Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ತಡ ಇನ್ಯಾಕ, ಸವಿದು ಬಿಡಿ ‘ಹೆಸರು ಹಿಟ್ಟಿನ ಝುಣಕ’
ಚಪಾತಿ, ಜೋಳದ ರೊಟ್ಟಿ, ಅಕ್ಕಿರೊಟ್ಟಿ, ಸಜ್ಜೆರೊಟ್ಟಿ, ಇವುಗಳೊಂದಿಗೆ ಅದ್ಭುತವಾಗಿ ಮ್ಯಾಚ್ ಆಗುತ್ತದೆ. ಹಾಗಿದ್ದರೆ ತಡವೇಕೆ? ನಿಮ್ಮ ಪಾಕಶಾಲೆಯಲ್ಲೂ ಈ ಪ್ರಯೋಗ ನಡೆದುಬಿಡಲಿ...
ರೇವಣಸಿದ್ಧಪ್ಪ ದೊರೆಗಳ್, ಸರೂರು.
ಝುಣಕ ಎಂದ ತಕ್ಷಣ, ಉತ್ತರ ಕರ್ನಾಟಕದ ಪಾಕವೈವಿಧ್ಯ ಕಣ್ಣ ಮುಂದೆ ಪ್ರತ್ಯಕ್ಷವಾಗುತ್ತದೆ. ಹಲವು ಬಗೆಯ ಪಲ್ಯಗಳಲ್ಲಿ ಝಣಕ ತನ್ನದೇ ಆದ ವಿಶಿಷ್ಟ ಸ್ಥಾನ ಕಾಪಾಡಿಕೊಂಡಿದೆ. ಇದು ಸಾಮಾನ್ಯವಾಗಿ ಎರಡು ಬಗೆಯಲ್ಲಿ ಪ್ರಚಲಿತವಿದೆ.
ಹೆಚ್ಚಾಗಿ ಬಳಕೆಯಲ್ಲಿರುವುದು ಕಡಲೆಹಿಟ್ಟಿನ ಝುಣಕ. ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಕಂಡುಬರುವುದೇ ಹೆಸರು ಹಿಟ್ಟಿನ ಝುಣಕ. ಕಡಲೆಹಿಟ್ಟಿನ ಝುಣಕ ಒಂದು ಪಟ್ಟು ರುಚಿಯಾದರೆ, ಹೆಸರು ಹಿಟ್ಟಿನ ಝುಣಕದ ರುಚಿ ದುಪ್ಪಟ್ಟು. ಅದರ ರುಚಿ ಅನುಪಮ. ಅದನ್ನು ತಯಾರಿಸುವ ಬಗೆ ಹೇಗೆಂದು ಹೇಳುತ್ತೇನೆ ಕೇಳಿ...
ಬೇಕಾಗುವ ಸಾಮಗ್ರಿಗಳು :
ನೂರು ಗ್ರಾಂ ಹೆಸರುಕಾಳಿನ ಹಿಟ್ಟು
ಎರಡು ಮಧ್ಯಮ ಗಾತ್ರದ ಈರುಳ್ಳಿ
4ರಿಂದ 6 ಹಸಿಮೆಣಸಿನಕಾಯಿ
ಕರಿಬೇವು ಸೊಪ್ಪು
ಒಂದು ಚಿಟಿಕೆ ಅರಿಶಿನಪುಡಿ
ರುಚಿಗೆ ತಕ್ಕ ಉಪ್ಪು
ಒಂದು ಚಿಕ್ಕಕಟ್ಟು ಕೋತಂಬರಿ
25ಗ್ರಾಂ ಕರಿಎಳ್ಳು ಅಥವಾ ಬಿಳಿಎಳ್ಳು
ಅಡುಗೆ ಎಣ್ಣೆ, ಜೀರಿಗೆ, ಸಾಸಿವೆ
ಮಾಡುವ ವಿಧಾನ :
ಈರುಳ್ಳಿ, ಹಸಿಮೆಣಸಿನಕಾಯಿ, ಕೋತಂಬರಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಆನಂತರ ಬಾಣಲೆಯನ್ನು ಒಲೆ ಮೇಲೆ ಕಾಯಲು ಇಡಿ. ಎಣ್ಣೆ ಹಾಕಿ, ಸಾಸಿವೆ, ಜೀರಿಗೆ ಹಾಕಿ ಕಲಕಿ. ಈಗ ಹಸಿಮೆಣಸಿನಕಾಯಿ, ಕೋತಂಬರಿ, ಈರುಳ್ಳಿ ಹಾಕಿ ಒಗ್ಗರಣೆಯನ್ನು ಚೆನ್ನಾಗಿ ತಿರುವಾಡಿ.
