Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ಬೆಳಗ್ಗಿನ ಉಪಹಾರಕ್ಕೆ ದಿಢೀರ್ ಬ್ರೆಡ್ ದೋಸೆ..
ಬ್ರೆಡ್ ಸಾಮಾನ್ಯವಾಗಿ ಆಪತ್ಕಾಲದ ಸ್ನೇಹಿತನೆಂದೇ ಕರೆಯಬಹುದು. ಮನೆಯಲ್ಲಿ ಏನೂ ಇಲ್ಲವೆಂದಾಗ ಬ್ರೆಡ್ ನಿಂದ ಏನಾದರೂ ಫಟಾಫಟ್ ಅಂತ ರೆಡಿ ಮಾಡಿ, ಸವಿಯಬಹುದು. ಆದರೆ, ಇದರಿಂದ ಸ್ನಾಕ್ಸ್ ರೀತಿಯ ತಿಂಡಿಗಳನ್ನೇ ಮಾಡುವುದು ಹೆಚ್ಚು, ಅದಕ್ಕೆ ನಾವಿಂದು ಬ್ರೆಡ್ ನಿಂದ ಬೆಳಗ್ಗಿನ ಉಪಹಾರಕ್ಕೆ ದೋಸೆ ಹೇಗೆ ಮಾಡ್ಬೋದು ಅಂತ ಹೇಳಿ ಕೊಡ್ತೀವಿ. ಇದು ನಿಮ್ಮ ಟೈಮ್ ಉಳಿಸುತ್ತೆ, ರುಚಿಯಾಗಿಯೂ ಇರುತ್ತೆ, ಇನ್ನೇಕೆ ತಡ ಬನ್ನಿ ಹಾಗಾದ್ರೆ ಬ್ರೆಡ್ ದೋಸೆ ಮಾಡೋದು ಹೇಗೆ ನೋಡೋಣ.

Recipe By: 2
Recipe Type: Vegetarian
Serves: 2
-
ಬೇಕಾಗುವ ಪದಾರ್ಥಗಳು:
4 ಸ್ಲೈಸ್ ಬ್ರೆಡ್ (ಬಿಳಿ ಅಥವಾ ಬ್ರೌನ್)
1 ಕಪ್ ರವೆ
¼ ಕಪ್ ಅಕ್ಕಿ ಹಿಟ್ಟು
¼ ಕಪ್ ಮೊಸರು
½ ಟೀಸ್ಪೂನ್ ಉಪ್ಪು
½ ಚಮಚ ಸಕ್ಕರೆ
1 ಕಪ್ ನೀರು
ಸ್ವಲ್ಪ ಅಡಿಗೆ ಸೋಡಾ
ಎಣ್ಣೆ (ಹುರಿಯಲು)
-
ತಯಾರಿಸುವ ವಿಧಾನ:
ಮೊದಲಿಗೆ, ಬ್ರೆಡ್ ಬದಿಗಳನ್ನು ಕತ್ತರಿಸಿ. ಇದಕ್ಕೆ ಬಿಳಿ ಅಥವಾ ಕಂದು ಬ್ರೆಡ್ ಬಳಸಬಹುದು. ಆದರೆ, ಬಿಳಿ ಬ್ರೆಡ್ ಬಳಸಿದರೆ ದೋಸೆ ಗರಿಗರಿಯಾಗಿ ಬರುವುದು.
ಈಗ ಬ್ರೆಡ್ ನ್ನು ಸಣ್ಣ ತುಂಡುಗಳಾಗಿ ಮಾಡಿ, ಬಟ್ಟಲಿಗೆ ಸೇರಿಸಿ.
ಅದಕ್ಕೆ ¼ ಕಪ್ ಅಕ್ಕಿ ಹಿಟ್ಟು, ¼ ಕಪ್ ಮೊಸರು, ರವೆ, ½ ಟೀಸ್ಪೂನ್ ಉಪ್ಪು, ½ ಚಮಚ ಸಕ್ಕರೆ ಸೇರಿಸಿ. ಇದಕ್ಕೆ ಸಕ್ಕರೆ ಏಕೆ ಸೇರಿಸಲಾಗುತ್ತದೆ ಅಂದರೆ, ದೋಸೆಗೆ ಗೋಲ್ಡ್ ಬಣ್ಣ ಬರುವುದಕ್ಕಾಗಿ.
ಈ ಮಿಶ್ರಣಕ್ಕೆ 1 ಕಪ್ ನೀರು ಸೇರಿಸಿ, 20 ನಿಮಿಷಗಳ ಕಾಲ ನೆನೆಯಲು ಬಿಡಿ.
20 ನಿಮಿಷಗಳ ನಂತರ, ಇದನ್ನು ಮಿಕ್ಸಿಗೆ ಹಾಕಿ, ಅಗತ್ಯವಿರುವಂತೆ ನೀರನ್ನು ಸೇರಿಸಿ. ರುಬ್ಬಿಕೊಳ್ಳಿ.
ಈ ಹಿಟ್ಟನ್ನು ಒಂದು ಬೌಲ್ ಗೆ ಹಾಕಿ, 5 ನಿಮಿಷಗಳ ಕಾಲ ಮಿಕ್ಸ್ ಮಾಡಿ, ಇದಕ್ಕೆ ¼ ಟೀಸ್ಪೂನ್ ಅಡಿಗೆ ಸೋಡಾ ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ.
ಈಗ ದೋಸೆ ಪ್ಯಾನ್ ಬಿಸಿ ಮಾಡಿ ನೀರು ಚಿಮುಕಿಸಿ, ಟಿಶ್ಯೂ ಪೇಪರ್ ನಿಂದ ಒರೆಸಿ. ದೋಸೆ ಹಿಟ್ಟನ್ನು ಹಾಕಿ, ಸಾಧ್ಯವಾದಷ್ಟು ತೆಳುವಾಗಿ ಹರಡಿಕೊಳ್ಳಿ. ಅದರ ಮೇಲೆ ಎಣ್ಣೆಯನ್ನು ಸ್ವಲ್ಪ ಹಾಕಿ, ಹರಡಿ.
ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ಲೋ ಫ್ಲೇಮ್ ನಲ್ಲಿ ಕಾಯಿಸಿ.
ಕೊನೆಯದಾಗಿ, ಚಟ್ನಿ ಮತ್ತು ಸಾಂಬಾರ್‌ನೊಂದಿಗೆ ಬ್ರೆಡ್ ದೋಸೆಯನ್ನು ಸವಿಯಲು ಸಿದ್ದ.
- People - 2
- ಕ್ಯಾಲೋರಿಗಳು - 103 ಕೆ.ಸಿ.ಎಲ್
- ಕೊಬ್ಬು - 4 ಗ್ರಾಂ
- ಪ್ರೋಟೀನ್ - 7 ಗ್ರಾಂ
- ಕಾರ್ಬೋಹೈಡ್ರೇಟ್ಗಳು - 10 ಗ್ರಾಂ
- ಫೈಬರ್ - 1 ಗ್ರಾಂ



Click it and Unblock the Notifications
