Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಕಾಶ್ಮೀರಿ ಮೇತಿ ಚಮನ್
ಈ ಸಾರನ್ನು ಮೆಂತೆ ಮತ್ತು ಪಾಲಾಕ್ ಸೊಪ್ಪನ್ನು ಬಳಸಿ ತಯಾರಿಸಲಾಗಿದೆ. ಸೊಪ್ಪನ್ನು ಪೇಸ್ಟ್ ಮಾಡಿ ಅದಕ್ಕೆ ಸರಿಯಾದ ಮಸಾಲೆ ಸಾಮಾಗ್ರಿಗಳನ್ನು ಹಾಕಿ, ಫ್ರೈ ಮಾಡಿದ ಪನ್ನೀರ್ ಹಾಕಿ ತಯಾರಿಸುವ ಗಟ್ಟಿಯಾದ ಈ ಸಾರು ತುಂಬಾ ಸ್ವಾದಿಷ್ಟಕರ ಮಾತ್ರವಲ್ಲ, ಆರೋಗ್ಯಕರ ಕೂಡ ಹೌದು.
ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
ಬೇಕಾಗುವ ಸಾಮಾಗ್ರಿಗಳು
ಸಾಸಿವೆ ಎಣ್ಣೆ 3 ಚಮಚ
ಜೀರಿಗೆ ಅರ್ಧ ಚಮಚ
ಈರುಳ್ಳಿ 2-3
ಹಸಿ ಮೆಣಸಿನಕಾಯಿ 3-4
ಮೆಂತೆ ಸೊಪ್ಪು 2 ಕಟ್ಟು
ಪಾಲಾಕ್ 2 ಕಟ್ಟು
ರುಚಿಗೆ ತಕ್ಕ ಉಪ್ಪು
ಕೊತ್ತಂಬರಿ ಪುಡಿ 2 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಗರಂ ಮಸಾಲ ಪುಡಿ 1 ಚಮಚ
ಸಕ್ಕರೆ 1 ಚಮಚ
ನಿಂಬೆ ರಸ 2 ಚಮಚ
ಫ್ರೆಶ್ ಕ್ರೀಮ್ 4 ಚಮಚ
ಪನೀರ್ 200 ಗ್ರಾಂ
ತಯಾರಿಸುವ ವಿಧಾನ:

ಪನ್ನೀರ್ ಅನ್ನು ಪ್ರೈ ಮಾಡಿ
* ಪ್ಯಾನ್ ಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಪನೀರ್ ಹಾಕಿ ಅದು ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ಇಲ್ಲಿ ನಾನು ಗ್ರಿಲ್ಡ್ ಪ್ಯಾನ್ ಬಳಸಿ ಪನ್ನೀರ್ ಫ್ರೈ ಮಾಡಿದೆ.

ಸೊಪ್ಪಿನ ಪೇಸ್ಟ್
* ಪಾಲಾಕ್ ಮತ್ತು ಮೆಂತೆ ಸೊಪ್ಪನ್ನು ಸೋಸಿ.
* ನಂತರ ನೀರನ್ನು ಒಂದು ಪಾತ್ರೆಯಲ್ಲಿ ಕುದಿಸಿ, ನೀರು ಕುದಿ ಬರುವಾಗ ಮೆಂತೆ ಸೊಪ್ಪು ಮತ್ತು ಪಾಲಾಕ್ ಸೊಪ್ಪನ್ನು ಹಾಕಿ 2 ನಿಮಿಷ ಕುದಿಸಿ, ನಂತರ ತಣ್ಣೀರಿನಲ್ಲಿ ತೊಳೆದು, ನಂತರ ಮಿಕ್ಸಿಯಲ್ಲಿ ಹಾಕಿ ಗ್ರೈಂಡ್ ಮಾಡಬೇಕು.

ತಯಾರಿ
* ಈಗ ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿ ಮಾಡಬೇಕು, ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಬೇಕು, ಜೀರಿಗೆ ಚಟಾಪಟಾ ಶಬ್ದ ಮಾಡುವಾಗ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ.

ತಯಾರಿ
* ನಂತರ ಕೊತ್ತಂಬರಿ ಪುಡಿ, ಅರಿಶಿಣ ಪುಡಿ ಹಾಕಿ ಒಂದು ನಿಮಿಷ ಫ್ರೈ ಮಾಡಿ, ನಂತರ ಪೇಸ್ಟ್ ಮಾಡಿದ ಸೊಪ್ಪನ್ನು ಹಾಕಿ, 1 ಕಪ್ ನೀರು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಿ.

ತಯಾರಿ
* ನಂತರ ಸಕ್ಕರೆ, ಫ್ರೆಶ್ ಕ್ರೀಮ್, ನಿಂಬೆ ರಸ, ಗರಂ ಮಸಾಲ ಹಾಕಿ ಒಂದು ನಿಮಿಷ ಕುದಿಸಿ.
* ಈಗ ಫ್ರೈ ಮಾಡಿದ ಪನ್ನೀರ್ ಹಾಕಿ ಮತ್ತೆ 2 ನಿಮಿಷ ಕುದಿಸಿ, ಉರಿಯಿಂದ ಇಳಿಸಿ ಬಿಸಿ-ಬಿಸಿ ಇರುವಾಗಲೇ ರೊಟ್ಟಿ ಅಥವಾ ಅನ್ನದ ಜೊತೆ ಸರ್ವ್ ಮಾಡಿ.



Click it and Unblock the Notifications
