Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕಡಾಯಿ ಮಶ್ರೂಮ್ ಕರಿ ರೆಸಿಪಿ
ಅಣಬೆಯಿಂದ ಸಾರು, ಸ್ಟಾಟರ್ಸ್, ಗ್ರೇವಿ, ಪಲ್ಯ ಹೀಗೆ ಅನೇಕ ಬಗೆಯ ಅಡುಗೆಗಳನ್ನು ತಯಾರಿಸಬಹುದು. ಅಣಬೆ ಸಾರನ್ನು ತೆಂಗಿನಕಾಯಿ ಹಾಕಿ ಮಾಡಬಹುದು, ಇಲ್ಲದಿದ್ದರೆ ಬರೀ ಮಸಾಲೆ ಪದಾರ್ಥಗಳನ್ನು ಮಾತ್ರ ಹಾಕಿ ತಯಾರಿಸಬಹುದು.
ಇಲ್ಲಿ ನಾವು ಮಸಾಲೆ ಸಾಮಾಗ್ರಿಗಳನ್ನು ಬಳಸಿ ಮಾಡುವ ಕಡಾಯಿ ಅಣಬೆ ಸಾರಿನ (ಕಡಾಯಿ ಮಶ್ರೂಮ್ ಕರಿ) ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿಗಳು:
* ಅಣಬೆ 250 ಗ್ರಾಂ
* ಈರುಳ್ಳಿ 2
* ಹಸಿ ಮೆಣಸಿನ ಕಾಯಿ 1 (ಕತ್ತರಿಸಿದ್ದು)
* ದುಂಡು ಮೆಣಸಿನ ಕಾಯಿ 1
* ಟೊಮೆಟೊ 2-3
* ಅರ್ಧ ಇಂಚಿನಷ್ಟು ದೊಡ್ಡದಿರುವ ಶುಂಠಿ
* 4-5 ಬೆಳ್ಳುಳ್ಳಿ ಎಸಳು
* ಕೆಂಪು ಮೆಣಸಿನ ಪುಡಿ (ಖಾರಕ್ಕೆ ತಕ್ಕಷ್ಟು)
* ಅರಿಶಿಣ ಪುಡಿ ಅರ್ಧಚಮಚ
* ಗರಂ ಮಸಾಲ 1 ಚಮಚ
* ರುಚಿಗೆ ತಕ್ಕ ಉಪ್ಪು
* ತುಪ್ಪ3-4ಚಮಚ
* ನೀರು 1 ಕಪ್
* ಕೊತ್ತಂಬರಿ ಸೊಪ್ಪು(ಅಲಂಕಾರಕ್ಕೆ)
ತಯಾರಿಸುವ ವಿಧಾನ:
* ಅಣಬೆಯನ್ನು ಶುಚಿ ಮಾಡಿ ಕತ್ತರಿಸಿಡಬೇಕು.
* ಶುಂಠಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಎಸಳು ಇವುಗಳನ್ನು ಅರೆದು ಪೇಸ್ಟ್ ರೀತಿಯಲ್ಲಿ ಮಾಡಿಡಬೇಕು.
* ಈಗ ಕಡಾಯಿಯಲ್ಲಿ ತುಪ್ಪ ಹಾಕಿ ಬಿಸಿ ಮಾಡಬೇಕು. ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಈಗ ಶುಂಠಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಹಾಕಿದ ತಯಾರಿಸಿದ ಪೇಸ್ಟ್ ಅನ್ನು ಹಾಕಬೇಕು.
* ನಂತರ ದುಂಡು ಮೆಣಸಿನ ಕಾಯಿ ಹಾಗೂ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಬೇಕು. ನಂತರ ಖಾರದ ಪುಡಿ ಹಾಗೂ ಅರಿಶಿಣ ಪುಡಿ ಹಾಕಿ, ಕತ್ತರಿಸಿದ ಅಣಬೆ ಹಾಕಿ 2-3 ನಿಮಿಷ ಹುರಿದು. ಒಂದು ಲೋಟ ನೀರು ಹಾಕಿ ಗರಂ ಮಸಾಲ ಹಾಗೂ ರುಚಿಗೆ ತಕ್ಕ ಉಪ್ಪು ಸೇರಿಸಿ ಅಣಬೆ ಬೇಯುವವರೆಗೆ ಸೌಟ್ ನಿಂದ ಆಗಾಗ ತಿರುಗಿಸುತ್ತಾ ಬೇಯಿಸಬೇಕು.
* ನಂತರ ಉರಿಯಿಂದ ಇಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಕಡಾಯಿ ಮಶ್ರೂಮ್ ಕರಿ ರೆಡಿ.



Click it and Unblock the Notifications
