Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಆಪಲ್ ಸಾರು
ಆ್ಯಪಲ್ ಜ್ಯೂಸ್ ಕುಡಿದಿರುವ ನಿಮಗೆ ಆ್ಯಪಲ್ ಸಾರಿನ ರುಚಿ ಗೊತ್ತಿರಲಿಕ್ಕಿಲ್ಲ. ಒಮ್ಮೆ ಮಾಡಿ ನೋಡಿ; ಆಮೇಲೆ ಜ್ಯೂಸಿಗಿಂತ ಸಾರೇ ಒಳ್ಳೇದು ಅನಿಸುತ್ತದೆ.
ಬೇಕಾದ ಸಾಮಗ್ರಿಗಳು:
ಬಲಿತ ಆ್ಯಪಲ್-2
ಹಸಿಮೆಣಸು -4 ರಿಂದ 6
ಉಪ್ಪು
ಬೆಲ್ಲ(ಬೇಕಿದ್ದರೆ)
ಒಗ್ಗರಣೆಗೆ:
ಸಾಸಿವೆ,ಕರಿಬೇವು, ಇಂಗು
ಅಥವಾ
ಜೀರಿಗೆ, ಕರಿಬೇವು,ಬೆಳ್ಳುಳ್ಳಿ ಪುಡಿ
ಆ್ಯಪಲ್‌ನ್ನು ತೊಳೆದು ನಾಲ್ಕು ಭಾಗವಾಗಿ ಮಾಡಿ, ಬೀಜ ತೆಗೆದು ನೀರಲ್ಲಿ ಬೇಯಿಸಿ. ಬೆಂದ ನಂತರ, ನೀರಿನಿಂದ ಆ್ಯಪಲ್‌ನ್ನು ಬೇರ್ಪಡಿಸಿ ಅದರ ಸಿಪ್ಪೆ ತೆಗೆಯಿರಿ. ಬೆಂದಿರುವುದರಿಂದ ಬೇಗನೆ ಸುಲಿಯಲು ಬರುತ್ತದೆ. ನಂತರ ಸೌಟಿನಿಂದ ಕದಡಿ ನೀರಿಗೆ ಹಾಕಿ, ಇನ್ನೊಂದು ಲೀಟರು ನೀರು ಸೇರಿಸಿ ಕುದಿಸಿ.
ಹಸಿಮೆಣಸು ಮದ್ಯದಲ್ಲಿ ಉದ್ದಕ್ಕೆ ಸೀಳಿ ಸಾರಿಗೆ ಸೇರಿಸಿ. ಉಪ್ಪು ಹಾಕಿ. ಆ್ಯಪಲ್ ಹುಳಿ ಹುಳಿಯಾಗಿದ್ದರೆ, ರುಚಿಗೆ ಸ್ವಲ್ಪ ಬೆಲ್ಲ ಸೇರಿಸಿ. 5 ನಿಮಿಷ ಕುದಿಯಲು ಬಿಡಿ. ಮೇಲೆ ಹೇಳಿದ ಎರಡು ಬಗೆಯ ಒಗ್ಗರಣೆಯಲ್ಲಿ ಯವುದಾದರೂ ಒಂದನ್ನು ಹಾಕಿ. ಅಥವಾ ನಿಮ್ಮಿಷ್ಟದಂತೆ ನಿಮಗೆ ಬೇಕಾದ ರೀತಿಯಲ್ಲಿ ಒಗ್ಗರಣೆ ಹಾಕಿ. ಒಲೆ ಆರಿಸಲು ಮರೆಯದಿರಿ. ಈಗ ನಿಮ್ಮೆದುರಿಗೆ ಇರುವುದೇ ಸ್ವಾದಿಷ್ಟವಾದ . ಅನ್ನದೊಂದಿಗೆ ಉಪಯೋಗಿಸಬಹುದು. ಇಲ್ಲದಿದ್ದರೆ ಸೂಪ್ ನಂತೆ ಕುಡಿಯಲೂ ಬಹುದು.



Click it and Unblock the Notifications
