Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಪಾಕಶಾಲೆಯಲ್ಲಿ ಸುಲಭ ಟೊಮಾಟೊ ಸಾರು
ಸಾರು ಎಂದರೆ ಥಟ್ಟನೆ ನೆನಪಾಗುವುದು, ತಿಳಿ ಬೇಳೆ ಸಾರು ,ಇದರ ಜತೆಗೆ ಟೊಮಾಟೊ ಸಾರು ಸಹ ಸೇರುತ್ತದೆ. ಟೊಮಾಟೊ ಸಾರು ತಯಾರಿಸುವ ಹಲವಾರು ವಿಧಾನಗಳಿವೆ. ಈಗೆಲ್ಲಾ ದಿಢೀರ್ ಸಾರು ತಯಾರಿಸಲು ಪುಡಿಗಳ ನೆರವಿದ್ದರೂ, ಇಲ್ಲಿ ಸುಲಭವಾದ ಒಂದು ವಿಧಾನದ ಪರಿಚಯ ಮಾಡಿಕೊಡಲಾಗುತ್ತಿದೆ.
ಬೇಕಾಗುವ ಸಾಮಾಗ್ರಿಗಳು:
ಸಣ್ಣಗೆ ಕತ್ತರಿಸಿದ 4 ದೊಡ್ಡ ಟೊಮಾಟೊ
ತೊಗರಿಬೇಳೆ: 3 ಟೇಬಲ್ ಚಮಚ
ಉದ್ದಕ್ಕೆ ಸೀಳಿದ ಹಸಿ ಮೆಣಸಿನಕಾಯಿ: 3
ಶುಂಠಿ ಚೂರು : ಸಣ್ಣಗೆ ಕೊಚ್ಚಿದ್ದು,
ಸ್ವಲ್ಪ ಅರಿಶಿನ ಪುಡಿ
ನೀರು : ಎರಡೂವರೆ ಕಪ್
ರುಚಿಗೆ ತಕ್ಕಷ್ಟು ಉಪ್ಪು
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ
ಒಗ್ಗರಣೆಗೆ:
ಸಾಸಿವೆ : ಕಾಲು ಟೀ ಚಮಚ
ಜೀರಿಗೆ: ಕಾಲು ಟೀ ಚಮಚ
ಚೂರು ಮಾಡಿದ ಒಣಮೆಣಸಿನಕಾಯಿ: 1
ಕಾಳು ಮೆಣಸಿನಪುಡಿ: ಅರ್ಧ ಟೀ ಚಮಚ
ಇಂಗಿನಪುಡಿ ಸ್ವಲ್ಪ
ಕರಿಬೇವಿನ ಎಲೆಸ್ವಲ್ಪ
ಮಾಡುವ ವಿಧಾನ:
ತೊಗರಿಬೇಳೆಯನು ಕುಕ್ಕರ್ ನಲ್ಲಿ ಬೇಯಿಸಿ. ಬಾಣಲೆಯಲ್ಲಿ ಒಗ್ಗರಣೆಯಲ್ಲಿ ಹೇಳಿದ ಸಾಮಾಗ್ರಿಗಳನ್ನು ಸಾಸಿವೆ ಸಿಡಿದನಂತರಹಾಕಿ. ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಟೊಮಾಟೊ ಒಗ್ಗರಣೆಗೆ ಹಾಕಿ. 1ಲೋಟ ನೀರು , ಉಪ್ಪು ಮತ್ತು ಅರಿಶಿನಪುಡಿಯನ್ನು ಹಾಕಿ ಸಣ್ಣ ಉರಿಯಲ್ಲಿ 5 ನಿಮಿಷ ಕುದಿಸಿ. ಬೇಯಿಸಿದ ಬೇಳೆಯನ್ನು ಮತ್ತು ಉಳಿದ ಒಂದೂವರೆ ನೀರನ್ನು ಹಾಕಿ ಕುದಿಸಿ. ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಬಡಿಸಿ.
(ದಟ್ಸ್ ಕನ್ನಡ ಪಾಕಶಾಲೆ)



Click it and Unblock the Notifications
