Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮನೆಯಲ್ಲಿಯೆ ಮಾಡಿ ರೆಸ್ಟೋರೆಂಟ್ ರುಚಿಯ ಅಡುಗೆ!
ರೆಸ್ಟೋರೆಂಟ್ ಗಳಲ್ಲಿ ಸಿಗುವ ಮಲೈ ಕೋಫ್ತಾದ ರುಚಿ ನೋಡುವಾಗ ನಮಗೂ ಇಷ್ಟು ರುಚಿಕರವಾದ ಅಡುಗೆ ಮಾಡಲು ಬರುತ್ತಿದ್ದರೆ ಚೆನ್ನಾಗಿತ್ತು. ಇಲ್ಲಿ ಒಬ್ಬರಿಗೆ ಕೊಡುವ ಹಣದಲ್ಲಿ ಮನೆ ಮಂದಿಯೆಲ್ಲಾ ಕುಳಿತು ತಿನ್ನಬಹುದಾಗಿತ್ತು ಅನ್ನಿಸುತ್ತದೆ. ಆದರೆ ಮರುಕ್ಷಣ ಇಷ್ಟು ರುಚಿಕರವಾದ ಅಡುಗೆ ಮಾಡಲು ತನ್ನಿಂದ ಸಾಧ್ಯನಾ ಎಂಬ ಸಂಶಯ ಉಂಟಾಗುತ್ತದೆ. ಮಲೈ ಕೋಫ್ತಾ ಅಡುಗೆ ಮಾಡಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ. ಈ ರೆಸಿಪಿಯಂತೆ ಮಾಡಿದರೆ ರೆಸ್ಟೋರೆಂಟ್ ಗಳಂತೆಯೇ ರುಚಿಕರವಾದ ಅಡುಗೆ ಮನೆಯಲ್ಲಿಯೇ ಮಾಡಬಹುದಾಗಿದೆ.

ಕೋಫ್ತಾಕ್ಕೆ ಬೇಕಾಗುವ ಸಾಮಾಗ್ರಿಗಳು:
* ಅರ್ಧ ಕೆಜಿ ಆಲೂಗೆಡ್ಡೆ
* ಪುಡಿಪುಡಿ ಮಾಡಿದ ಪನ್ನೀರ್ 3-4 ಚಮಚ
* ಗಟ್ಟಿಯಾದ ಮಲೈ
ಮಲೈ ತಯಾರಿಸುವ ವಿಧಾನ:
ಹಾಲನ್ನು ಅಗಲವಾದ ಬಾಯಿ ಇರುವ ಪಾತ್ರೆಗೆ ಹಾಕಿ ಕುದಿಸಬೇಕು. ನಂತರ ಉರಿ ಕಡಿಮೆ ಮಾಡಿ ಹಾಲನ್ನು ಕಾಯಿಸಬೇಕು. ಹಾಲು ಕುದಿ ಬಂದು ಹಳದಿ ಬಣ್ಣಕ್ಕೆ ತಿರುಗುತ್ತದೆ. ಹೀಗೆ ತಿರುಗಿಸುತ್ತಿರುವ ಮೇಲ್ಭಾಗದಲ್ಲಿ ಹಾಲು ಗಟ್ಟಿಯಾಗಿ ಬರಲಾರಂಭಿಸುತ್ತದೆ. ಇದನ್ನು ತೆಗೆದು ಒಂದು ಪಾತ್ರೆಯಲ್ಲಿ ಹಾಕಿದರೆ ಗಟ್ಟಿಯಾಗುತ್ತದೆ. ಇದೇ ಮಲೈ ರೆಡಿ.
* ಗೋಡಂಬಿ 4-5
* ಸ್ವಲ್ಪ ಒಣ ದ್ರಾಕ್ಷಿ
* 2-3 ಕತ್ತರಿಸಿದ ಹಸಿ ಮೆಣಸಿನಕಾಯಿ
* 1/4 ಚಮಚ ಸಕ್ಕರೆ
* ಒಂದು ಚಮಚ ಕೊತ್ತಂಬರಿ
* ಒಂದು ಚಮಚ ಜೀರಿಗೆ
* ಒಂದು ಚಮಚ ಕೆಂಪು ಮೆಣಸಿನ ಪುಡಿ
* ಅರ್ಧ ಚಮಚ ಏಲಕ್ಕಿ ಪುಡಿ
* ರುಚಿಗೆ ತಕ್ಕ ಉಪ್ಪು
* ಎಣ್ಣೆ
ಗ್ರೇವಿ ಮಾಡಲು ಬೇಕಾಗುವ ಸಾಮಾಗ್ರಿಗಳು:
* 2 ಕತ್ತರಿಸಿದ ಈರುಳ್ಳಿ
* 3 ಎಸಳು ಬೆಳುಳ್ಳಿ
*ಸ್ವಲ್ಪ ಜಜ್ಜಿದ ಶುಂಠಿ
* ಒಂದು ಚಮಚ ಕೆಂಪು ಮೆಣಸಿನ ಪುಡಿ
* ಅರ್ಧ ಚಮಚ ಗರಂ ಮಸಾಲ ಪುಡಿ
* ಎರಡು ಚಮಚ ಗಸೆಗಸೆ
* ಅರ್ಧ ಚಮಚ ಕೊತ್ತಂಬರಿ ಪುಡಿ
* ಅರ್ಧ ಚಮಚ ಜೀರಿಗೆ
* ಅರ್ಧ ಚಮಚ ಸಕ್ಕರೆ
* ಒಂದು ಚಮಚ ನೆಲಗಡಲೆ ಅಥವಾ ಗೋಡಂಬಿ
ಮಲೈ ಕೋಫ್ತಾ ತಯಾರಿಸುವ ವಿಧಾನ:
1. ಆಲೂಗೆಡ್ಡೆಯನ್ನು ಚೆನ್ನಾಗಿ ಬೇಯಿಸಿ, ಸಿಪ್ಪೆ ಸುಲಿದು ಹಿಸುಕಿ, ಅದಕ್ಕೆ ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಶ್ರ ಮಾಡಿ ಬದಿಯಲ್ಲಿ ಇಡಬೇಕು.
