Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಬೇಸಿಗೆ ಸ್ಪೆಷಲ್ ಮಾವಿನಕಾಯಿ ತಂಬಳಿ

* ವೈಶಾಲಿ ಹೆಗಡೆ , ಬೋಸ್ಟನ್, ಯುಎಸ್ಎ.
ಮಲೆನಾಡಿನಲ್ಲಿ ಬೇಸಿಗೆಯಲ್ಲಿನ ಜನಪ್ರಿಯ ಪದಾರ್ಥ ಇದು. ಮಧ್ಯಾಹ್ನದ ಊಟಕ್ಕೆ ಮಾವಿಕಾಯಿ ತಂಬಳಿ ಉಂಡು ಮಲಗಿದರೆ ಚೆನ್ನಾಗಿ ನಿದ್ರೆ... ನಿದ್ದೆ ಅಲ್ಲ ಗೊರಕೆ! ಏನಂತೀರಿ ಮಾರಾಯ್ರೆ? ಗಮನಿಸಿ ಇದನ್ನು ತಯಾರಿಸಲು ಎಷ್ಟು ಕಡಿಮೆ ಪದಾರ್ಥಗಳು ಬೇಕೆ ತಯಾರಿಸಲು ಕೂಡ ಅಷ್ಟೇ ಕಡಿಮೆ ಸಮಯ ಬೇಕು. ಕೇವಲ ನಾಲ್ಕೇ ನಾಲ್ಕು ಸ್ಟೆಪ್ಸುಗಳು.
ಬೇಕಾಗುವ ಸಾಮಗ್ರಿ :
1 ಮೀಡಿಯಂ ಸೈಜ್ ಹುಳಿ ಮಾವಿನಕಾಯಿ, ಜೀರಿಗೆ ಮಾವಿನಕಾಯಿ ಆದರೆ ತಂಬಳಿ ಘಮ್ಮೆನ್ನುವುದು.
1 ಕಪ್ ತುರಿದ ತೆಂಗಿನಕಾಯಿ
2 ಅಥವಾ 3 ಹಸಿಮೆಣಸು ಖಾರಕ್ಕೆ ತಕ್ಕಂತೆ
1 ಚಮಚ ಸಾಸಿವೆ
ಚಿಟಿಕೆ ಇಂಗು
1 ಅಥವಾ 2 ಕಪ್ ತಾಜಾ ಕಡೆದ ಮಜ್ಜಿಗೆ
ಮಾಡುವ ವಿಧಾನ :
* ಮಾವಿನಕಾಯಿ ಸಿಪ್ಪೆ ಕೆತ್ತಿ ಹೋಳುಗಳನ್ನು ಹೆಚ್ಚಿಕೊಳ್ಳಿ.
* ಮಿಕ್ಷಿಗೆ ಹಾಕಿ, ಕಾಯಿ ತುರಿ, ಮೆಣಸಿನ ಜೊತೆ ನುಣ್ಣಗೆ ರುಬ್ಬಿಕೊಳ್ಳಿ.
* ಈ ಮಿಶ್ರಣಕ್ಕೆ ಮಜ್ಜಿಗೆ ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ.
* ಸಾಸಿವೆ, ಇಂಗಿನ ಒಗ್ಗರಣೆ ಕೊಟ್ಟು ಬಿಸಿ ಅನ್ನದ ಜೊತೆ ಬಡಿಸಿರಿ, ಅಥವಾ ಹಾಗೆ ಕುಡಿಯಲು ಕೂಡ ಚೆನ್ನಾಗಿರುತ್ತದೆ.
ಓದುಗರಲ್ಲಿ ಮತ್ತೊಂದು ವಿನಂತಿ : ಮಾವಿನಕಾಯಿ ಚಿತ್ರಾನ್ನ ಲೇಖನ ದಲ್ಲಿ ಓದುಗರೊಬ್ಬರು ಅನಾನಸ್ ಗೊಜ್ಜು ಮಾಡುವುದು ಹೇಗೆಂದು ಕೇಳಿದ್ದಾರೆ. ಯಾರಾದರೂ ಇದನ್ನು ಮಾಡಿದ್ದರೆ, ಅಥವಾ ತಿಳಿದಿದ್ದರೆ ನಮಗೆ ಬರೆದು ತಿಳಿಸಿ, ನಾಲ್ಕಾರು ಜನರು ತಾವೂ ಮಾಡಿ ರುಚಿ ನೋಡಿಯಾರು.
ಇದನ್ನು ಮಾಡಿದ್ದೀರಾ?
ಚಾಪಲ್ಯಕ್ಕೆ ಮಾವಿನಕಾಯಿ ಚಿತ್ರಾನ್ನ



Click it and Unblock the Notifications
