Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಘಮಘಮ ಪುಡಿಕುಟ್ಟಿಹಾಕಿದ ಹುಳಿ

ಈ ಪುಡಿಯನ್ನು ದಿಢೀರ್ ತಯಾರಿಸಿ ಹುಳಿ ಮಾಡುವುದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ನಾಲಕ್ಕು ಮಂದಿಯ ಕುಟುಂಬಕ್ಕೆ ಅಗತ್ಯವಾದಷ್ಟು ಪುಡಿ ಕುಟ್ಟಿದ ಹುಳಿಪುಡಿ ಅಥವಾ ಸಾಂಬಾರ್ ಪುಡಿ ರೆಸಿಪಿಯನ್ನು ಇಲ್ಲಿ ಕೊಡಲಾಗಿದೆ.
ಎಂಟು ಖಾರದ ಒಣಮೆಣಸಿನಕಾಯಿಯನ್ನು ನಾಲಕ್ಕು ಚಮಚ ಎಣ್ಣೆಯಲ್ಲಿ ಹುರಿಯಬೇಕು. ಕೇವಲ ಹುರಿಯುವುದಲ್ಲ, ಕರಿದ ಹಾಗೆ ಇರಬೇಕು. ಮೆಣಸಿನಕಾಯಿ ಸ್ವಲ್ಪ ಕಪ್ಪು ಬಣ್ಣಕ್ಕೆ ಬಂದನಂತರ ಸಿಮ್ ಮಾಡಿ ಮೆಣಸಿನಕಾಯಿಗೆ ಕೆಳಕಂಡ ಪದಾರ್ಥಗಳನ್ನು ಬೆರೆಸಿ ಮತ್ತೆ ನಿಧಾನವಾಗಿ ಹುರಿಯಬೇಕು.
ಕಡಲೆಬೇಳೆ, ಉದ್ದಿನಬೇಳೆ, ಮೆಂತ್ಯ, ಜೀರಿಗೆ ತಲಾ ಒಂದು ಚಮಚದಂತೆ ಹಾಕಬೇಕು. ಚೆನ್ನಾಗಿ ಹುರಿದನಂತರ ಮಿಕ್ಸಿಗೆ ಹಾಕುವುದು. ಮಿಕ್ಸಿಗೆ ಒಂದು ತೊಳೆ ಹುಣಿಸೆ ಹಣ್ಣು, ಚೂರು ಬೆಲ್ಲ ಸೇರಿಸಿ ರುಬ್ಬಿಕೊಳ್ಳಬೇಕು. ಮೊದಲು ಡ್ರೈ ಆಗಿ ರುಬ್ಬಿಕೊಂಡು ಆನಂತರ ನೀರು ಬೆರೆಸಿ ಚಟ್ನಿಯ ರೂಪಕ್ಕೆ ಬರುವಂತೆ ರುಬ್ಬಬೇಕು.
ಕುಕ್ಕರ್ ನಲ್ಲಿ ಬೇಯಿಸಿದ ತೊಗರಿಬೇಳೆ ಹಾಗೂ ತರಕಾರಿಗೆ ಮೇಲಿನ ಚಟ್ನಿಯನ್ನು ಚೆನ್ನಾಗಿ ಬೆರೆಸಿ ಕುದಿಸಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸಾಸಿವೆ ಕರಿಬೇವು ಸೊಪ್ಪಿನ ಒಗ್ಗರಣೆ ಕೊಡಬೇಕು. ಪುಡಿ ಕುಟ್ಟಿಹಾಕಿದ ಹುಳಿಗೆ ಸಾಮಾನ್ಯವಾಗಿ ಗಟ್ಟಿಯಾದ ತರಕಾರಿ ಹೊಂದುತ್ತದೆ. ಉದಾಹರಣೆಗೆ ಆಲೂಗೆಡ್ಡೆ, ಗೆಡ್ಡೆಕೋಸು, ಬಾಳೆಕಾಯಿ ಇತ್ಯಾದಿ.



Click it and Unblock the Notifications
