Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಬ್ರೇಕ್ ಫಾಸ್ಟ್ ರುಚಿ ಹೆಚ್ಚಿಸುವ ಟೊಮೆಟೊ ಕುರ್ಮಾ

ಬೇಕಾಗುವ ಸಾಮಾಗ್ರಿಗಳು:
* ಹಣ್ಣಾದ ಟೊಮೆಟೊ 3
* ಈರುಳ್ಳಿ 1 (ಕತ್ತರಿಸಿದ್ದು)
* ಶುಂಠಿ ಪೇಸ್ಟ್ ಅರ್ಧ ಚಮಚ
* ಬೆಳ್ಳುಳ್ಳಿ ಎಸಳು 2-3 ಎಸಳು
* ಅರ್ಧ ಇಂಚಿನಷ್ಟು ದೊಡ್ಡದಿರುವ ಚಕ್ಕೆ
* ಪಲಾವ್ ಎಲೆ 1
* ಕೆಂಪು ಮೆಣಸಿನ ಪುಡಿ 1 ಚಮಚ
* ಅರಿಶಿಣ ಪುಡಿ 1/4 ಚಮಚ
* ಕರಿಬೇವಿನ ಎಲೆ ಸ್ವಲ್ಪ
* ಎಣ್ಣೆ 1 ಚಮಚ
* ತುರಿದ ತೆಂಗಿನ ಕಾಯಿ ಕಾಲು ಕಪ್
* ಡುಂಡು ಮೆಣಸಿನ ಕಾಯಿ 2
* ಹಸಿ ಮೆಣಸಿನ ಕಾಯಿ 1
* ಗಸೆಗಸೆ ಅರ್ಧ ಚಮಚ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಟೊಮೆಟೊ ಮತ್ತು ಗಸೆಗಸೆ ಅರೆದು ಗಟ್ಟಿಯಾದ ಪೇಸ್ಟ್ ರೀತಿ ಮಾಡಿಡಬೇಕು.
2. ತುರಿದ ತೆಂಗಿನ ಕಾಯಿಯನ್ನು ಅರೆದು ಇಡಬೇಕು.
3. ಈಗ ಸಾರು ಮಾಡುವ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಸ್ವಲ್ಪ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಅದಕ್ಕೆ ಬೆಳ್ಳುಳ್ಳಿ ಎಸಳು, ಚಕ್ಕೆ, ಪಲಾವ್ ಎಲೆ, ಕರಿಬೇವಿನ ಎಲೆ, ಎರಡು ಭಾಗ ಮಾಡಿದ ಹಸಿಮೆಣಸಿನಕಾಯಿ ಹಾಕಿ 30 ಸೆಕೆಂಡ್ ಹುರಿಯಬೇಕು. ನಂತರ ಶುಂಠಿ ಪೇಸ್ಟ್ ಹಾಕಿ ಒಂದು ನಿಮಿಷ ಹುರಿದು, ಕತ್ತರಿಸಿದ ದುಂಡು ಮೆಣಸಿನ ಕಾಯಿ 2 ನಿಮಿಷ ಹುರಿಯಬೇಕು.
4. ನಂತರ ಅರಿಶಿಣ ಮತ್ತು ಮೆಣಸಿನ ಪುಡಿ ಹಾಕಿ ಮಿಶ್ರ ಮಾಡಿ ನಂತರ ಪೇಸ್ಟ್ ರೀತಿ ಮಾಡಿದ ಟೊಮೆಟೊ ಹಾಕಿ ರುಚಿಗೆ ತಕ್ಕ ಉಪ್ಪು ಸೇರಿಸಿ 3-4 ನಿಮಿಷ ಬಿಸಿ ಮಾಡಬೇಕು. ನಂತರ ಅರೆದ ತೆಂಗಿನಕಾಯಿ ಹಾಕಿ ಒಂದು ಕಪ್ ನೀರು ಹಾಕಿ ಚೆನ್ನಾಗಿ ಕುದಿಸಬೇಕು.
ನಂತರ ಈ ಟೊಮೆಟೊ ಕುರ್ಮಾದಲ್ಲಿ ಉಪ್ಪು ಸರಿಯಾಗಿದೆಯೇ ಎಂದು ನೋಡಿ, ಸಾಲದಿದ್ದರೆ ಸ್ವಲ್ಪ ಉಪ್ಪು ಹಾಕಿ 2 ನಿಮಿಷ ಈ ಮಿಶ್ರಣವನ್ನು ಕುದಿಸಿ ಉರಿಯಿಂದ ತೆಗೆದರೆ ರುಚಿಯಾದ ಟೊಮೆಟೊ ಕುರ್ಮಾ ರೆಡಿ.
ಇದನ್ನು ಸೆಟ್ ದೊಸೆ ಮತ್ತು ನೀರು ದೋಸೆ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.



Click it and Unblock the Notifications
