Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ರುಚಿಯಾಗಿರುತ್ತೆ ಈ ಉದ್ದಿನ ಬೇಳೆಯ ಕರಿ !
ಬೇಳೆ ಸಾರನ್ನು ಹೆಚ್ಚಾಗಿ ಮಾಡುತ್ತಾ ಇರುತ್ತೇವೆ. ಆದರೆ ಉದ್ದಿನ ಬೇಳೆಯಿಂದ ಸಾರು ಮಾಡಿದ್ದೀರಾ? ಇಲ್ಲ ಅಂದರೆ ಉದ್ದಿನ ಬೇಳೆಯಿಂದ ಒಮ್ಮೆ ಸಾರು ಮಾಡಿ ನೋಡಿ, ಇದರ ರುಚಿ ಮತ್ತೆ-ಮತ್ತೆ ಈ ಅಡುಗೆ ಮಾಡುವಂತೆ ನಿಮ್ಮನ್ನು ಪ್ರೇರೇಪಿಸುತ್ತದೆ.
ಉದ್ದಿನ ಬೇಳೆಯಿಂದ ಅಡುಗೆ ಮಾಡುವ ವಿಧಾನವನ್ನು ಇಲ್ಲಿ ಹೇಳಾಗಿದೆ ನೋಡಿ.

ಬೇಕಾಗುವ ಸಾಮಾಗ್ರಿಗಳು:
ಉದ್ದಿನ ಬೇಳೆ 1 ಕಪ್
ಅರಿಶಿಣ ಅರ್ಧ ಚಮಚ
ತುಪ್ಪ 1 ಚಮಚ
ಜೀರಿಗೆ ಅರ್ಧ ಚಮಚ
ಟೊಮೆಟೊ 1
ಹಸಿ ಮೆಣಸಿನ ಕಾಯಿ 2
ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ
ನಿಂಬೆ ರಸ 1 ಚಮಚ
ಗರಂ ಮಸಾಲ 1 ಚಮಚ
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಒಂದು ಕಪ್ ಉದ್ದಿನ ಬೇಳೆಗೆ 3 ಕಪ್ ನೀರು ಹಾಕಿ , ಅರಿಶಿಣ, ಕತ್ತರಿಸಿದ ಹಸಿ ಮೆಣಸಿನ ಕಾಯಿ ಹಾಗೂ ರುಚಿಗೆ ತಕ್ಕ ಉಪ್ಪು ಹಾಕಿ ಫ್ರೆಶರ್ ಕುಕ್ಕರ್ ನಲ್ಲಿಟ್ಟು 3 ವಿಶಲ್ ಬರುವವರೆಗೆ ಬೇಯಿಸಬೇಕು.
2. ಈಗ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಬೇಕು. ನಂತರ ತುಪ್ಪ ಬಿಸಿಯಾದಾಗ ಜೀರಿಗೆ ಹಾಕಿ ನಂತರ ಚಿಕ್ಕದಾಗಿ ಕತ್ತರಿಸಿದ ಶುಂಠಿ ಹಾಕಿ ಕಡಿಮೆ ಉರಿಯಲ್ಲಿ1-2 ನಿಮಿಷ ಹುರಿಯಿರಿ.
3. ನಂತರ ಟೊಮೆಟೊ ಮತ್ತು ಹಸಿ ಮೆಣಸಿನ ಕಾಯಿ ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಹುರಿಯಬೇಕು. ನಂತರ ಬೇಯಿಸಿದ ಉದ್ದಿನ ಬೇಳೆ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ನಿಂಬೆ ರಸ ಹಾಕಿ ಒಮ್ಮೆ ಮಿಶ್ರಣ ಮಾಡಿ ನಂತರ ಗರಂ ಮಸಾಲ ಹಾಕಿ ಚೆನ್ನಾಗಿ ಕುದಿಸಿದರೆ ಉದ್ದಿನ ಬೇಳೆಯಿಂದ ತಯಾರಿಸಿದ ದಾಲ್ ಸಾರು ರೆಡಿ.
ಇದನ್ನು ಅನ್ನ, ರೊಟ್ಟಿ, ಚಪಾತಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
