Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಚಪಾತಿ, ಪೂರಿಗೊಪ್ಪುವ ಚನ್ನಾ ಕರಿ

ಕಾಬೂಲ್ ಕಡಲೆಕಾಳು (ಚನ್ನಾ) ಕಾಲು ಕಿ.ಗ್ರಾಂ.
ಗರಂ ಮಸಾಲಾ 1 ಚಮಚ
ಮಾವಿನಕಾಯಿ ಪುಡಿ (ಮ್ಯಾಂಗೋ ಪೌಡರ್) 1/2 ಚಮಚ
ಈರುಳ್ಳಿ 2
ಟೊಮೆಟೊ 2
ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಅಚ್ಚ ಖಾರದ ಪುಡಿ 1 ಚಮಚ
ಗೋವಿನಜೋಳದ ಹಿಟ್ಟು ಅರ್ಧ ಬಟ್ಟಲು
ಕೊತ್ತಂಬರಿ ಸೊಪ್ಪು ಅಲಂಕಾರಕ್ಕೆ
ಉಪ್ಪು
ಕರಿಯಲು ಎಣ್ಣೆ
ತಯಾರಿಸುವ ವಿಧಾನ:
ಕಡಲೆಕಾಳು ಕರಿ ತಯಾರಿಸಬೇಕಿದ್ದರೆ ಹಿಂದಿನ ರಾತ್ರಿಯೇ ನೆನೆಯಲು ಇಡಿ. ನೆಂದ ಕಾಬೂಲ್ ಕಡಲೆಕಾಳುಗಳನ್ನು ಕುಕ್ಕರಲ್ಲಿ ಬೇಯಿಸಿಟ್ಟುಕೊಳ್ಳಿ.
ಒಂದು ಬಾಣಲೆಯಲ್ಲಿ ಗೋವಿನಜೋಳದ ಹಿಟ್ಟು, ಉಪ್ಪು ಮತ್ತು ಅರ್ಧ ಚಮಚ ಅಚ್ಚ ಖಾರದಪುಡಿ ಮತ್ತು ನೆಂದ ಕಡಲೆಕಾಳುಗಳನ್ನು ಸ್ವಲ್ಪೇ ಸ್ವಲ್ಪ ನೀರಿನೊಂದಿಗೆ ಗಟ್ಟಿಯಾಗಿ ಕಲೆಸಿರಿ. ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಕಾಸಿ ಅದರಲ್ಲಿ ಹಿಟ್ಟಿನಲ್ಲಿ ಕಲಿಸಿಟ್ಟ ಕಡಲೆಕಾಳುಗಳನ್ನು ಕರಿದು ತೆಗೆದಿಟ್ಟುಕೊಳ್ಳಿ.
ಮತ್ತೊಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಣ್ಣದಾಗಿ ಹೆಚ್ಚಿಟ್ಟುಕೊಂಡ ಈರುಳ್ಳಿ ತಾಳಿಸಿ, ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮತ್ತೆ ತಾಳಿಸಿ. ಈರುಳ್ಳಿ ಕಂದುಬಣ್ಣ ಬರುವವರೆಗೆ ತಾಳಿಸಿದ ನಂತರ ಟೊಮೆಟೊ ಪ್ಯೂರಿ(ಟೊಮೆಟೊ ಬೀಜ ತೆಗೆದು ಮಿಕ್ಸಿಯಲ್ಲಿ ರುಬ್ಬಿದ್ದು) ಸೇರಿಸಿ ಮತ್ತೆ ಐದು ನಿಮಿಷ ತಾಳಿಸಿ. ಇದಕ್ಕೆ ಅಚ್ಚ ಖಾರದ ಪುಡಿ, ಗರಂ ಮಸಾಲಾ, ಉಪ್ಪು, ಮಾವಿನಕಾಯಿ ಪುಡಿ (ನಿಂಬೆಹಣ್ಣು ಹಿಂಡಿದರೂ ಆಯಿತು) ಹಾಕಿ ಕುದಿಸಿ.
ಇದಕ್ಕೆ ಕರಿದಿಟ್ಟುಕೊಂಡ ಕಡಲೆಕಾಳುಗಳನ್ನು ಹಾಕಿ ಕೈಯಾಡಿಸಿ. ಗರಮಾಗರಂ ಕಾಬೂಲ್ ಕಡಲೆಕಾಳಿನ ಕರಿ ರೆಡಿ. ಮೇಲೆ ಬೇಕಿದ್ದರೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಈ ಕಾಬೂಲ್ ಕಡಲೆಕಾಳಿನ ಕರಿ ಚಪಾತಿ, ಪೂರಿ, ರೊಟ್ಟಿ, ನಾನ್ ಗಳೊಂದಿಗೆ ತಿನ್ನಲು ಮಸ್ತಾಗಿರುತ್ತದೆ.



Click it and Unblock the Notifications
