Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಮ್ಮನಿಂದ ನಾ ಕಲಿತ ಹಾಗಾಲಕಾಯಿ ಗೊಜ್ಜು
ಅಮ್ಮಂದಿರ ದಿನದ ವಿಶೇಷವಾಗಿ ಕನ್ನಡ ಬೋಲ್ಡ್ ಸ್ಕೈ ಮುಖಾಂತರ ಅಮ್ಮನಿಂದ ನಾ ಕಲಿತ ಹಾಗಾಲಕಾಯಿ ಗೊಜ್ಜು ಮಾಡುವ ವಿಧಾನ ತಿಳಿಸಲು ಇಷ್ಟಪಡುತ್ತೇನೆ. ನನ್ನ ಪ್ರಿಯವಾದ ಅಡುಗೆಗಳ ಪಟ್ಟಿಯಲ್ಲಿ ಅಮ್ಮ ಕಲಿಸಿದ ಈ ಸಾರು ಕೂಡ ಒಂದು. ಅವಳು ಈ ಸಾರಿಗೆ ಸೇರಿಸುತ್ತಿದ್ದ ಪದಾರ್ಥಗಳೇ ಈ ಸಾರಿನ ರುಚಿ ಹೆಚ್ಚಲು ಪ್ರಮುಖ ಕಾರಣವೆನ್ನಬಹುದು.
ಹುಣಸೆ ಹಣ್ಣು, ಬೆಲ್ಲ ಸೇರಿಸಿ ಮಾಡುವ ಈ ಹಾಗಾಲಕಾಯಿ ಸಾರು ಕಹಿಯಿಲ್ಲದೆ, ಬಾಯಿಯಲ್ಲಿ ನೀರೂರಿಸುವ ರುಚಿ ಇದ್ದ ಕಾರಣದಿಂದಲೇ ಇದನ್ನು ಕಲಿಯಲು ನಾನು ಮನಸ್ಸು ಮಾಡಿದ್ದು. ಅಮ್ಮನಿಂದ ನಾ ಕಲಿತ ಈ ಮ್ಯಾಜಿಕ್ ಗೊಜ್ಜಿನ ರೆಸಿಪಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದು ಅನಿಸಿತು. ಇದನ್ನು ಟ್ರೈ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ.

ಬೇಕಾಗುವ ಸಾಮಾಗ್ರಿಗಳು
ಹಾಗಾಲಕಾಯಿ 4-5(ಕತ್ತರಿಸಿದ್ದು)
ಹುಣಸೆ ಹಣ್ಣು 1 ನಿಂಬೆ ಹಣ್ಣು ಗಾತ್ರದ್ದು( ಬಿಸಿ ನೀರಿನಲ್ಲಿ ನೆನೆ ಹಾಕಿದ್ದು)
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಬೆಲ್ಲ
ಅರಿಶಿಣ 1 ಚಮಚ
ನೀರು 1 ಕಪ್
ಮಸಾಲೆಗೆ ಸಾಮಾಗ್ರಿಗಳು
ತುರಿದ ಕೊಬ್ಬರಿ 2 ಚಮಚ
ಒಣ ಮೆಣಸು 5
ಉದ್ದಿನ ಬೇಳೆ 1 ಚಮಚ
ನೀರು 1/4 ಕಪ್
ಗಸೆಗಸೆ
ಒಗ್ಗರಣೆಗೆ
ಎಣ್ಣೆ 2 ಚಮಚ
ಸಾಸಿವೆ ಅರ್ಧ ಚಮಚ
ಉದ್ದಿನ ಬೇಳೆ ಅರ್ಧ ಚಮಚ
ಸ್ವಲ್ಪ ಕರಿಬೇವಿನ ಎಲೆ
ತಯಾರಿಸುವ ವಿಧಾನ:
* ಕತ್ತರಿಸಿದ ಹಾಗಾಲಕಾಯಿಯನ್ನು 1 ಚಮಚ ಅರಿಶಿಣ ಹಾಕಿದ ನೀರಿನಲ್ಲಿ 10 ನಿಮಿಷ ಹಾಕಿಡಿ.
* ಕಡಿಮೆ ಉರಿಯಲ್ಲಿ ಒಣ ಮೆಣಸನ್ನು ರೋಸ್ಟ್ ಮಾಡಿ, ಜೊತೆಗೆ ಉದ್ದಿನ ಬೇಳೆಯನ್ನು ಹಾಕಿ ರೋಸ್ಟ್ ಮಾಡಿ ತಣ್ಣಗಾಗಲು ಇಡಿ.
* ಕಡಿಮೆ ಉರಿಯಲ್ಲಿ ಗಸೆಗಸೆಯನ್ನು ಹುರಿದು ಬದಿಯಲ್ಲಿಡಿ.
* ಈಗ ಈ ಎಲ್ಲಾ ಸಾಮಾಗ್ರಿಗಳನ್ನು ಹಾಕಿ, ತೆಂಗಿನ ತುರಿ ಸೇರಿಸಿ1/4 ಕಪ್ ನೀರು ಹಾಕಿ ನುಣ್ಣನೆ ರುಬ್ಬಿಕೊಳ್ಳಿ.
* ಈಗ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಅದರಲ್ಲಿ ಸಾಸಿವೆ ಹಾಕಿ, ನಂತರ ಉದ್ದಿನ ಬೇಳೆ, ಕರಿಬೇವಿನ ಎಲೆ ಹಾಕಿ 1-2 ನಿಮಿಷ ಹುರಿದು ಈಗ ಹಾಗಾಲಕಾಯಿಯನ್ನು ಹಿಂಡಿ ಪಾತ್ರೆಗೆ ಹಾಕಿ, 10 ನಿಮಿಷದವರೆಗೆ ಫ್ರೈ ಮಾಡಿ. ನಂತರ ಹುಣಸೆ ಹಣ್ಣಿನ ರಸ ಸೇರಿಸಿ 10 ನಿಮಿಷ ಬೇಯಿಸಿ. ಹಾಗಾಲಕಾಯಿ ಬೆಂದ ನಂತರ ರುಬ್ಬಿದ ಮಸಾಲೆ, ಸ್ವಲ್ಪ ಬೆಲ್ಲ, ರುಚಿಗೆ ತಕ್ಕ ಉಪ್ಪು ಸೇರಿಸಿ ಆಗಾಗ ಸೌಟ್ ನಿಂದ ತಿರುಗಿಸುತ್ತಾ ಮತ್ತೆ 5 ನಿಮಿಷ ಬೇಯಿಸಿದರೆ ಅನ್ನದ ಜೊತೆ ಸವಿಯಲು ರುಚಿರುಚಿಯಾದ ಹಾಗಾಲಕಾಯಿ ಗೊಜ್ಜು ರೆಡಿ.



Click it and Unblock the Notifications
