Latest Updates
-
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ!
ಖಾರ ಪ್ರಿಯರಿಗಾಗಿ ಚೆಟ್ಟಿನಾಡ್ ಅಣಬೆ ಗ್ರೇವಿ
ಇಲ್ಲಿ ನಾವು ಚೆಟ್ಟಿನಾಡ್ ಶೈಲಿಯ ಅಡುಗೆ ರೆಸಿಪಿ ನೀಡಿದ್ದೇವೆ. ಚೆಟ್ಟಿನಾಡ್ ಶೈಲಿಯ ಅಡುಗೆ ಖಾರಪ್ರಿಯರಿಗೆ ತುಂಬಾ ಇಷ್ಟವಾಗುವುದು. ರುಚಿ-ರುಚಿಯಾದ ಖಾರದ ಅಡುಗೆ ತಿನ್ನಬಯಸುವುದಾದರೆ ಈ ಅಡುಗೆ ಟ್ರೈ ಮಾಡಬಹುದು.
ಈ ಅಣಬೆ ಗ್ರೇವಿಯನ್ನು ರೊಟ್ಟಿ, ಚಪಾತಿ, ಅನ್ನದ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು:
ಅಣಬೆ 2 ಪ್ಯಾಕೆಟ್
ಚಿಕ್ಕ ಈರುಳ್ಳಿ 5
ಶುಂಠಿ ಚಿಕ್ಕ ಪೀಸ್
ಬೆಳ್ಳುಳ್ಳಿ 3- ಎಸಳು
ಟೊಮೆಟೊ 1
ಅರಿಶಿಣ ಪುಡಿ 1/4 ಚಮಚ
ಸ್ವಲ್ಪ ಕೊತ್ತಂಬರಿ ಸೊಪ್ಪು
ಪಲಾವ್ ಎಲೆ 1
ಎಣ್ಣೆ 3 ಚಮಚ
ರುಚಿಗೆ ತಕ್ಕ ಉಪ್ಪು
ಪೇಸ್ಟ್ ಗೆ ಬೇಕಾಗುವ ಸಾಮಾಗ್ರಿಗಳು:
ಒಣ ಮೆಣಸು 2
ಕೊತ್ತಂಬರಿ ಬೀಜ 2 ಚಮಚ
ಜೀರಿಗೆ ಅರ್ಧ ಚಮಚ
ಸೋಂಪು ಅರ್ಧ ಚಮಚ
ಕರಿಮೆಣಸು1 ಚಮಚ
ಗಸೆಗಸೆ 1 ಚಮಚ
ಏಲಕ್ಕಿ 1
ಅರ್ಧ ಇಂಚಿನಷ್ಟು ದೊಡ್ಡದಿರುವ ಚಕ್ಕೆ
ಲವಂಗ 1
ತೆಂಗಿನ ಕಾಯಿ ತುರಿ 3 ಚಮಚ
ಇವುಗಳನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಬೇಕು.
ತಯಾರಿಸುವ ವಿಧಾನ:
* ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಕರಿ ಬೇವಿನ ಎಲೆ ಮತ್ತು ಪಲಾವ್ ಎಲೆಯನ್ನು ಹಾಕಬೇಕು. ನಂತರ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಜಜ್ಜಿದ ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ 2 ನಿಮಿಷ ಹುರಿಯಬೇಕು.
* ನಂತರ ಶುಚಿ ಮಾಡಿದ ಅಣಬೆ ಮತ್ತು ಅರಿಶಿಣ ಪುಡಿ ಹಾಕಿ 5 ನಿಮಿಷದವರೆಗೆ ಹುರಿಯಿರಿ.
* ಕತ್ತರಿಸಿದ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ.
* ಈಗ ನುಣ್ಣಗೆ ರಬ್ಬಿದ ಪೇಸ್ಟ್ ಹಾಕಿ ಅವು ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಸ್ವಲ್ಪ ಬಿಸಿ ನೀರು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕುದಿಸಿದರೆ ಮಿಶ್ರಣ ಗ್ರೇವಿಯ ಹಂತಕ್ಕೆ ಬರುತ್ತದೆ. ನಂತರ ಮಿಶ್ರಣವನ್ನು ಉರಿಯಿಂದ ಇಳಿಸಿ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚೆಟ್ಟಿನಾಡ್ ಶೈಲಿಯ ಮಶ್ರೂಮ್ ಗ್ರೇವಿ ರೆಡಿ.



Click it and Unblock the Notifications