ಒಗ್ಗರಣೆ ಸ್ವಲ್ಪ ಬೆಂದ ಮೇಲೆ ಸುಮಾರು ಎರಡು ಗ್ಲಾಸಿ(ಟೀ ಗ್ಲಾಸ್ ಅಲ್ಲ)ನಷ್ಟು ನೀರುಹಾಕಿ ಕುದಿಯಲು ಬಿಡಿ. ಕುದಿಯುತ್ತಿರುವ ಮಿಶ್ರಣದಲ್ಲಿ ಅರಿಶಿನ ಹಾಗೂ ಉಪ್ಪು ಹಾಕಿ. ಮಿಶ್ರಣ ಕುದಿಯಲು ಶುರುವಾದ ಮೇಲೆ ಹೆಸರು ಹಿಟ್ಟನ್ನು ಅದಕ್ಕೆ ಬೆರೆಸುತ್ತಾ ಸೌಟಿನಿಂದ ತಿರುವುತ್ತಿರಿ. ಒಂದೆರಡು ನಿಮಿಷ ಬಾಣಲೆಯನ್ನು ತಟ್ಟೆಯಿಂದ ಮುಚ್ಚಿಡಿ.
ಈಗ ಒಂದು ತಟ್ಟೆ ತೆಗೆದುಕೊಂಡು, ಅದರ ತಳಕ್ಕೆ ಎಣ್ಣೆ ಸವರಿಕೊಳ್ಳಿ. ಬಾಣಲೆಯನ್ನು ಕೆಳಕ್ಕೆ ಇಳಿಸಿಕೊಂಡು, ಅದರಲ್ಲಿರುವ ಪದಾರ್ಥವನ್ನು ತಟ್ಟೆಗೆ ಹಾಕಿ, ಚೆನ್ನಾಗಿ ತಟ್ಟೆತುಂಬ ಹರಡಿ. ಒಂದೈದು ನಿಮಿಷ ಬಿಟ್ಟು, ಹರಡಿರುವ ಪದಾರ್ಥದ ಮೇಲೆ ಕರಿಎಳ್ಳು ಅಥವಾ ಬಿಳಿಎಳ್ಳು ಹಾಕಿ ಮೆಲ್ಲಗೆ ಅದುಮಿ. ಆನಂತರ ನಿಮಗೆ ಬೇಕಾದ ಆಕಾರದಲ್ಲಿ ಚಾಕುವಿನಿಂದ ಕತ್ತರಿಸಿಕೊಳ್ಳಿ. ಈಗ ನಿಮಗೆ ರುಚಿಯ ಪರಾಕಾಷ್ಟೆ ತೋರುವ ಝಣಕ ರೆಡಿ...
ಚಪಾತಿ, ಜೋಳದ ರೊಟ್ಟಿ, ಅಕ್ಕಿರೊಟ್ಟಿ, ಸಜ್ಜೆರೊಟ್ಟಿ, ಇವುಗಳೊಂದಿಗೆ ಅದ್ಭುತವಾಗಿ ಮ್ಯಾಚ್ ಆಗುತ್ತದೆ. ಹಾಗಿದ್ದರೆ ತಡವೇಕೆ? ನಿಮ್ಮ ಪಾಕಶಾಲೆಯಲ್ಲೂ ಈ ಪ್ರಯೋಗ ನಡೆದುಬಿಡಲಿ...



Click it and Unblock the Notifications
