀರಿಗೆ ಪುಡಿ , ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರ ಮಾಡಿ.
*ಈಗ ಮಿಶ್ರಣದಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿ, ಕಟ್ಲೇಟ್ ಆಕಾರಕ್ಕೆ ತಟ್ಟಿ 5 ನಿಮಿಷ ಫ್ರಿಡ್ಜ್‌ನಲ್ಲಿಡಿ.
* ಈಗ ತವಾ ಬಿಸಿ ಮಾಡಿ ಅದಕ್ಕೆ ಎರಡು ಚಮಚ ತುಪ್ಪ ಹಾಕಿ ಕಟ್ಲೇಟ್ ಹಾಕಿ. ಕಡಿಮೆ ಉರಿಯಲ್ಲಿ 5-6 ನಿಮಿಷ ಫ್ರೈ ಮಾಡಿ ನಂತರ ಮತ್ತೊಂದು ಬದಿ ಕೂಡ ಅಷ್ಟೇ ಹೊತ್ತು ಫ್ರೈ ಮಾಡಿದರೆ ಬಾಳೆಕಾಯಿ ಕಟ್ಲೇಟ್ ರೆಡಿ.
- ಈ ಕಟ್ಲೇಟ್‌ಗೆ ಉಪವಾಸದ ದಿನ ಹೊರತು ಪಡಿಸಿ ಉಳಿದ ದಿನದಲ್ಲಿ ಆದರೆ ಈರುಳ್ಳಿ ಕೂಡ ಹಾಕಬಹುದು.
- ಸರ್ವ್: - 1 ಪ್ಲೇಟ್
- ಕ್ಯಾಲೋರಿ: - 109ಕ್ಯಾ
- ಕೊಬ್ಬು: - 4.8 ಗ್ರಾಂ
- ಕಾರ್ಬ್ಸ್: - 16 ಗ್ರಾಂ
- ನಾರಿನಂಶ: - 4.2 ಗ್ರಾಂ