2. ನಂತರ ಉಳಿದ ಎಲ್ಲಾ ಕೋಫ್ತಾ ಸಾಮಾಗ್ರಿಗಳನ್ನು ಆಲೂಗೆಡ್ಡೆ ಪೇಸ್ಟ್ ಗೆ ಹಾಕಿ ಮಿಶ್ರ ಮಾಡಬೇಕು. ನಂತರ ಅದನ್ನು ಉಂಡೆ ಕಟ್ಟಬೇಕು.
3. ಹೀಗೆ ಉಂಡೆ ಕಟ್ಟುವಾಗ ಸಾಮಾಗ್ರಿಗಳ ಮಿಶ್ರಣವನ್ನು ಸ್ವಲ್ಪ ಮಧ್ಯದಲ್ಲಿ ಇಟ್ಟು ಕಟ್ಟಿ.
4. ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಈ ಉಂಡೆ ಹಾಕಿದರೆ ಕೋಫ್ತಾ ರೆಡಿ. ನಂತರ ರೆಡಿಯಾದ ಕೋಫ್ತಾವನ್ನು ಬದಿಯಲ್ಲಿ ಇಡಬೇಕು.
5. ಈಗ ಈರುಳ್ಳಿ, ಶುಂಠಿ, ಗಸೆಗಸೆ, ಕೆಂಪು ಮೆಣಸಿನ ಪುಡಿ, ಅರ್ಧ ಚಮಚ ಗರಂ ಮಸಾಲ ಪುಡಿ, ಅರ್ಧ ಚಮಚ ಕೊತ್ತಂಬರಿ ಪುಡಿ,ಅರ್ಧ ಚಮಚ ಜೀರಿಗೆ
ಅರ್ಧ ಚಮಚ ಸಕ್ಕರೆಯನ್ನು ಮಿಶ್ರ ಮಾಡಿ ರುಬ್ಬಿದರೆ ಗ್ರೇವಿ ಪೇಸ್ಟ್ ರೆಡಿ.
6. ನಂತರ ಬಾಣಲೆಗೆ 3 ಚಮಚದಷ್ಟು ಎಣ್ಣೆ ಹಾಕಿ ಅದರಲ್ಲಿ ಈ ಈರುಳ್ಳಿ, ಶುಂಠಿ, ಗಸೆಗಸೆ ಮಸಾಲಪುಡಿ ಹಾಕಿ ತಯಾರಿಸಿದ ಪೇಸ್ಟ್ ಹಾಕಿ ಎಣ್ಣೆ ಮೇಲ್ಭಾಗದಲ್ಲಿ ಬರುವವರೆಗೆ ಕುದಿಸಬೇಕು.
7. ನಂತರ ಕತ್ತರಿಸಿದ ಟೊಮೆಟೊ ಮತ್ತು ಮೆಣಸಿನ ಪುಡಿ ಹಾಕಬೇಕು. ರುಚಿಗೆ ತಕ್ಕ ಉಪ್ಪು ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿ.
8. ಈಗ ಸ್ವಲ್ಪ ಸಕ್ಕರೆ ಮತ್ತು ನೆಲ ಕಡಲೆ ಅಥವಾ ಗೋಡಂಬಿ ಹಾಕಬೇಕು.
9. ಈಗ ಗ್ರೇವಿಗೆ ಮಲೈ ಹಾಕಿ ಕುದಿಸಬೇಕು. ಬೇಕಿದ್ದರೆ ಸ್ವಲ್ಪ ನೀರು ಹಾಕಬಹುದು. ಗ್ರೇವಿ ಕುದಿಯುವಾಗ ಕೋಪ್ತಾ ಹಾಕಿ, ಅಡುಗೆಯನ್ನು ಉರಿಯಿಂದ ತೆಗೆದು ಬಿಡಬೇಕು.
ಸೂಚನೆ: ಈ ಅಡುಗೆಯಲ್ಲಿ ಬಡಿಸುವ ಸ್ವಲ್ಪ ಮೊದಲು ಗ್ರೇವಿಗೆ ಕೋಫ್ತಾ ಹಾಕಿ. ಇಲ್ಲದಿದ್ದರೆ ಕೋಫ್ತಾ ಗ್ರೇವಿಯಲ್ಲಿ ಕಲೆಸಿ ಹೋಗುವುದು.



Click it and Unblock the Notifications
