For Quick Alerts
ALLOW NOTIFICATIONS  
For Daily Alerts

ಕ್ರಿಸ್‌ಮಸ್‌, ಹೊಸವರ್ಷಕ್ಕೆ ಓವನ್‌ ಬಳಸದೇ, ಈ ಎಗ್‌ಲೆಸ್‌ ರವಾ ಕೇಕ್‌ ಟ್ರೈ ಮಾಡಿ

Posted By:
|

ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ,. ಜೊತೆಗೆ ಕ್ರಿಸ್‌ಮಸ್‌ ಸಡಗರ ಬೇರೆ. ಇವೆರಡಕ್ಕೂ ಹೇಳಿ ಮಾಡಿಸಿದ ಸ್ವೀಟ್‌ ಅಂದ್ರೆ ಅದು ಕೇಕ್.‌ ಆದ್ರೆ ಏನ್‌ ಮಾಡೋದು? ಮನೆಯಲ್ಲಿ ಕೇಕ್‌ ತಯಾರಿಸೋಕೆ ಓವನ್‌ ಇಲ್ಲ, ಬೇಕರಿಯಿಂದ ತರೋದು ಸೇಫ್‌ ಅಲ್ಲ ಅಂತ ಹಲವಾರು ಜನ ಯೋಚನೆ ಮಾಡ್ತಾ ಇರ್ತಿರಾ ಅಲ್ವಾ? ಈಗ ಅದರ ಚಿಂತೆ ಬಿಡಿ, ನಾವಿಂದು ನಿಮಗಾಗಿ ಮೊಟ್ಟೆ, ಮೈದಾ ಬಳಸಿದೇ, ಓವನ್‌ ಇಲ್ಲದೆಯೇ ಮನೆಯಲ್ಲಿಯೇ ರವೆಯಿಂದ ಕೇಕ್‌ ಹೇಗೆ ಮಾಡೋದು ಅಂತ ಹೇಳಿಕೊಡ್ತೀವಿ.

Rava cake recipe in kannada | suji cake recipe in cooker | eggless suji ka cake in a pan
ಕ್ರಿಸ್‌ಮಸ್‌, ಹೊಸವರ್ಷಕ್ಕೆ ಓವನ್‌ ಬಳಸದೇ, ಈ ಎಗ್‌ಲೆಸ್‌ ರವಾ ಕೇಕ್‌ ಟ್ರೈ ಮಾಡಿ
ಕ್ರಿಸ್‌ಮಸ್‌, ಹೊಸವರ್ಷಕ್ಕೆ ಓವನ್‌ ಬಳಸದೇ, ಈ ಎಗ್‌ಲೆಸ್‌ ರವಾ ಕೇಕ್‌ ಟ್ರೈ ಮಾಡಿ
Prep Time
10 Mins
Cook Time
20M
Total Time
30 Mins

Recipe By: Shreeraksha

Recipe Type: Snacks

Serves: 2

Ingredients
  • ಬೇಕಾಗುವ ಪದಾರ್ಥಗಳು:

    2 ಕಪ್ ರವೆ

    ½ ಕಪ್ ಎಣ್ಣೆ

    ½ ಕಪ್ ಮೊಸರು

    1 ಕಪ್ ಸಕ್ಕರೆ

    1¼ ಕಪ್ ಹಾಲು

    ¼ ಟೀಸ್ಪೂನ್ ಉಪ್ಪು

    ಬೇಕಿಂಗ್ ಪೇಪರ್

    ¼ ಟೀಸ್ಪೂನ್ ಅಡುಗೆ ಸೋಡಾ

    ½ ಟೀಸ್ಪೂನ್ ಏಲಕ್ಕಿ ಪುಡಿ

    ¼ ಕಪ್ ಹಾಲು

    ¼ ಕಪ್ ಟುಟ್ಟಿ ಪ್ರುಟಿ

Red Rice Kanda Poha
How to Prepare
  • ತಯಾರಿಸವ ವಿಧಾನ:

    ಮೊದಲನೆಯದಾಗಿ, ಮಿಕ್ಸಿ ಜಾರ್‌ನಲ್ಲಿ 2 ಕಪ್ ರವೆ ಹಾಕಿ, ನುಣ್ಣಗೆ ಪುಡಿಮಾಡಿ, ಪಕ್ಕಕ್ಕೆ ಇರಿಸಿ.

    ದೊಡ್ಡ ಬಟ್ಟಲಿನಲ್ಲಿ ½ ಕಪ್ ಎಣ್ಣೆ, ½ ಕಪ್ ಮೊಸರು ಮತ್ತು 1 ಕಪ್ ಸಕ್ಕರೆ ತೆಗೆದುಕೊಂಡು, ಸಕ್ಕರೆ ಸಂಪೂರ್ಣವಾಗಿ ಕರಗುವ ತನಕ ಮಿಶ್ರಣ ಮಾಡಿ.

