Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಗುಜರಾತ್ ಸ್ಪೆಷಲ್ ರವಾಧೋಕ್ಲಾ ಮಾಡುವ ವಿಧಾನ ನಿಮಗಾಗಿ
ಸುಲಭವಾಗಿ ತಯಾರಿಸಬಹುದಾದ ರವಾ ಧೋಕ್ಲಾ ಗುಜರಾತಿನ ಸರ್ವಕಾಲಿಕ ತಿಂಡಿ. ರಾಜ್ಯದ ಪ್ರತಿ ಭಾಗಗಳಲ್ಲಿ ಹೆಸರುವಾಸಿಯಾದ ತಿಂಡಿ. ಮೃದುವಾದ ಹಾಗೂ ಉತ್ತಮ ರುಚಿಯನ್ನು ಹೊಂದಿರುವ ಈ ತಿಂಡಿಯು ಸಸ್ಯಹಾರಿಯ ಖಾದ್ಯವಾಗಿದೆ. ಇದನ್ನು ದೇಶದಾದ್ಯಂತ ತಯಾರಿಸಲಾಸುತ್ತಾರೆ. ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಪೋಷಣೆಯನ್ನು ನೀಡುತ್ತದೆ. ಇದನ್ನು ಮುಂಜಾನೆಯ ಗಟ್ಟಿ ತಿಂಡಿಯನ್ನಾಗಿ ಅಥವಾ ಸಂಜೆ ಹೊತ್ತಿನ ಲಘು ತಿಂಡಿಯನ್ನಾಗಿಯೂ ಸವಿಯಬಹುದು. ಒಂದು ಕಪ್ ಟೀ ಅಥವಾ ಕಾಫಿ ಜೊತೆಗೆ ಸವಿಯಲು ಅದ್ಭುತವಾದ ಆಯ್ಕೆಯಾಗಿದೆ. ಇಲ್ಲಿ ಸುಲಭವಾಗಿ ಗುಜರಾತ್ ಸ್ಪೆಷಲ್ ಧೋಕ್ಲಾ ತಯಾರಿಸುವ ವಿಧಾನವನ್ನು ಹೇಳಲಾಗಿದೆ.

Recipe By: Shreeraksha
Recipe Type: Vegetarian
Serves: Q
-
ಬೇಕಾಗುವ ಸಾಮಗ್ರಿಗಳು:
1 ಕಪ್ ರವೆ
1 ಕಪ್ ಗಟ್ಟಿ ಮೊಸರು
1 1/2 ಚಮಚ ಸಕ್ಕರೆ
ಕೊತ್ತಂಬರಿ ಸೊಪ್ಪು
ಅಗತ್ಯಕ್ಕೆ ತಕ್ಕಷ್ಟು ಸಂಸ್ಕರಿಸಿದ ಎಣ್ಣೆ
ಹಸಿಮೆಣಸಿನಕಾಯಿ
ಕರಿಬೇವು
ಅಗತ್ಯಕ್ಕೆ ತಕ್ಕಷ್ಟು ಉಪ್ಪು
ಅಗತ್ಯಕ್ಕೆ ತಕ್ಕಷ್ಟು ನೀರು
ಅಗತ್ಯಕ್ಕೆ ತಕ್ಕಷ್ಟು ಅಡುಗೆ ಸೋಡಾ
1 ಚಮಚ ಸಾಸಿವೆ
4 ಕತ್ತರಿಸಿದ ಬೆಳ್ಳುಳ್ಳಿ
-
ತಯಾರಿಸುವುದು ಹೇಗೆ? :
- ಒಂದು ಪಾತ್ರೆಯಲ್ಲಿ ರವೆ, ಹುಳಿ ಮೊಸರು, ಸಕ್ಕರೆ, ಉಪ್ಪು ಸೇರಿಸಿ, ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರಗೊಳಿಸಿ. ಬಳಿಕ ಹೆಚ್ಚಿಕೊಂಡ ಬೆಳ್ಳುಳ್ಳಿ ಎಸಳು ಮತ್ತು ಸ್ವಲ್ಪ ನೀರನ್ನು ಸೇರಿಸಿ, ಇನ್ನೊಮ್ಮೆ ಚೆನ್ನಾಗಿ ಮಿಶ್ರಗೊಳಿಸಿ. ಮಿಶ್ರಣವು ಇಡ್ಲೀ ಹಿಟ್ಟಿನ ರೀತಿಯಲ್ಲಿ ಹರಿಯುವ ಸ್ಥಿರತೆಯನ್ನು ಹೊಂದಿರಬೇಕು.
- ಪ್ಲೇಟ್ಗೆ ಸ್ವಲ್ಪ ಎಣ್ಣೆಯನ್ನು ಸವರಿಕೊಳ್ಳಿ.
- ಒಂದು ಬಾಣಲೆಯಲ್ಲಿ ಸ್ವಲ್ಪ ನೀರನ್ನು ಸೇರಿಸಿ, ಕುದಿಯಲು ಇಡಿ. ಒಂದು ಬೌಲ್ ಅಲ್ಲಿ ಸ್ವಲ್ಪ ಅಡುಗೆ ಸೋಡ ಮತ್ತು ನೀರನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ. ಸೋಡಾ ಮಿಶ್ರಿತ ನೀರನ್ನು ಮಿಶ್ರಣಕ್ಕೆ ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
- ಎಣ್ಣೆಯನ್ನು ಸವರಿಕೊಂಡ ಪ್ಲೇಟ ಅಲ್ಲಿ ಧೋಕ್ಲಾ ಮಿಶ್ರಣವನ್ನು ಸೇರಿಸಿ. ಬಳಿಕ ಕುದಿಯುತ್ತಿರುವ ನೀರಿನ ಮೇಲೆ ಒಂದು ಪಾತ್ರೆಯನ್ನು ಇಟ್ಟು, ಪ್ಲೇಟನ್ನು ಅದರ ಮೇಲೆ ಇರಿಸಿ. ಧೋಕ್ಲಾ ಹಬೆಯಲ್ಲಿ 15 ನಿಮಿಷಗಳ ಕಾಲ ಬೇಯಲು ಬಿಡಿ.
- ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಕರಿಬೇವಿನ ಎಲೆ, ಹಸಿಮೆಣಸಿನ ಕಾಯಿ ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.
- ಇದನ್ನು ಬೆಂದ ಧೋಕ್ಲಾದೊಂದಿಗೆ ಮಿಶ್ರಣ ಮಾಡಿ ಸವಿಯಲು ನೀಡಿ.
- ಟಿಪ್ಪಣಿ: ಬೇಯಿಸಿಕೊಂಡ ಧೋಕ್ಲಾ ಅನ್ನು ಹುಣಸೆ ಹಣ್ಣಿನ ಚಟ್ನಿ ಅಥವಾ ಕಾಫಿ-ಟೀ ಯೊಂದಿಗೆ ಸವಿಯಲು ನೀಡಿ.
- People - 3
- ಎನರ್ಜಿ - ೮೧ಕ್ಯಾ
- ಕೊಬ್ಬು - ೨ಗ್ರಾ
- ಪ್ರೋಟೀನ್ - ೩.೬ಗ್ರಾಂ
- ಕಾರ್ಬೋಹೈಡ್ರೇಟ್ - ೧೨.೧ ಗ್ರಾ
- ಫೈಬರ್ - ೨.೬ಗ್ರಾ



Click it and Unblock the Notifications
