Latest Updates
-
ಕ್ರಿಕೆಟ್ ಮ್ಯಾಚ್ ನೋಡುವಾಗ ಮನೆಯಲ್ಲಿ ಜಗಳ ಬೇಡ: ದಂಪತಿಗಳು ಇಂದೇ ಮಾಡಿಕೊಳ್ಳಿ ಈ 'ಮ್ಯಾಚ್ ಡೇ ಒಪ್ಪಂದ'! -
ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ಲವೇ? ಅಪಾರ್ಟ್ಮೆಂಟ್ನಲ್ಲಿ ಬೂಷ್ಟು ತಡೆಯಲು ಇಲ್ಲಿದೆ 15 ನಿಮಿಷದ ಸಿಂಪಲ್ ಟಿಪ್ಸ್! -
ಓಣಂ ಸದ್ಯದ ರುಚಿ ಸವಿಯುತ್ತಲೇ ಆರೋಗ್ಯ ಕಾಪಾಡಿಕೊಳ್ಳಿ: ಮಧುಮೇಹಿಗಳಿಗೆ ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಓಣಂ ಮುಗಿದ್ರೂ ಕಮ್ಮಿ ಆಗಿಲ್ಲ ಸದ್ಯದ ಕ್ರೇಜ್! ಬೆಂಗಳೂರು, ಮುಂಬೈನಲ್ಲಿ ವೀಕೆಂಡ್ನಲ್ಲಿ ಎಲ್ಲಿ ಸಿಗುತ್ತೆ ರುಚಿಕರ ಊಟ? -
ರಾಷ್ಟ್ರೀಯ ಕ್ರೀಡಾದಿನ: ಜಿಮ್ ಇಲ್ಲದೆ ಮನೆಯಲ್ಲೇ ಫಿಟ್ ಆಗಲು ಈ 30 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ವರಮಹಾಲಕ್ಷ್ಮಿ ಹಬ್ಬದ ತಯಾರಿ: ಕುಟುಂಬದೊಂದಿಗೆ ಜಗಳವಿಲ್ಲದೆ, ಶಾಂತಿಯುತವಾಗಿ ಹಬ್ಬ ಆಚರಿಸುವುದು ಹೇಗೆ? -
ನಾಲ್ಕನೇ ಓಣಂ ಸಂಭ್ರಮ: ಪೂಕಳಂ ಸ್ಪರ್ಧೆಗೆ ಕ್ವಿಕ್ ಟಿಪ್ಸ್ ಮತ್ತು ಝೀರೋ-ವೇಸ್ಟ್ ಹ್ಯಾಕ್ಸ್! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ: ಇನ್ಮುಂದೆ ಕ್ಯಾನ್ ಮೇಲೆ ಈ ಹೆಸರು ಇರಲ್ಲ, FSSAI ಹೊಸ ರೂಲ್ಸ್! -
ರಕ್ಷಾಬಂಧನ 2026: ಚಂದ್ರಗ್ರಹಣದ ಭಯ ಬೇಡ, ರಾಖಿ ಕಟ್ಟಲು ಬೆಸ್ಟ್ ಟೈಮ್ ಇಲ್ಲಿದೆ! -
ಉರಿ ಬಿಸಿಲು, ತೇವಾಂಶದ ಕಾಟ: ಎಸಿ ಇಲ್ಲದಿದ್ದರೂ ಫಿಟ್ ಆಗಿರಲು 12 ನಿಮಿಷದ ಸರಳ ವರ್ಕೌಟ್!
