Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ಬೇಸಿಗೆಗೆ ಪನೀರ್ ಮೊಸರು ಸಾರು ಬೆಸ್ಟ್
ಬೇಸಿಗೆಯಲ್ಲಿ ಮೊಸರು, ಮಜ್ಜಿಗೆ ಬಳಸಿ ಖಾದ್ಯಗಳನ್ನು ಮಾಡುವುದು ಒಳ್ಳೆಯದು. ಏಕೆಂದರೆ ಮೊಸರು, ಮಜ್ಜಿಗೆ ದೇಹವನ್ನು ತಂಪಾಗಿಡುವಲ್ಲಿ ತುಂಬಾ ಸಹಕಾರಿ. ಕರ್ನಾಟಕದಲ್ಲಿ ಮೊಸರಿಗೆ ಕುಂಬಳಕಾಯಿ ಹಾಕಿ ಮಾಡುವ ಕುಂಬಳಕಾಯಿ ಮೊಸರು ಸಾರಿನ ರುಚಿ ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ.
ಇಲ್ಲಿ ನಾವು ಮೊಸರಿಗೆ ಪನೀರ್ ಹಾಕಿ ಮಾಡುವ ಪನ್ನೀರ್ ಮೊಸರು ಸಾರು ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಾಗ್ರಿಗಳು
ಪನೀರ್ 200 ಗ್ರಾಂ
ಹಸಿ ಬಟಾಣಿ ಅರ್ಧ ಕಪ್ (ನೀರಿನಲ್ಲಿ ನೆನೆ ಹಾಕಿದ್ದು)
ಜೀರಿಗೆ ಅರ್ಧ ಚಮಚ
ಸಾಸಿವೆ
ಸ್ವಲ್ಪ ಇಂಗು
ಹಸಿ ಮೆಣಸಿನಕಾಯಿ 2 ಮತ್ತು ಖಾರದ ಪುಡಿ(ಕಾರಕ್ಕೆ ತಕ್ಕಷ್ಟು)
ಅರ್ಧ ಚಮಚ ಅರಿಶಿಣ
ಸ್ವಲ್ಪ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕ ಉಪ್ಪು
ಎಣ್ಣೆ
ತಯಾರಿಸುವ ವಿಧಾನ:
* ಪಾತ್ರೆಯಲ್ಲಿ 2 ಚಮಚ ಎಣ್ಣೆ ಹಾಕಿ, ಬಿಸಿ ಮಾಡಿ ಅದಕ್ಕೆ ಸಾಸಿವೆ, ಜೀರಿಗೆ, ಇಂಗು, ಕತ್ತರಿಸಿದ ಹಸಿ ಮೆಣಸಿನಕಾಯಿ ಹಾಕಿ 2-3 ನಿಮಿಷ ಹುರಿಯಿರಿ. ಈಗ ಪನೀರ್ ತುಂಡುಗಳನ್ನು ಹಾಕಿ ಪನ್ನೀರ್ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ಈಗ ನೆನೆ ಹಾಕಿದ ಹಸಿ ಬಟಾಣಿಯನ್ನೂ ಸೇರಿಸಿ 3 ನಿಮಿಷ ಫ್ರೈ ಮಾಡಿ
* ಈಗ ಅರಿಶಿಣ ಪುಡಿ, ಸ್ವಲ್ಪ ಖಾರದ ಪುಡಿ ಹಾಕಿ, ನಂತರ ಚೆನ್ನಾಗಿ ಕದಡಿದ ಮೊಸರು , ರುಚಿಗೆ ತಕ್ಕ ಉಪ್ಪು ಸೇರಿಸಿ ಕಲೆಸಿ ಪಾತ್ರೆಯ ಬಾಯಿ ಮುಚ್ಚಿ ಕುದಿಸಿ. ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಪನೀರ್ ಮೊಸರು ಸಾರು ರೆಡಿ.



Click it and Unblock the Notifications
