Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಿಕನ್ ಪ್ರಿಯರಿಗಾಗಿ ಚಿಕನ್ ಟಿಕ್ಕಾ

ಬೇಕಾಗುವ ಸಾಮಾಗ್ರಿಗಳು:
* 1 ಕಪ್ ಹೆಚ್ಚು ಹುಳಿಯಿಲ್ಲದ ಮೊಸರು
* 1 ಕಪ್ ಕೊತ್ತಂಬರಿ ಸೊಪ್ಪು
* 2 ಚಮಚ ಬೆಳ್ಳುಳ್ಳಿ ಪೇಸ್ಟ್
* 3-4 ಚಮಚ ಗರಂ ಮಸಾಲ
* ಒಂದು ಚಮಚ ಕರಿಮೆಣಸಿನ ಪುಡಿ ಅಥವಾ 2 ಒಣ ಕೆಂಪು ಮೆಣಸಿನ ಕಾಯಿ
* 3 ಚಮಚ ನಿಂಬೆ ರಸ
* 1 ಕೆಜಿ ಚಿಕನ್
* ತೆಳುವಾಗಿ ಕತ್ತರಿಸಿದ ಈರುಳ್ಳಿ 1
* 1 ಚಮಚ ಚಾಟ್ ಮಸಾಲ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಕೊತ್ತಂಬರಿ ಸೊಪ್ಪು , ಬೆಳ್ಳುಳ್ಳಿ, ಕರಿಮೆಣಸು ಅಥವಾ ಕೆಂಪು ಮೆಣಸಿನ ಕಾಯಿ, ಗರಂ ಮಸಾಲ ಇವುಗಳನ್ನು ಹಾಕಿ ಪೇಸ್ಟ್ ಮಾಡಬೇಕು.
2. ಈಗ ಈ ಮಿಶ್ರಣವನ್ನು ಮೊಸರಿಗೆ ಸೇರಿಸಿ, ರುಚಿಗೆ ತಕ್ಕ ಉಪ್ಪು ಹಾಕಬೇಕು. ಈಗ ಕತ್ತರಿಸಿದ ಚಿಕನ್ ಅನ್ನು ಈ ಮಿಶ್ರಣದಲ್ಲಿ ಹಾಕಿ ಒಂದು ರಾತ್ರಿ ಫ್ರಿಜ್ನಲ್ಲಿ ಇಡಬೇಕು.
3. ಈಗ ಮೈಕ್ರೋವೇವ್ ಅನ್ನು ಮುಂಚಿತವಾಗಿ ಬಿಸಿ ಮಾಡಿಡಬೇಕು. ನಂತರ ಚಿಕನ್ ಅನ್ನು ಗ್ರಿಲ್ಡ್ ಸರಳುಗಳಲ್ಲಿ ಹಾಕಿ ಚೆನ್ನಾಗಿ ರೋಸ್ಟ್ ಮಾಡಬೇಕು.
4. ನಂತರ ಚಿಕನ್ ಅನ್ನು ಸರಳು ಕಂಬಿಗಳಿಂದ ತೆಗೆದು ಪ್ಲೇಟ್ನಲ್ಲಿ ಹಾಕಿ ನಿಂಬೆ ರಸ ಹಿಂಡಿ ಕತ್ತರಿಸಿದ ಈರುಳ್ಳಿ ಮತ್ತು ನಿಂಬೆಹಣ್ಣಿನಿಂದ ಅಲಂಕರಿಸಿದರೆ ತಿನ್ನಲು ರುಚಿಯಾದ ಚಿಕನ್ ಟಿಕ್ಕಾ ರೆಡಿ.



Click it and Unblock the Notifications