ರುಚಿ ತಣಿಸುವ ಬದನೆಯ ಖಾರ ರೆಸಿಪಿ
ರುಚಿಯಾದ ಸಸ್ಯಾಹಾರಿ ಖಾರ ರೆಸಿಪಿ ಬದನೆ ಮುಸಲಾಂನೊಂದಿಗೆ ನಿಮ್ಮ ಇಂದಿನ ಮಧ್ಯಾಹ್ನದೂಟ ರಂಗೇರಲಿ. ಮುಸಲಾಂ ಒಂದು ಹೆಸರಾಂತ ಗ್ರೇವಿಯಾಗಿದ್ದು ಇದಕ್ಕೆ ಅಗತ್ಯವಾಗಿ ಬೇಕಾಗಿರುವುದು ಮಾಂಸವಾಗಿದೆ. ಈ ಮಾಂಸ ಗ್ರೇವಿಗೆ ಬೇಕಾದ ಅದೇ ಸಾಂಬಾರು ಪದಾರ್ಥಗಳನ್ನು ಬಳಸಿ ಸಸ್ಯಾಹಾರಿ ಬದನೆ ಮುಸಲಾಂ ಅನ್ನು ತಯಾರಿಸುವ ವಿಧಾನವನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತಿದ್ದೇವೆ.
ಈ ಗ್ರೇವಿ ಕ್ರೀಮಿಯಾಗಿದ್ದು ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಮುಸಲಾಂ ಗ್ರೇವಿಗೆ ಬಳಸುವ ಸಾಂಬಾರು ಪದಾರ್ಥಗಳೂ ಕೂಡ ಉತ್ತಮ ಸುವಾಸನೆಯನ್ನು ಹೊಂದಿದ್ದು ಇನ್ನೂ ಇದನ್ನು ಸೇವಿಸಬೇಕೆಂಬ ತುಡಿತವನ್ನು ಹೆಚ್ಚಿಸುವುದಂತೂ ಖಂಡಿತ. ಹಾಗಿದ್ದರೆ ತಡ ಮಾಡದೇ ಬದನೆ ಮುಸಲಾಂ ಅನ್ನು ತಯಾರಿಸಿಕೊಳ್ಳುವ ವಿಧಾನವನ್ನು ಬರೆದುಕೊಳ್ಳಿ ಮತ್ತು ಮನೆಯಲ್ಲಿ ಟ್ರೈ ಮಾಡಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಬಾಯಿಯಲ್ಲಿ ನೀರೂರಿಸುವ ಕೊತ್ತಂಬರಿ ಸೊಪ್ಪಿನ ಚಟ್ನಿ!

ಪ್ರಮಾಣ: 3
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು
ಸಾಮಾಗ್ರಿಗಳು:
.ಸಣ್ಣ ಬದನೆ - 4-5
.ಈರುಳ್ಳಿ - 2 (ಸಣ್ಣಗೆ ಹೆಚ್ಚಿದ್ದು)
.ಶುಂಠಿ - ಬೆಳ್ಳುಳ್ಳಿ ಪೇಸ್ಟ್ - 2 ಸ್ಪೂನ್
.ಮೆಣಸಿನ ಹುಡಿ - 2 ಸ್ಪೂನ್
.ಅರಶಿನ ಹುಡಿ - 1/2 ಸ್ಪೂನ್
.ಟೊಮೇಟೋ - 2 (ಕತ್ತರಿಸಿದ್ದು)
.ಟೊಮೇಟೋ ಪೂರಿ - 2 ಸ್ಪೂನ್
.ಸಕ್ಕರೆ - 1/2 ಸ್ಪೂನ್
.ಉಪ್ಪು - ರುಚಿಗೆ ತಕ್ಕಷ್ಟು
.ಜೀರಿಗೆ ಬೀಜ - 1 ಸ್ಪೂನ್
.ತಾಜಾ ಕ್ರೀಂ - 3 ಸ್ಪೂನ್
.ಕೊತ್ತಂಬರಿ ಸೊಪ್ಪು - 2 ಸ್ಪೂನ್ (ಕತ್ತರಿಸಿದ್ದು)
.ಎಣ್ಣೆ - ಹುರಿಯಲು
ಎಣ್ಣೆ - 2 ಸ್ಪೂನ್
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ರುಚಿಕರವಾದ ತೆಂಗಿನಕಾಯಿ ರೆಸಿಪಿಗಳು
ಮಾಡುವ ವಿಧಾನ:
1.ಬದನೆಯನ್ನು ಚೆನ್ನಾಗಿ ತೊಳೆದುಕೊಂಡು ಚಾಕುವಿನಲ್ಲಿ ಅದನ್ನು ಉದ್ದಕ್ಕೆ ಸೀಳಿ.
