Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಮಸೆದು ಮಾಡುವ ಮಸೊಪ್ಪು ಸಾರು

ಬೇಕಾಗುವ ಸಾಮಾಗ್ರಿಗಳು:
* ಒಂದು ಕಟ್ಟು ಅರಿವೆ ಸೊಪ್ಪು, ಸಬ್ಸಿಗೆ ಸೊಪ್ಪು ಒಂದು ಕಟ್ಟು, ಪಾಲಾಕ್ ಸೊಪ್ಪು ಒಂದು ಕಟ್ಟು, ಸ್ವಲ್ಪ ಕೀರೆ ಸೊಪ್ಪು, ಸ್ವಲ್ಪ ಮೆಂತೆ ಸೊಪ್ಪು
* ಒಂದು ಕಪ್ ತೊಗರಿ ಬೇಳೆ
* ಒಂದು ಈರುಳ್ಳಿ ( ಕತ್ತರಿಸಿದ್ದು)
* 5-8 ಬೆಳ್ಳುಳ್ಳಿ ಎಸಳು
* ಅರ್ಧ ಕಪ್ ತೆಂಗಿನ ತುರಿ
* 2 ಟೊಮೆಟೊ
* 6-8 ಹಸಿ ಮೆಣಸಿನ ಕಾಯಿ
* ಒಂದು ಚಮಚ ಅರಿಶಿಣ ಪುಡಿ
* ಒಂದು ಚಮಚ ಜೀರಿಗೆ
* ರುಚಿಗೆ ತಕ್ಕ ಉಪ್ಪು
ಒಗ್ಗರಣೆಗೆ:
* 1 ಚಮಚ ಎಣ್ಣೆ
* ಸ್ವಲ್ಪ ಸಾಸಿವೆ
ತಯಾರಿಸುವ ವಿಧಾನ:
1. ತೊಗರಿಬೇಳೆಯ ಜೊತೆ ಮೇಲೆ ಹೇಳಿದ ಎಲ್ಲಾ ಸೊಪ್ಪುಗಳು, ಈರುಳ್ಳಿ, ತೆಂಗಿನ ತುರಿ, ಬೆಳ್ಳುಳ್ಳಿ, ಟೊಮೆಟೊ, ಹಸಿಮೆಣಸಿನ ಕಾಯಿ, ಅರಿಶಿ ಪುಡಿ, ಜೀರಿಗೆ ಹಾಕಿ ಬೇಯಿಸಬೇಕು.
2. ನಂತರ ಈ ಮಿಶ್ರಣವನ್ನು ಉರಿಯಿಂದ ತೆಗೆದು ಆರಲು ಬಿಡಬೇಕು. ನಂತರ ಈ ಮಿಶ್ರಣವನ್ನು ನುಣ್ಣನೆ ಅರೆಯಬೇಕು. (ಈ ಮಿಶ್ರಣದ ಪೇಸ್ಟ್ ಗಟ್ಟಿಯಾಗಿರಲಿ)
3. ಈಗ ಸ್ವಲ್ಪ ದೊಡ್ಡದಿರುವ ಪಾತ್ರೆಯನ್ನು ಉರಿಯ ಮೇಲಿಟ್ಟು ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಬೇಕು. ಸಾಸಿವೆ ಚಟಾಪಟ ಶಬ್ದ ಬರುವಾಗ ಅರೆದ ಸೊಪ್ಪಿನ ಮಿಶ್ರಣ ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಿದರೆ ರುಚಿಯಾದ ಮಸೊಪ್ಪು ಸಾರು ರೆಡಿ.



Click it and Unblock the Notifications
