Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಅನ್ನದ ಜೊತೆ ತಿನ್ನಲು ಹೀರೆಕಾಯಿ ತಂಬ್ಳಿ

ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ತಯಾರಿಸುವ ತಂಬ್ಳಿ ಕೂಡ ರುಚಿಯಾಗಿದ್ದು ಇವತ್ತು ನಾವು ಹೀರೆಕಾಯಿಂದ ತಂಬ್ಳಿ ಮಾಡುವ ವಿಧಾನ ತಿಳಿಯೋಣ:
ಬೇಕಾಗುವ ಸಾಮಗ್ರಿಗಳು:
* ಹೀರೆಕಾಯಿ ಅರ್ಧ ಭಾಗ ಅಥವಾ1
* ಹಸಿಮೆಣಸಿನ ಕಾಯಿ -2
* ಎಳ್ಳು - 1 ಚಮಚ
* ಜೀರಿಗೆ 1 ಚಮಚ
* ತೆಂಗಿನತುರಿ - 1 ಕಪ್
* ಮಜ್ಜಿಗೆ - 2 ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಸಕ್ಕರೆ - 1/2 ಚಮಚ
* ನೀರು - 2 ಕಪ್
* ಎಣ್ಣೆ
* ಸಾಸಿವೆ 1 ಚಮಚ
ಮಾಡುವ ವಿಧಾನ:
1. ಹೀರೆಕಾಯಿಯ ಸಿಪ್ಪೆ ತೆಗೆದು, ಸಣ್ಣಗೆ ಹೆಚ್ಚಿಕೊಳ್ಳಬೇಕು. ಇದಕ್ಕೆ 1 ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಕ್ಕರೆ ಸೇರಿಸಿ ಬೇಯಿಸಬೇಕು.
2. ಬೇಯಿಸಿದ ಹೀರೆಕಾಯಿಯ ನೀರು ಮತ್ತು ಹೋಳನ್ನು ಬೇರೆ-ಬೇರೆ ಪಾತ್ರೆಯಲ್ಲಿ ಇಡಬೇಕು.
3. ಈಗ ಒಗ್ಗರಣೆ ಮಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಎಣ್ಣೆ ಕಾಯಿಸಿ, ಎಳ್ಳು ಮತ್ತು ಜೀರಿಗೆ ಮತ್ತು ಹಸಿಮೆಣಸಿನ ಕಾಯಿಯನ್ನು ಹುರಿಯಬೇಕು.
4. ಹುರಿದ ಸಾಮಗ್ರಿಗಳನ್ನು ಬೇಯಿಸಿದ ಹೀರೆ ಮತ್ತು ತೆಂಗಿನತುರಿಯೊಡನೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬುವಾಗ ಹೀರೆಕಾಯಿ ಬೇಯಿಸಿದ ನೀರನ್ನು ಬಳಸಿ.
5. ನಂತರ ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಮಜ್ಜಿಗೆ ಮತ್ತು ಉಪ್ಪು ಸೇರಿಸಿ ಮಿಶ್ರ ಮಾಡಬೇಕು.
6. ಹೀಗೆ ಮಾಡಿದರೆ ತಂಬ್ಳಿ ರೆಡಿ. ಇದಕ್ಕೆ ತಯಾರಾದ ತಂಬ್ಳಿಗೆ ಒಗ್ಗರಣೆ ಕೊಟ್ಟರೆ ಈ ತಂಬ್ಳಿ ಅನ್ನದ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.



Click it and Unblock the Notifications
