Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ರುಚಿಕರವಾದ ಟೊಮೆಟೊ ಗ್ರೇವಿ ರೆಸಿಪಿ

ಈ ಟೊಮೆಟೊದಿಂದ ತಯಾರಿಸುವ ಅಡುಗೆಯನ್ನು ಮತ್ತಷ್ಟು ರುಚಿಕರವಾಗಿ ಮಾಡಬೇಕೆಂದು ಬಯಸುವುದಾದರೆ ಟೊಮೆಟೊ ಗ್ರೇವಿ ಟ್ರೈ ಮಾಡಿ. ತಿನ್ನಲು ತುಂಬಾ ರುಚಿಕರವಾಗಿರುವ ಈ ಗ್ರೇವಿ ತಯಾರಿಸುವುದು ಬಲು ಸುಲಭ. ಇದನ್ನು ತಯಾರಿಸುವ ವಿಧಾನದ ಬಗ್ಗೆ ತಿಳಿಯಲು ಮುಂದೆ ಓದಿ.
ಬೇಕಾಗುವ ಸಾಮಾಗ್ರಿಗಳು:
* 3 ಚಮಚ ಬೆಣ್ಣೆ
* 2 ಈರುಳ್ಳಿ (ಉದ್ದುದ್ದವಾಗಿ ಕತ್ತರಿಸಿದ್ದು)
* 4 ಹಸಿಮೆಣಸಿನ ಕಾಯಿ
* 1/4 ಕಪ್ ಅಣಬೆ
* 4-5 ಟೊಮೆಟೊ (ಕತ್ತರಿಸಿದ್ದು)
* 2 ಚಮಚ ಮೆಣಸಿನ ಪುಡಿ (ಖಾರಕ್ಕೆ ತಕ್ಕ)
* ಅರ್ಧ ಚಮಚ ಕೊತ್ತಂಬರಿ ಪುಡಿ
* 1/2 ಚಮಚ ಗರಂ ಮಸಾಲದ ಪುಡಿ
* ಬೆಳ್ಳುಳ್ಳಿ 2-3 ಎಸಳು
* ಶುಂಠಿ 1 ಇಂಚು
* ಅರಿಶಿಣ ಪುಡಿ 1/4 ಚಮಚ
* ಒಂದು ಕಪ್ ನೀರು
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಪಾತ್ರೆಯಲ್ಲಿ ಬೆಣ್ಣೆ ಹಾಕಿ ಬಿಸಿ ಮಾಡಬೇಕು. ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ಕತ್ತರಿಸಿದ ಹಸಿಮೆಣಸಿನ ಕಾಯಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
2. ಈಗ ಕತ್ತರಿಸಿದ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಬೇಕು.
3. ನಂತರ ಬೆಳ್ಳುಳ್ಳಿ, ಜಜ್ಜಿದ ಶುಂಠಿ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ಗರಂ ಮಸಾಲ , ರುಚಿಗೆ ತಕ್ಕ ಉಪ್ಪು, ಅಣಬೆ ಹಾಕಿ 2 ನಿಮಿಷ ಹುರಿಯಬೇಕು.
4. ನಂತರ ಒಂದು ಕಪ್ ನೀರು ಸೇರಿಸಿ ಮಿಶ್ರಣ ಗಟ್ಟಿಯಾಗುವವರೆಗೆ ಕುದಿಸಬೇಕು. ನಂತರ ರುಚಿನೋಡಿ, ಉಪ್ಪು ಸಾಲದಿದ್ದರೆ ಉಪ್ಪು ಹಾಕಬೇಕು. ನಂತರ ಉರಿಯಿಂದ ತೆಗೆದರೆ ರುಚಿಕರವಾದ ಟೊಮೆಟೊ ಗ್ರೇವಿ ರೆಡಿ.



Click it and Unblock the Notifications
