Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಾಯಿ ರುಚಿ ಹೆಚ್ಚಿಸುತ್ತೆ ಕಡಾಯಿ ಅಣಬೆ ಗ್ರೇವಿ
ಅಣಬೆ ರುಚಿಕರವಾದ ಆಹಾರ ಮಾತ್ರವಲ್ಲ, ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಫ್ರೈ ಮಾಡಿ ತಿನ್ನುವುದಕ್ಕಿಂತ ಸಾರು ಅಥವಾ ಗ್ರೇವಿ ರೀತಿ ಮಾಡಿ ತಿನ್ನುವುದು ಮತ್ತಷ್ಟು ಒಳ್ಳೆಯದು. ಅಣಬೆ ಸಾರು ಮಾಡಿದರೆ ಅನ್ನದ ಜೊತೆ ತಿನ್ನಬಹುದು ಅಥವಾ ಚಪಾತಿ, ರೊಟ್ಟಿ ಇವುಗಳನ್ನು ನೆಚ್ಚಿಕೊಂಡು ತಿನ್ನಲು ತುಂಬಾ ರಚಿಕರವಾಗಿರುತ್ತದೆ. ಇವತ್ತು ನಾವು ಕಡಾಯಿ ಅಣಬೆ ಗ್ರೇವಿ ಮಾಡುವ ವಿಧಾನ ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು:
* 200 ಗ್ರಾಂ ಅಣಬೆ
* 1 ಕತ್ತರಿಸಿದ ಕ್ಯಾಪ್ಸಿಕಂ (ದುಂಡು ಮೆಣಸಿನ ಕಾಯಿ)
* 2 ಈರುಳ್ಳಿ
* 4 ಟೊಮೆಟೊ
* ಶುಂಠಿ (1 ಚಿಕ್ಕ ತುಂಡು)
* 5-6 ಬೆಳ್ಳುಳ್ಳಿ ಎಸಳು
* 2 ಹಸಿ ಮೆಣಸಿನ ಕಾಯಿ
* ರುಚಿಗೆ ತಕ್ಕ ಉಪ್ಪು
* 1/2 ಚಮಚ ಕೆಂಪು ಮೆಣಸಿನ ಪುಡಿ
* 1 ಚಮಚ ಕೊತ್ತಂಬರಿ ಪುಡಿ
* 1/4 ಚಮಚ ಅರಿಶಿನ ಪುಡಿ
* 1/2 ಚಮಚ ಗರಂ ಮಸಾಲ
* 4 ಚಮಚ ತುಪ್ಪ
ತಯಾರಿಸುವ ವಿಧಾನ:
1. ಅಣಬೆಯನ್ನು ಶುಚಿಗೊಳಿಸಿ, ಕತ್ತರಿಸಿ ಚೆನ್ನಾಗಿ ತೊಳೆಯಬೇಕು. ನಂತರ ಕ್ಯಾಪ್ಸಿಕಂ ಅನ್ನು ಕತ್ತರಿಸಬೇಕು.
2. ಈರುಳ್ಳಿ ಮತ್ತು ಟೊಮೆಟೊವನ್ನು ಕತ್ತರಿಸಬೇಕು.
3. ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ, ಶುಂಠಿಯನ್ನು ಪೇಸ್ಟ್ ರೀತಿ ಮಾಡಬೇಕು.
4. ಈಗ ಬಾಣಲೆಯನ್ನು ಬಿಸಿ ಮಾಡಿ ತುಪ್ಪ ಹಾಕಿ ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
5. ನಂತರ ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ, ಶುಂಠಿ ಹಾಕಿ ತಯಾರಿಸಿದ ಪೇಸ್ಟ್ ಹಾಕಿ 1-2 ನಿಮಿಷ ಬಿಸಿ ಮಾಡಬೇಕು.
6. ಈಗ ಟೊಮೆಟೊ ಹಾಕಿ, ಟೊಮೆಟೊ ಮೆತ್ತಾಗುವವರೆಗೆ ಸೌಟ್ ನಿಂದ ಆಡಿಸುತ್ತಾ ಬಿಸಿ ಮಾಡಬೇಕು.
7. ಈಗ ರುಚಿಗೆ ತಕ್ಕ ಉಪ್ಪು, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ ಹಾಕಿ ಮಿಶ್ರ ಮಾಡಬೇಕು. ನಂತರ ಅಣಬೆ ಹಾಕಿ ಅರ್ಧ ಕಪ್ ನೀರು ಹಾಕಬೇಕು.
8. ನಂತರ ಅಣಬೆ ಬೇಯುವವರೆಗೆ ಬೇಯಿಸಬೇಕು.
9. ನಂತರ ಕ್ಯಾಪ್ಸಿಕಂ ಹಾಕಿ 3-4 ನಿಮಿಷ ಬೇಯಿಸಿ ಉರಿಯಿಂದ ತೆಗೆದರೆ ರುಚಿಕರವಾದ ಕಡಾಯಿ ಅಣಬೆ ಗ್ರೇವಿ ರೆಡಿ.



Click it and Unblock the Notifications
