Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕೊಂಕಣಿ ಶೈಲಿಯಲ್ಲಿ ಮಾವಿನ ಹಣ್ಣಿನ ಸಾರು
ಮಾವಿನ ಹಣ್ಣನ್ನು ತಿನ್ನಲು, ಜ್ಯೂಸ್ ಮಾಡಲು ಮಾತ್ರವಲ್ಲದೆ , ಇದರಿಂದ ರುಚಿಕರವಾದ ಸಾರು ಮಾಡಬಹುದಾಗಿದೆ. ಮಾವಿನ ಹಣ್ಣಿನ ಸಾರನ್ನು ಕೂಡ ಅನೇಕ ರುಚಿಯಲ್ಲಿ ತಯಾರಿಸಬಹುದು. ಇವತ್ತು ನಾವು ಕೊಂಕಣಿಯರ ಅಡುಗೆ ಶೈಲಿಯಲ್ಲಿ ಮಾವಿನ ಹಣ್ಣಿನ ಸಾರು ಮಾಡುವ ವಿಧಾನ ತಿಳಿಯೋಣ:

ಬೇಕಾಗುವ ಸಾಮಾಗ್ರಿಗಳು:
* ಮಾವಿನ ಹಣ್ಣು 2
* ಎಣ್ಣೆ
* ಸಾಸಿವೆ
* ಚಿಟಿಕೆಯಷ್ಟು ಇಂಗು
* ಒಣ ಕೆಂಪು ಮೆಣಸಿನ ಕಾಯಿ 1-2
* ಕರಿಬೇವಿನ ಎಲೆ
ಮಸಾಲೆಗೆ:
* ಅರ್ಧ ಭಾಗ ತುರಿದ ತೆಂಗಿನ ಕಾಯಿ
* 1/2 ಚಮಚ ಎಳ್ಳು
* 2 ಚಮಚ ಹುಣಸೆ ಹಣ್ಣಿನ ರಸ
* 2-3 ಕೆಂಪು ಮೆಣಸಿನ ಕಾಯಿ
* ರುಚಿಗೆ ತಕ್ಕ ಉಪ್ಪು
* ರುಚಿಗೆ ಸ್ವಲ್ಪ ಬೆಲ್ಲ
ತಯಾರಿಸುವ ವಿಧಾನ:
1. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ,ಒಣ ಕೆಂಪು ಮೆಣಸಿನ ಕಾಯಿ ಹಾಕಿ ಬಿಸಿ ಮಾಡಿ ಬದಿಯಲ್ಲಿ ತೆಗೆದಿಡಬೇಕು.
2. ಈಗ ತೆಂಗಿನ ಕಾಯಿ, ಹುಣಸೆ ಹಣ್ಣಿನ ರಸ, ಬೆಲ್ಲ, ಹುರಿದ ಎಳ್ಳು ಮತ್ತು ಮೆಣಸಿನ ಕಾಯಿ ಹಾಕಿ ಮಿಶ್ರಣ ಗಟ್ಟಿಯಾಗಿರುವಂತೆ ಮಿಕ್ಸಿಯಲ್ಲಿ ಆಡಿಸಬೇಕು.
3. ಈಗ ಮಾವಿನ ಹಣ್ಣಿನ ಸಿಪ್ಪೆ ತೆಗೆದು ಅದರ ತಿರಳನ್ನು ಚಿಕ್ಕದಾಗಿ ಕತ್ತರಿಸಿಡಬೇಕು.
4. ಅದಕ್ಕೆ ಅರೆದ ಮಸಾಲೆ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.
5. ಈಗ ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಬೇಕು. ಸಾಸಿವೆ ಚಟಾಪಟ ಶಬ್ದ ಬರುವಾಗ ಚಿಟಿಕೆಯಷ್ಟು ಇಂಗು ಮತ್ತು ಕರಿ ಬೇವಿನ ಎಲೆ ಮತ್ತು ಒಣ ಕೆಂಪು ಮೆಣಸಿನ ಕಾಯಿಯನ್ನು ಕೈಯಲ್ಲಿ ಮುರಿದ ಎಣ್ಣೆಯಲ್ಲಿ ಹಾಕಿ, ಮಾವಿನ ಹಣ್ಣಿನ ಮಿಶ್ರಣವನ್ನು ಸೇರಿಸಬೇಕು. ಈಗ ಮಿಶ್ರಣ ಕುದಿ ಬರುವವರೆಗೆ ಬೇಯಿಸಬೇಕು.
6. ನಂತರ ಉರಿಯಿಂದ ತೆಗೆದು 3-4 ಗಂಟೆ ಕಾಲ ಇಡಬೇಕು.
ಈ ರೀತಿ ತಯಾರಿಸಿದ ಮಾವಿನ ಹಣ್ಣಿನ ಸಾರನ್ನು ಅನ್ನದ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