2.ಕಡಾಯಿಯಲ್ಲಿ ಹುರಿಯಲು ಎಣ್ಣೆಯನ್ನು ಬಿಸಿ ಮಾಡಿ ಮತ್ತು ಬದನೆಯನ್ನು ಗೋಲ್ಡನ್ ಬಣ್ಣ ಬರುವವರೆಗೆ ಕರಿದುಕೊಳ್ಳಿ.
3. ಅವು ಚೆನ್ನಾಗಿ ಬೆಂದ ನಂತರ ಪ್ಲೇಟ್‌ಗೆ ಬದನೆಯನ್ನು ವರ್ಗಾಯಿಸಿಕೊಳ್ಳಿ.
4.ಪ್ಯಾನ್‌ನಲ್ಲಿ 2 ಚಮಚದಷ್ಟು ಎಣ್ಣೆ ಬಿಸಿ ಮಾಡಿಕೊಳ್ಳಿ ಮತ್ತು ಜೀರಿಗೆ ಬೀಜವನ್ನು ಅದಕ್ಕೆ ಹಾಕಿ. ಅದನ್ನು ಸಿಡಿಯಲು ಬಿಡಿ.
5.ಈರುಳ್ಳಿಯನ್ನು ಎಣ್ಣೆಗೆ ಹಾಕಿ ಮತ್ತು ಮಂದ ಉರಿಯಲ್ಲಿ ಅವು ಕೆಂಪಗಾಗುವರೆಗೆ ಹುರಿಯಿರಿ.
6.ಶುಂಠಿ - ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ, ಮೆಣಸಿನ ಹುಡಿ, ಅರಶಿನ ಹುಡಿ, ಮತ್ತು ಕೊತ್ತಂಬರಿ ಹುಡಿಯನ್ನು 2-3 ನಿಮಿಷಗಳ ಕಾಲ ಬೇಯಿಸಿ.
7.ನಂತರ ಕತ್ತರಿಸಿದ ಟೋಮೇಟೋ ಮತ್ತು ಟೋಮೇಟೋ ಪೂರಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
8.ಉಪ್ಪು, ಸಕ್ಕರೆ ಸೇರಿಸಿ ಮತ್ತು 4-5 ನಿಮಿಷಗಳ ಕಾಲ ಬೇಯಿಸಿ.
9.ಈಗ ಹುರಿದ ಬದನೆಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
10.ಸ್ವಲ್ಪ ನೀರು ಹಾಕಿ ದಪ್ಪನೆಯ ಗ್ರೇವಿಯನ್ನಾಗಿ ಮಾಡಿಕೊಳ್ಳಿ.
11.ಪೂರ್ತಿ ಆದ ನಂತರ, ಗ್ಯಾಸ್ ಆಫ್ ಮಾಡಿ ಮತ್ತು ತಾಜಾ ಕ್ರೀಂ ಅನ್ನು ಅದಕ್ಕೆ ಸೇರಿಸಿ.
12.ಕತ್ತರಿಸಿದ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿ ಮತ್ತು ಬಿಸಿಯಾಗಿ ಬಡಿಸಿ.
ಇನ್ನೂ ಈ ರುಚಿಯಾದ ಮತ್ತು ಬಿಸಿಯಾದ ಬದನೆ ಗ್ರೇವಿಯನ್ನು ರೋಟಿಯೊಂದಿಗೆ ಸವಿಯಿರಿ.



Click it and Unblock the Notifications