Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಯಮ್ಮೀ... ಮೊಸರು ಬದನೆಕಾಯಿ ಖಾದ್ಯ
ಬದನೆಕಾಯಿಯನ್ನು ಮೊಸರು ಜೊತೆ ಹಾಕಿ ತಯಾರಿಸಿದ ಗ್ರೇವಿಯ ರುಚಿ ನೋಡಿದ್ದೀರಾ? ಇಲ್ಲ ಅಂದರೆ ಅದನ್ನು ಒಮ್ಮೆ ಮಾಡಿ ನೋಡಿ ಈ ಖಾದ್ಯದ ರುಚಿಗೆ ಒಂದು ತುತ್ತು ಅನ್ನ ಅಧಿಕವೇ ಸೇರುತ್ತದೆ, ಅಷ್ಟು ರುಚಿಯಾಗಿರುತ್ತದೆ ಈ ಅಡುಗೆ.
ಈ ಅಡುಗೆಯನ್ನು ಸುಲಭವಾಗಿದ್ದು ಇದನ್ನು ತಯಾರಿಸುವ ವಿಧಾನ ಸುಲಭವಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* ಚಿಕ್ಕ ಬದನೆಕಾಯಿ 7-8
* ಅರಿಶಿಣ ಪುಡಿ ಅರ್ಧ ಚಮಚ
* ಸಕ್ಕರೆ 1 ಚಮಚ
* ಈರುಳ್ಳಿ 1 (ಪೇಸ್ಟ್ ಮಾಡಬೇಕು)
* ಬೆಳ್ಳುಳ್ಳಿ ಪೇಸ್ಟ್ 1 ಚಮಚ
* ಹಸಿಮೆಣಸಿನ ಕಾಯಿ 2-3
* ಖಾರದ ಪುಡಿ 2 ಚಮಚ
* ಕೊತ್ತಂಬರಿ ಪುಡಿ 1 ಚಮಚ
* ಮೊಸರು 2 ಕಪ್
* ಕೊತ್ತಂಬರಿ ಸೊಪ್ಪು ಸ್ವಲ್ಪ
* 1 ಕಪ್ ಎಣ್ಣೆ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
* ಬದನೆಕಾಯಿಯನ್ನು ಮಧ್ಯಭಾಗದಿಂದ 4-5 ತುಂಡುಗಳಾಗಿ ಕತ್ತರಿಸಬೇಕು. ನಂತರ ಅದರ ಒಳಗೆ ಸ್ವಲ್ಪ ಸಕ್ಕರೆ ಉಪ್ಪು ಹಾಗೂ ಅರಿಶಿಣ ಪುಡಿಯನ್ನು ಹಾಕಿಡಬೇಕು.
* ನಂತರ ಬದನೆಕಾಯಿಯನ್ನು ಡೀಪ್ ಫ್ರೈ ಮಾಡಬೇಕು.
* ಈಗ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಹಾಕಿ ಹುರಿಯಬೇಕು. ನಂತರ ಹಸಿಮೆಣಸಿನಕಾಯಿ ಹಾಗೂ ರುಚಿಗೆ ತಕ್ಕ ಉಪ್ಪು ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು.
* ಈಗ ಗಟ್ಟಿ ಮೊಸರು ಹಾಕಿ ಚೆನ್ನಾಗಿ ತಿರುಗಿಸಬೇಕು. ಕೊತ್ತಂಬರಿ ಪುಡಿ, ಖಾರದ ಪುಡಿ, ಅರಿಶಿಣ ಪುಡಿ ಹಾಕಿ ಸ್ವಲ್ಪ ಹೊತ್ತು ಸೌಟ್ ನಿಂದ ಕುದಿಸಬೇಕು. ನಂತರ ಫ್ರೈ ಮಾಡಿದ ಬದನೆಕಾಯಿ ಅದರಲ್ಲಿ ಹಾಕಿ 2 ನಿಮಿಷ ಕುದಿಸಿ ಅದನ್ನು ಉರಿಯಿಂದ ಇಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಬದನೆ ಕಾಯಿಯ ಖಾದ್ಯ ರೆಡಿ.



Click it and Unblock the Notifications
