Latest Updates
-
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್!
ಗುಜರಾತಿ ಶೈಲಿಯಲ್ಲಿ ಮೊಸರು ಗ್ರೇವಿ
ಗುಜರಾತಿ ಖಾದಿ(ಮೊಸರು ರೆಸಿಪಿ) ಉತ್ತರ ಭಾರತದ ಕಡೆ ತುಂಬಾ ಪ್ರಸಿದ್ಧವಾದ ಅಡುಗೆಯಾಗಿದೆ. ಇದು ತುಂಬಾ ಸರಳವಾದ ರೆಸಿಪಿಯಾಗಿದ್ದು ಕಡಲೆಹಿಟ್ಟು ಮತ್ತು ಮೊಸರು ಬಳಸಿ ಈ ಗ್ರೇವಿಯನ್ನು ತಯಾರಿಸಲಾಗುವುದು.
ರೆಸಿಪಿ ತುಂಬಾ ಸರಳವಾಗಿದ್ದರೂ ಈ ಗ್ರೇವಿಯ ರುಚಿ ಮಾತ್ರ ಸೂಪರ್ ಆಗಿದೆ. ಇದನ್ನು ಮಾಡುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ ನೋಡಿ:

ಬೇಕಾಗುವ ಸಾಮಾಗ್ರಿಗಳು
* ಕಡಲೆ ಹಿಟ್ಟು 2 ಟೇಬಲ್ ಸ್ಪೂನ್
* ಮೊಸರು ಒಂದೂವರೆ ಕಪ್
* ಶುಂಠಿ ಪೇಸ್ಟ್ ಅರ್ಧ ಚಮಚ
* ಹಸಿ ಮೆಣಸಿನಕಾಯಿ ಅರ್ಧ ಚಮಚ
* ಸಕ್ಕರೆ 2 ಚಮಚ
* ಸ್ವಲ್ಪ ಕೊತ್ತಂಬರಿ ಸೊಪ್ಪು
* ನೀರು ಎರಡೂವರೆ ಕಪ್
ಒಗ್ಗರಣೆಗೆ
ಸ್ವಲ್ಪ ಕರಿಬೇವು
ಜೀರಿಗೆ ಅರ್ಧ ಚಮಚ
ಸಾಸಿವೆ ಅರ್ಧ ಚಮಚ
ಚಿಟಿಕೆಯಷ್ಟು ಇಂಗು
ಒಂದು ಒಣ ಮೆಣಸು
ತುಪ್ಪ 2 ಚಮಚ
ತಯಾರಿಸುವ ವಿಧಾನ:
* ಸ್ವಲ್ಪ ದೊಡ್ಡ ಬಟ್ಟಲಿಗೆ ಕಡಲೆ ಹಿಟ್ಟು, ಮೊಸರು ಮತ್ತು ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ನಂತರ ತಳ ದಪ್ಪವಿರುವ ಪಾತ್ರೆಗೆ ಈ ಮಿಶ್ರಣವನ್ನು ಹಾಕಿ ಕುದಿಸಿ.
* ನಂತರ ಶುಂಠಿ ಪೇಸ್ಟ್, ಹಸಿ ಮೆಣಸಿನಕಾಯಿ ಪೇಸ್ಟ್, ಸಕ್ಕರೆ, ಉಪ್ಪು ಹಾಕಿ ಮಿಕ್ಸ್ ಮಾಡಿ, ಸೌಟ್ ಆಡಿಸುತ್ತಲೇ ಇರಿ.
* ಸೌಟ್ ನಿಂದ ಆಗಾಗ ಆಡಿಸುತ್ತಲೇ ಗ್ರೇವಿಯನ್ನು 8-10 ನಿಮಿಷ ಕುದಿಸಿ. ನಂತರ ಉರಿಯಿಂದ ಇಳಿಸಿ.
* ಈಗ ಒಗ್ಗರಣೆ ಪಾತ್ರೆಗೆ ತುಪ್ಪ ಹಾಕಿ , ತುಪ್ಪ ಬಿಸಿಯಾದಾಗ ಸಾಸಿವೆ, ಜೀರಿಗೆ ಹಾಕಿ, ನಂತರ ಒಣ ಮೆಣಸನ್ನು ಮುರಿದು ಹಾಕಿ, ಇಂಗು ಕರಿಬೇವು ಹಾಕಿ ಒಂದು ನಿಮಿಷ ಫ್ರೈ ಮಾಡಿ, ಒಗ್ಗರಣೆಯನ್ನು ಗ್ರೇವಿಗೆ ಸೇರಿಸಿ, ಮಿಕ್ಸ್ ಮಾಡಿ ಮತ್ತೊಮ್ಮೆ 2 ನಿಮಿಷ ಕುದಿಸಿ.
* ನಂತರ ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಗುಜರಾತಿ ಶೈಲಿಯ ಮೊಸರು ಗ್ರೇವಿ ರೆಡಿ.



Click it and Unblock the Notifications
