Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೆಂಡೆಕಾಯಿ ಕಿಚಡಿ -ಗ್ರೇವಿ ರೆಸಿಪಿ
ಬೆಂಡೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಖಾದ್ಯವನ್ನು ತಯಾರಿಸುವಾಗ ಬೆಂಡೆಕಾಯಿಯನ್ನು ಎಣ್ಣೆಯಲ್ಲಿ ಚೆನ್ನಾಗಿ ಹುರಿದು ಹಾಕಿದರೆ ಮಾತ್ರ ತಿನ್ನಲು ರುಚಿಕರವಾಗಿರುತ್ತದೆ. ಬೆಂಡೆಕಾಯಿಂದ ತಯಾರಿಸುವ ಪಲ್ಯದ ರೆಸಿಪಿ ಈ ಹಿಂದೆ ನೀಡಿದ್ದೆವು.
ಇಲ್ಲಿ ನಾವು ಬೆಂಡೆಕಾಯಿಯಿಂದ ತಯಾರಿಸುವ ಕಿಚಡಿ ಅಂದರೆ ಗ್ರೇವಿ ರೀತಿಯ ಸಾರಿನ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಾಗ್ರಿಗಳು:
* ಬೆಂಡೆಕಾಯಿ ಕಾಲು ಕೆಜಿ
* ಹಸಿ ಮೆಣಸಿನ ಕಾಯಿ 4
* ತುರಿದ ತೆಂಗಿನ ಕಾಯಿ 1 ಕಪ್
* ಒಣ ಮೆಣಸು 2
* ಸಾಸಿವೆ ಅರ್ಧ ಚಮಚ
* ಸ್ವಲ್ಪ ಅರಿಶಿಣ
* ಕರಿ ಬೇವಿನ ಎಲೆ
* ಮೊಸರು 2 ಚಮಚ
* ರುಚಿಗೆ ತಕ್ಕ ಉಪ್ಪು
* ಎಣ್ಣೆ
ತಯಾರಿಸುವ ವಿಧಾನ:
* ಸ್ವಲ್ಪ ಎಣ್ಣೆಯನ್ನು ಬಾಣಲೆಯಲ್ಲಿ ಹಾಕಿ ಬಿಸಿ ಮಾಡಿ ನಂತರ ಅದಕ್ಕೆ ಕತ್ತರಿಸಿ, ಶುಚಿ ಮಾಡಿದ ಬೆಂಡೆಕಾಯಿ ಹಾಕಿ ಚೆನ್ನಾಗಿ ಹುರಿಯಬೇಕು. ನಂತರ ಅದನ್ನು ಒಂದು ಬಟ್ಟಲಿನಲ್ಲಿ ಹಾಕಿಡಬೇಕು.
* ನಂತರ ತೆಂಗಿನಕಾಯಿಗೆ ಹಸಿ ಮೆಣಸಿನ ಕಾಯಿ ಹಾಕಿ ಪೇಸ್ಟ್ ಮಾಡಬೇಕು.
* ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಬೇಕು. ನಂತರ ಕರಿಬೇವಿನ ಎಲೆ ಹಾಕಿ ಅದರಲ್ಲಿ ಕತ್ತರಿಸಿದ ಒಣ ಮೆಣಸನ್ನು ಹಾಕಿ 1 ನಿಮಿಷ ಕಾಲ ಹುರಿಯಬೇಕು.
* ನಂತರ ಅರೆದ ತೆಂಗಿನಕಾಯಿಯನ್ನು ಹಾಕಿ 4-5 ನಿಮಿಷ ಕಾಲ ಸೌಟ್ ನಿಂದ ಆಡಿಸುತ್ತಾ ಹುರಿಯಬೇಕು. ನಂತರ 2 ಚಮಚ ಮೊಸರು ಸೇರಿಸಬೇಕು. ನಂತರ ರುಚಿಗೆ ತಕ್ಕ ಉಪ್ಪು ಹಾಕಿ, ಅರಿಶಿಣ ಸೇರಿಸಿ, ಫ್ರೈ ಮಾಡಿದ ಬೆಂಡೆಕಾಯಿಯನ್ನು ಹಾಕಿ 6-7 ನಿಮಿಷ ಕುದಿಸಿದರೆ ಬೆಂಡೆಕಾಯಿ ಕಿಚಡಿ ರೆಡಿ.



Click it and Unblock the Notifications
