Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರಾಜ್ಮಾ ರಸ್ಮಿಸಾ ಗ್ರೇವಿಯ ರೆಸಿಪಿ
ರಾಜ್ಮಾ ಗ್ರೇವಿಯನ್ನು ಅನೇಕ ರುಚಿಯಲ್ಲಿ ತಯಾರಿಸಬಹುದು. ಇಲ್ಲಿ ನಾವು ಟೊಮೆಟೊ ಪೇಸ್ಟ್ ಮಾಡಿ ಮಾಡುವ ರಾಜ್ಮಾ ರಸ್ಮಿಸಾ ಗ್ರೇವಿಯ ರೆಸಿಪಿ ನೀಡಿದ್ದೇವೆ.
ಮಾಡಲು ಸರಳವಾದ ಈ ರಾಜ್ಮಾ ಗ್ರೇವಿ ತಿನ್ನಲೂ ತುಂಬಾ ರುಚಿಯಾಗಿರುತ್ತದೆ. ಹೊಸದಾಗಿ ಅಡುಗೆ ಕಲಿಯುತ್ತಿರುವವರೂ ಇದನ್ನು ರುಚಿಯಾಗಿ ಮಾಡಬಹುದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣವೇ?

ಬೇಕಾಗುವ ಸಾಮಾಗ್ರಿಗಳು
ರಾಜ್ಮಾ ಒಂದೂವರೆ ಕಪ್( ಒಂದು ರಾತ್ರಿ ನೆನೆ ಹಾಕಿದ್ದು)
ರುಚಿಗೆ ತಕ್ಕ ಉಪ್ಪು
ಎಣ್ಣೆ 3 ಚಮಚ
ಬೇ ಎಲೆಗಳು (bay leaves)
ಈರುಳ್ಳಿ 2
ಸ್ವಲ್ಪ ಶುಂಠಿ
ಬೆಳ್ಳುಳ್ಳಿ ಎಸಳು 6-7
ಟೊಮೆಟೊ 3(ಪೇಸ್ಟ್)
ಕೊತ್ತಂಬರಿ ಪುಡಿ 1 ಚಮಚ
ಜೀರಿಗೆ 1 ಚಮಚ ಪುಡಿ
ಖಾರದ ಪುಡಿ (ರುಚಿಗೆ ತಕ್ಕಷ್ಟು)
ಅರಿಶಿಣ ಪುಡಿ ಅರ್ಧ ಚಮಚ
ಗರಂ ಮಸಾಲ ಪುಡಿ 1 ಚಮಚ
ತಯಾರಿಸುವ ವಿಧಾನ:
* ಬೇಯಲು ತಕ್ಕ ನೀರು ಹಾಕಿ ಸ್ವಲ್ಪ ಉಪ್ಪು ಹಾಕಿ ರಾಜ್ಮಾವನ್ನು ಬೇಯಿಸಿ.
* ನಂತರ ಎಣ್ಣೆಯನ್ನು ಪ್ಯಾನ್ ನಲ್ಲಿ ಹಾಕಿ ಬಿಸಿ ಮಾಡಿ, ನಂತರ ಬೇ ಎಲೆ ಹಾಕಿ, ಈರುಳ್ಳಿ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಶುಂಠಿ ಮತ್ತು ಜಜ್ಜಿದ ಬೆಳ್ಳುಳ್ಳಿ ಹಾಕಿ ಮತ್ತೆ 2-3 ನಿಮಿಷ ಫ್ರೈ ಮಾಡಿ, ಟೊಮೆಟೊ ಪೇಸ್ಟ್ ಹಾಕಿ 2 ನಿಮಿಷ ಫ್ರೈ ಮಾಡಿ ನಂತರ ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ಖಾರದ ಪುಡಿ, ಜೀರಿಗೆ ಪುಡಿ, ಗರಂ ಮಸಾಲ ಪುಡಿ ಹಾಕಿ ಮತ್ತೆ 2-3 ನಿಮಿಷ ಫ್ರೈ ಮಾಡಿ. ಎಣ್ಣೆ ಮೇಲ್ಭಾಗದಲ್ಲಿ ತೇಲುವಷ್ಟು ಹೊತ್ತು ಫ್ರೈ ಮಾಡಿ.
* ನಂತರ ಬೇಯಿಸದ ರಾಜ್ಮಾ ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಸಾಧಾರಣ ಉರಿಯಲ್ಲಿ 10 ನಿಮಿಷ ಬೇಯಿಸಿ. ಮಿಶ್ರಣ ಸ್ವಲ್ಪ ಗಟ್ಟಿಯಾದ ಗ್ರೇವಿ ರೀತಿಯಾಗುವಾಗ ಉಪ್ಪು ಸರಿಯಾಗಿದೆಯೇ ಎಂದು ನೋಡಿ ಉರಿಯಿಂದ ಇಳಿಸಿ.
ರೆಡಿಯಾದ ರಾಜ್ಮಾ ರಸ್ಮಿಸಾ ಗ್ರೇವಿಯನ್ನು ಅನ್ನ ಅಥವಾ ಚಪಾತಿ ಜೊತೆ ಸವಿಯಿರಿ.



Click it and Unblock the Notifications
