Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಹಲಸಿನಕಾಯಿ ಸಾರು(ಗುಜ್ಜೆ) ರುಚಿ ನೋಡಿದ್ದೀರಾ?
ಹಲಸಿನಕಾಯಿ ಸಾರು ಬೆಂಗಳೂರಿಗಿಂತ ಮಲೆನಾಡು, ಕೊಡಗು, ಮಂಗಳೂರು ಕಡೆ ತುಂಬಾ ಫೇಮಸ್. ಈ ಸಾರನ್ನು ಕೊಡಗಿನಲ್ಲಿ ನಾವು ಗುಜ್ಜೆ ಸಾರು ಎಂದು ಕರೆಯುತ್ತೇವೆ. ಮಿಡಿ ಹಲಸಿನಕಾಯಿಯಿಂದ ಸಾರು, ಪಲ್ಯ, ಪೋಡಿ ಅಂತ ನಾನಾ ಖಾದ್ಯಗಳನ್ನು ತಯಾರಿಸುತ್ತೇವೆ.
ಹಲಸಿನಕಾಯಿಂದ ಮಾಡಿದ ಖಾದ್ಯಗಳ ರುಚಿ ನೋಡಿದವರು ಹಲಸಿನಕಾಯಿ ಸೀಸನ್ ಮುಗಿದ ಮೇಲೆ, ಹಲಸಿನ ಮರ ನೋಡಿ ಇದರಲ್ಲಿ ಬೇಗ ಕಾಯಿ ಬಿಡಬಾರದೇ ಎಂದು ಯೋಚಿಸುವುದಂತು ದಿಟ.
ಇಲ್ಲಿ ನಾನು ಗುಜ್ಜೆ ಸಾರು ಮಾಡುವ ವಿಧಾನ ಹೇಳಿದ್ದೇನೆ ನೋಡಿ:

ಬೇಕಾಗುವ ಪದಾರ್ಥಗಳು
ಬಲಿತಿರದ ಹಲಸಿನಕಾಯಿ( ನಾವುಗುಜ್ಜೆ ಅಂತೀವಿ) 1
ಅಲಸಂದೆ ಅಥವಾ ಕಡಲೆ 1/4 ಕಪ್
ಈರುಳ್ಳಿ 2 ಮತ್ತು ಹಸಿ ಮೆಣಸಿನಕಾಯಿ 2
ಬೆಳ್ಳುಳ್ಳಿ ಎಸಳು 8-10
ಹಸಿ ಮೆಣಸಿನಕಾಯಿ 2
ಅರಿಶಿಣ ಪುಡಿ ಅರ್ಧ ಚಮಚ
ಖಾರದ ಪುಡಿ (ಖಾರಕ್ಕೆ ತಕ್ಕಷ್ಟು)
ಕೊತ್ತಂಬರಿ ಪುಡಿ 1 ಚಮಚ
ಗರಂ ಮಸಾಲ ಅರ್ಧ ಚಮಚ
ಜೀರಿಗೆ 1 ಚಮಚ
ತೆಂಗಿನ ತುರಿ 1 ಕಪ್
ಸಾಸಿವೆ
ಸ್ವಲ್ಪ ಹುಣಸೆ ರಸ
ಕರಿ ಬೇವಿನ ಎಲೆ
ರುಚಿಗೆ ತಕ್ಕ ಉಪ್ಪು
ಎಣ್ಣೆ
ನೀರು
ತಯಾರಿಸುವ ವಿಧಾನ
* ಹಲಸಿನ ಕಾಯಿ ಸಿಪ್ಪೆ ಸುಲಿದು ಅದನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ, ತೊಳೆದು ಸ್ವಲ್ಪ ಉಪ್ಪು ಮತ್ತು ನೀರು ಹಾಕಿ ಜೊತೆಗೆ ಬೇಯಿಸಿ. ಪ್ರೆಷರ್ ಕುಕ್ಕರ್ ನಲ್ಲಿ ಮಾಡುವುದಾದರೆ 3 ವಿಶಲ್ ಬರುವವರೆಗೆ ಬೇಯಿಸಿ. ನಂತರ ನೀರು ಬಸಿದು ಹಲಸಿನಕಾಯಿಯನ್ನು ಒಂದು ಪಾತ್ರೆಗೆ ಹಾಕಿ.
* ನಂತರ ಅಲಸಂದೆಯನ್ನು 2 ವಿಶಲ್ ಬರುವವರೆಗೆ ಬೇಯಿಸಿ ಇಡಿ.
* ತೆಂಗಿನ ತುರಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಖಾರದ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ಜೀರಿಗೆ, ಗರಂ ಮಸಾಲ, ಬೆಳ್ಳುಳ್ಳಿ ಹಾಕಿ ಮತ್ತೆ 5 ನಿಮಿಷ ಹುರಿದು, ನಂತರ ಮಿಕ್ಸಿಯಲ್ಲಿ ಹಾಕಿ ನುಣ್ಣನೆ ರುಬ್ಬಿ.
* ಈಗ ಪಾತ್ರೆಯನ್ನು ಬಿಸಿ ಮಾಡಿ, ಅದಕ್ಕೆ 1 -2 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾಗುವಾಗ ಸಾಸಿವೆ ಹಾಕಿ , ಸಾಸಿವೆ ಚಟಾಪಟ ಶಬ್ದ ಮಾಡುವಾಗ ಈರುಳ್ಳಿ, ಹಸಿ ಮೆಣಸು ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
* ಈಗ ರುಬ್ಬಿದ ಮಸಾಲೆ ಹಾಕಿ, ಅದಕ್ಕೆ ಬೇಯಿಸಿ ಹಲಸಿನಕಾಯಿ ಮತ್ತು ಅಲಸಂದೆ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ , ಹುಣಸೆ ಹಣ್ಣಿನ ರಸ ಹಾಕಿ, 5-7 ನಿಮಿಷ ಕುದಿಸಿ, ಉರಿಯಿಂದ ಇಳಿಸಿದರೆ ಸವಿರುಚಿಯ ಹಲಸಿನಕಾಯಿ ಸಾರು(ಗುಜ್ಜೆ) ಸಾರು ರೆಡಿ.



Click it and Unblock the Notifications
