Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಾಲಿಗೆಯ ರುಚಿತಣಿಸುವ ತೆಂಗಿನಕಾಯಿನಿಂದ ಮಾಡಲಾದ ಖಾದ್ಯಗಳು
ತೆಂಗಿನಕಾಯಿನಿಂದ ಮಾಡಲಾಗುವ ಖಾದ್ಯವನ್ನು ಯಾರಾದರೂ ಮರೆಯಲು ಸಾಧ್ಯವೇ? ತೆಂಗಿನಕಾಯಿ ಇಲ್ಲದೆ ಯಾವುದೇ ಪದಾರ್ಥಗಳನ್ನು ಪರಿಗಣಿಸಲು ಕೂಡ ಸಾಧ್ಯವಾಗುವುದಿಲ್ಲ. ಅದರಲ್ಲೂ ದಕ್ಷಿಣ ಭಾರತದ ಅಡುಗೆಯಲ್ಲಿ ತೆಂಗಿನಕಾಯಿ ತನ್ನದೇ ಆದ ಛಾಪು ಮೂಡಿಸಿದೆ ! ಭಾರತದ ಎಲ್ಲಾ ಕಡೆಗಳಲ್ಲಿಯೂ, ತೆಂಗಿನಕಾಯಿನಿಂದ ವಿವಿಧ ರೀತಿಯ ರುಚಿಕರವಾದ ಅಡುಗೆಯನ್ನು ಮಾಡಲು ಬಯಸುತ್ತಾರೆ,
ಕೋಳಿ, ಮಟನ್, ಮೊಟ್ಟೆ, ಹಾಗೂ ಯಾವುದೇ ತರಕಾರಿ ಐಟಂಗಳ ತಯಾರಿಕೆಯಲ್ಲಿ ಕೂಡ ತೆಂಗಿನಕಾಯಿಯ ಸ್ವಾದವು ಅದರ ರುಚಿಯನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ. ಹಾಗಾಗಿ ಬೋಲ್ಡ್ ಸ್ಕೈ ತೆಂಗಿನಕಾಯಿನಿಂದ ಮಾಡಲಾಗಿರುವ ರುಚಿಕರವಾದ ರೆಸಿಪಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ, ಬನ್ನಿ ನೀವು ಕೂಡ ತೆಂಗಿನಕಾಯಿನಿಂದ ಮಾಡಲಾಗಿರುವ ರೆಸಿಪಿಗಳನ್ನು ಮಾಡಲು ಪ್ರಯತ್ನಿಸಿ.

ತೆಂಗಿನಕಾಯಿಯ ಟೊಮೇಟೊ ಚಟ್ನಿ
ವಾವ್ ! ಸ್ವಾದಿಷ್ಟಭರಿತವಾದ ಈ ಚಟ್ನಿಯನ್ನು ಇಡ್ಲಿ, ದೋಸೆ, ವಡೆಗಳ ಜೊತೆ ತಿನ್ನುವುದಕ್ಕೆ ಇನ್ನೂ ಮಜವಾಗಿರುತ್ತದೆ. ಖಾರ ಹಾಗೂ ಹುಳಿ ಮಿಶ್ರಿತ ಈ ಚಟ್ನಿಯು ಬಾಯಿಯಲ್ಲಿ ನೀರೂರಿಸುತ್ತದೆ. ತೆಂಗಿನಕಾಯಿನಿಂದ ಹಲವು ರೀತಿಯ ಪದಾರ್ಥಗಳನ್ನು ಬಳಸಿಕೊಂಡು ಅನೇಕ ರೀತಿಯ ಚಟ್ನಿಯನ್ನು ಮಾಡಬಹುದು ಉದಾಹೆರಣೆಗೆ ಕೊತ್ತಂಬರಿ ಮತ್ತು ಕೆಂಪು ಮೆಣಸಿನಕಾಯಿಗಳು, ಟೊಮೇಟೊ ಇತ್ಯಾದಿ. ದಕ್ಷಿಣ ಭಾರತದಲ್ಲಿ ತೆಂಗಿನಕಾಯಿ ಇಲ್ಲದೆ ಚಟ್ನಿಯನ್ನು ಊಹಿಸಲು ಸಾಧ್ಯವಿಲ್ಲ!

ಮೀನಿನ ಪದಾರ್ಥ
ದಕ್ಷಿಣ ಭಾರತದಲ್ಲಿ ಮೀನಿನ ಪದಾರ್ಥವನ್ನು ವಿವಿಧ ರೀತಿಯಲ್ಲಿ ಮಾಡಲು ಪ್ರಯತ್ನಿಸುತ್ತಾರೆ, ಅದರಲ್ಲಿಯೂ ತೆಂಗಿನಕಾಯಿ ಮಿಶ್ರಿತ ಪದಾರ್ಥವು ಅದರ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಕೇರಳ ಶೈಲಿಯಲ್ಲಿ ಮಾಡಲಾಗುವ ಇಂತಹ ಮೀನಿನ ರೆಸಿಪಿಗೆ ಹಿತಕರ ಹಾಗೂ ಪರಿಮಳಯುಕ್ತ ತೆಂಗಿನ ಹಾಲನ್ನು ಸೇರಿಸಿದರೆ ಅದರ ರುಚಿ ಇನ್ನಷ್ಟು ಸ್ವಾದಿಷ್ಟಭರಿತವಾಗಿರುತ್ತದೆ.