    ಈಗ 1 ಕಪ್ ಹಾಲು ಸೇರಿಸಿ, ಮಿಶ್ರಣ ಮಾಡಿ.

    ನಂತರ ಇದಕ್ಕೆ ಪುಡಿಮಾಡಿದ ರವೆ, ¼ ಟೀಸ್ಪೂನ್ ಉಪ್ಪು ಸೇರಿಸಿ, ಚೆನ್ನಾಗಿ ಮಿಕ್ಸ್‌ ಮಾಡಿ.

    10 ನಿಮಿಷ ಅಥವಾ ರವೆ ಚೆನ್ನಾಗಿ ನೆನೆಯುವವರೆಗೆ ಮುಚ್ಚಿಡಿ.

    ಏತನ್ಮಧ್ಯೆ, ಒಂದು ಬಾಣಲೆಗೆ ಗ್ರೀಸ್ ಎಣ್ಣೆ ಮತ್ತು ಬೇಕಿಂಗ್ ಪೇಪರ್‌ ಹಾಕಿ ರೆಡಿ ಮಾಡಿ.

    ಇತ್ತ, 10 ನಿಮಿಷಗಳ ಕಾಲ ನೆನೆಸಿದ ರವಾ ಮಿಶ್ರಣಕ್ಕೆ ¾ ಟೀಸ್ಪೂನ್ ಬೇಕಿಂಗ್ ಪೌಡರ್, ¼ ಟೀಸ್ಪೂನ್ ಅಡಿಗೆ ಸೋಡಾ, ½ ಟೀಸ್ಪೂನ್ ಏಲಕ್ಕಿ ಪುಡಿ ಮತ್ತು ¼ ಕಪ್ ಹಾಲು ಸೇರಿಸಿಚೆನ್ನಾಗಿ ಬೆರೆಸಿ.

    ಕೊನೆಯದಾಗಿ, ¼ ಕಪ್ ಕೆಂಪು ಟುಟ್ಟಿ ಫ್ರುಟ್ಟಿ, ¼ ಕಪ್ ಹಳದಿ ಟುಟ್ಟಿ ಫ್ರುಟ್ಟಿ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಬ್ಯಾಟರ್ ಅನ್ನು ಬಾಣಲೆ ಪಾತ್ರೆಗೆ ವರ್ಗಾಯಿಸಿ. ಮೇಲೆ ಸ್ವಲ್ಪ ಟುಟ್ಟಿ ಫ್ರುಟಿ ಹರಡಿ.

    ಈಗ ಬಾಣಲೆಯನ್ನು ಸ್ವವ್‌ ಮೇಲೆ ಇಟ್ಟು, ಮುಚ್ಚಿ ಜೊತೆಗೆ ಹಿಟ್ಟನ್ನು ಬಳಸಿ, ಮುಚ್ಚಳದ ರಂಧ್ರವನ್ನೂ ಮುಚ್ಚಿ, ಫ್ಲೇಮ್‌ ಕಡಿಮೆ ಮಾಡಿ.

    60 ನಿಮಿಷಗಳ ಕಾಲ ಅಥವಾ ಕೇಕ್ ಚೆನ್ನಾಗಿ ಬೇಯಿಯುವವರೆಗೆ ಬೇಯಿಸಿ. ಟೂತ್‌ ಪಿಕ್‌ ಬಳಸಿ, ಚೆನ್ನಾಗಿ ಬೆಂದಿದೆಯೇ ಪರೀಕ್ಷಿಸಿ.

    ಅಂತಿಮವಾಗಿ, ಟುಟ್ಟಿ ಫ್ರುಟ್ಟಿ ರವಾ ಕೇಕ್ ಅನ್ನು ನಿಮ್ಮ ಆಯ್ಕೆಯ ಗಾತ್ರಕ್ಕೆ ಕತ್ತರಿಸಿ, ಕುಟುಂಬಸ್ಥರೊಂದಿಗೆ ಸವಿಯಿರಿ.

Instructions
Nutritional Information
  • People - 2
  • ಕ್ಯಾಲೋರಿಗಳು: - 157 ಕೆ.ಸಿ.ಎಲ್
  • ಕೊಬ್ಬು: - 10 ಗ್ರಾಂ
  • ಪ್ರೋಟೀನ್: - 6 ಗ್ರಾಂ
  • ಕಾರ್ಬೋಹೈಡ್ರೇಟ್ಗಳು: - 12 ಗ್ರಾಂ
[ 4.5 of 5 - 52 Users]
Story first published: Wednesday, December 15, 2021, 17:37 [IST]
X
Desktop Bottom Promotion