Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರುಚಿಕರವಾದ ಮೊಟ್ಟೆಯ ಕುರ್ಮಾ ರೆಸಿಪಿ

ಬೇಕಾಗುವ ಸಾಮಾಗ್ರಿಗಳು:
* ಮೊಟ್ಟೆ 6
* ಈರುಳ್ಳಿ 6
* ಹಾಲು 1/2 ಕಪ್
* ಗೋಡಂಬಿ 2 ಚಮಚ
* ಹಸಿಮೆಣಸಿನ ಕಾಯಿ 8
* ತುರಿದ ತೆಂಗಿನ ಕಾಯಿ ಸ್ವಲ್ಪ
* ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ
* ಬೆಳ್ಳುಳ್ಳಿ ಎಸಳು 6
* ಕೊತ್ತಂಬರಿ ಪುಡಿ 3 ಚಮಚ
* ಚಕ್ಕೆ ಮತ್ತು ಲವಂಗ ಸ್ವಲ್ಪ
* ಒಂದು ಚಿಕ್ಕ ತುಂಡು ಶುಂಠಿ
* ಅರಿಶಿಣ ಪುಡಿ 1/2 ಚಮಚ
* ತುಪ್ಪ 3 ಚಮಚ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಸ್ವಲ್ಪ ತುರಿದ ತೆಂಗಿನ ಕಾಯಿ, ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಪುಡಿ, ಚಕ್ಕೆ ಲವಂಗ, ಬೆಳ್ಳುಳ್ಳಿ, ಶುಂಠಿ, ಅರಿಶಿಣ ಪುಡಿ ಹಾಕಿ ಮಿಕ್ಸಿಯಲ್ಲಿ ಆಡಿಸಬೇಕು.
2. ಈರುಳ್ಳಿಯನ್ನು ಉದ್ದದ್ದವಾಗಿ, ತೆಳುವಾಗಿ ಕತ್ತರಿಸಬೇಕು.
3. ಈಗ ಮೊಟ್ಟೆಯನ್ನು ಒಡೆದು ಬಿಳಿಯನ್ನು ಒಂದು ಬಟ್ಟಲಿನಲ್ಲಿ ಹಾಕಿ, ಹಳದಿಯನ್ನು ಮತ್ತೊಂದು ಬಟ್ಟಲಿನಲ್ಲಿ ಹಾಕಿಡಬೇಕು. ನಂತರ ಮೊಟ್ಟೆಯ ಬಿಳಿಯನ್ನು ಚೆನ್ನಾಗಿ ಕದಡಬೇಕು. ನಂತರ ಮೊಟ್ಟೆಯ ಬಿಳಿಗೆ ಹಾಲು ಹಾಕಿ ಮಿಶ್ರ ಮಾಡಬೇಕು, ನಂತರ ಹಳದಿ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರಣವನ್ನು ಚೆನ್ನಾಗಿ ಕದಡಬೇಕು.
4. ಈಗ ಕದಡಿದ ಮೊಟ್ಟೆಯನ್ನು ಒಂದು ಪಾತ್ರೆಯಲ್ಲಿ ಹಾಕಬೇಕು. ನಂತರ ಸ್ವಲ್ಪ ದೊಡ್ಡ ಪಾತ್ರೆಯಲ್ಲಿ ಅರ್ಧದಷ್ಟು ನೀರು ಹಾಕಿ ಬಿಸಿಮಾಡಬೇಕು. ನಂತರ ಮೊಟ್ಟೆ ಹಾಕಿದ ಪಾತ್ರೆಯನ್ನು ಅದರ ಮೇಲೆ ಇಟ್ಟು ಬೇಯಿಸಬೇಕು. ಮೊಟ್ಟೆ ಬೆಂದ ಮೇಲೆ ಅದನ್ನು ತೆಗೆದು ಚೌಕಾಕಾರವಾಗಿ ಕತ್ತರಿಸಬೇಕು.
5. ಈಗ ಕುರ್ಮಾ ಮಾಡಲು ಪಾತ್ರೆಯನ್ನು ಉರಿಯಲ್ಲಿಟ್ಟು ತುಪ್ಪ ಹಾಕಬೇಕು. ನಂತರ ಗೋಡಂಬಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ಮಸಾಲೆಯನ್ನು ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಕಡಿಮೆ ಉರಿಯಲ್ಲಿ ಬಿಸಿ ಮಾಡಬೇಕು. ತುಪ್ಪ ಮಿಶ್ರಣದ ಮೇಲೆ ಕಾಣಿಸಿದಾಗ ಸ್ವಲ್ಪ ನೀರು ಹಾಕಿ ಕುದಿಸಿ.
6. ನಂತರ ಕತ್ತರಿಸಿ ಮೊಟ್ಟೆ ತುಂಡುಗಳನ್ನು ಹಾಕಿ, ಮಿಶ್ರಣ ಗಟ್ಟಿಯಾಗುವವರೆಗೆ ಕುದಿಸಬೇಕು.
7. ಇದನ್ನು ಕೊತ್ತಂಬರಿ ಸೊಪ್ಪನಿಂದ ಅಲಂಕರಿಸಿದರೆ ರುಚಿಕರವಾದ ಮೊಟ್ಟೆ ಕುರ್ಮಾ ರೆಡಿ.



Click it and Unblock the Notifications