ತೆಂಗಿನಕಾಯಿನಿಂದ ಮಾಡಲಾಗಿರುವ ಮೊಟ್ಟೆ ಕರಿ
ತೆಂಗಿನಕಾಯಿನಿಂದ ಮಾಡಲಾಗಿರುವ ಮೊಟ್ಟೆ ಕರಿಯನ್ನು ನೀವು ಪ್ರಯತ್ನಿಸಿರುವಿರಾ? ಇಲ್ಲದಿದ್ದರೆ ಇಂದೇ ಪ್ರಯತ್ನಿಸಿ ! ತೆಂಗಿನಕಾಯಿನಿಂದ ಮಾಡಲಾಗಿರುವ ರುಚಿಕರವಾದ ಹಾಗೂ ಸ್ವಾದಿಷ್ಟವಾದ ಈ ಮೊಟ್ಟೆ ಕರಿ ನಿಮ್ಮ ಖಾದ್ಯದ ರುಚಿಯನ್ನು ಇನ್ನಷ್ಟು ಸ್ವಾದಿಷ್ಟಭರಿತವಾಗಿರುತ್ತದೆ.

ತೆಂಗಿನಕಾಯಿ ಮಟನ್ ಪದಾರ್ಥ
ವಾವ್ ! ದಕ್ಷಿಣ ಭಾರತದ ಶೈಲಿಯಲ್ಲಿ ಮಾಡಲಾಗುವ ಖಾರ ಮಿಶ್ರಿತ ಮಟನ್ ಪದಾರ್ಥವು, ನಾಲಿಗೆಯ ರುಚಿಯನ್ನು ತಣಿಸುವುದರಲ್ಲಿ ಎರಡು ಮಾತಿಲ್ಲ ! ಅದರಲ್ಲೂ ದಕ್ಷಿಣ ಭಾರತದ ಅಡುಗೆಯಲ್ಲಿ ತೆಂಗಿನಕಾಯಿ ಹಾಗೂ ಬೇವಿನ ಸೊಪ್ಪು ಬಳಸುವುದು ಸಾಮಾನ್ಯ. ಅಲ್ಲದೆ ಇಂತಹ ಖಾದ್ಯವನ್ನು ನೀವು ಸುಲಭವಾಗಿ ಪತ್ತೆಹಚ್ಚಬಹುದು. ಇವುಗಳೆರಡು ಪದಾರ್ಥದ ರುಚಿಯನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ. ತೆಂಗಿನಕಾಯಿನಿಂದ ಮಾಡಲಾಗುವ ಈ ರುಚಿಕರವಾದ ಸ್ವಾದವು ನಿಮ್ಮ ನಾಲಿಗೆಯ ರುಚಿಯನ್ನು ಇನ್ನಷ್ಟು ಹೆಚ್ಚಿಸಲಿದೆ.

ತೆಂಗಿನಕಾಯಿಯ ದಾಲ್ (ತೊಗರಿ ಬೇಳೆ ಸಾರು)
ಸಸ್ಯಹಾರಿ ಜನರಿಗೆ ಅಂತೂ ಹೇಳಿ ಮಾಡಿಸಿದಂತಿರುವ ಈ ತೆಂಗಿನಕಾಯಿ ರೆಸಿಪಿ, ಅವರ ನಾಲಿಗೆಯ ರುಚಿಯನ್ನು ಹೆಚ್ಚಿಸುವಲ್ಲಿ ಎರಡು ಮಾತಿಲ್ಲ! ಇದು ಕೇವಲ ಕೆನೆಭರಿತದಿಂದ ಮಾತ್ರ ಕೂಡಿರುವುದಿಲ್ಲ ಬದಲಾಗಿ, ಇನ್ನಷ್ಟು ರುಚಿಕರವಾಗಿರುತ್ತದೆ. ಭಾರತೀಯ ಶೈಲಿಯು ಪ್ರತಿಯೊಂದು ಖಾದ್ಯದಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ ಮತ್ತು ಇನ್ನಷ್ಟು ರುಚಿಕರವನ್ನಾಗಿಸುತ್ತದೆ, ಅಂತೆಯೇ ಖಾರದಿಂದ ಕೂಡಿರುವ ಹಾಗೂ ಸ್ವಾದಿಷ್ಟ ಸುವಾಸನೆಯುಕ್ತ ತೆಂಗಿನಕಾಯಿ ಮಿಶ್ರಿತ ಈ ರೆಸಿಪಿಯು, ನಿಮ್ಮ ನಾಲಿಗೆಯ ರುಚಿಯನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ.



Click it and Unblock the Notifications
