For Quick Alerts
ALLOW NOTIFICATIONS  
For Daily Alerts

ರೆಸಿಪಿ: 6 ತಿಂಗಳ ಮಗುವಿಗೆ ಪೌಷ್ಟಿಕ ಆಹಾರ ಮನೆಯ ಮಣ್ಣಿ

Posted By:
|

ಎದೆಹಾಲು ಉಣಿಸುವ ತಾಯಿ ತನ್ನ ಮಗುವಿಗೆ ಇತರೆ ಆಹಾರವನ್ನು ಆರನೇ ತಿಂಗಳಿನಿಂದ ಪ್ರಾರಂಭಿಸಬಹುದು. ಮಗುವಿಗೆ ಎದೆಹಾಲು ಶ್ರೇಷ್ಠ ಆಹಾರ. ಆದರೆ ಆರನೇ ತಿಂಗಳಿಂದ ಸ್ವಲ್ಪ ಗಟ್ಟಿ ಆಹಾರಗಳ ಅಗತ್ಯತೆ ಶುರುವಾಗುತ್ತದೆ. ಮಗುವಿನ ಬೆಳವಣಿಗೆಗೆ ಇದು ಅಗತ್ಯ ಕೂಡ.

Baby food Recipe

ಮಾರುಕಟ್ಟೆಯಲ್ಲಿ ಸಿರಿಲ್ಯಾಕ್ ಸೇರಿದಂತೆ ಹಲವು ಕಂಪೆನಿಯ ಆಹಾರ ಸಿಗುತ್ತದೆ. ಇನ್ನು ಸರ್ಕಾರದಿಂದ ಕೂಡ ಪುಷ್ಠಿ ಪುಡಿ 6 ತಿಂಗಳಿಂದ 3 ವರ್ಷದ ಮಗುವಿಗಾಗಿ ನೀಡಲಾಗುತ್ತದೆ. ಆದರೆ ಇದೆಲ್ಲದಕ್ಕಿಂತ ನೀವೇ ಮನೆಯಲ್ಲಿ ತಯಾರಿಸುವ ಆಹಾರದಲ್ಲಿ ಕಲಬೆರಿಕೆ ಇಲ್ಲದೆ ಶುದ್ಧವಾಗಿ ಮಾಡಲು ಅವಕಾಶವಿರುತ್ತದೆ.

ಹಾಗಾಗಿ ನಿಮ್ಮ ಮಗುವಿಗೆ ನೀವೇ ಮಣ್ಣಿ ತಯಾರಿಸಿ ತಿನ್ನಿಸುವುದರಿಂದಾಗಿ ಹೆಚ್ಚು ಆರೋಗ್ಯವಾಗಿರಲು ಸಾಧ್ಯ. ಮಗುವಿನ ಮಣ್ಣಿಯಲ್ಲಿ ಪೌಷ್ಟಿಕಾಂಶ ಅಧಿಕವಾಗಿರುವಂತೆ, ರುಚಿ ಅಧಿಕವಾಗಿರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ನೀವು ಹೇಗೆ ತಯಾರಿಸಬೇಕು ಎಂಬ ಬಗ್ಗೆ ನಾವಿಲ್ಲಿ ನಿಮಗೆ ಮಾಹಿತಿ ನೀಡುತ್ತಿದ್ದೇವೆ.

Baby food Recipe

Baby food Recipe,ಮಣ್ಣಿ ರೆಸಿಪಿ
Baby food Recipe,ಮಣ್ಣಿ ರೆಸಿಪಿ
Prep Time
5 Mins
Cook Time
5M
Total Time
10 Mins

Recipe By: Sushma Chatra

Recipe Type: Baby Foods

Serves: 1

Ingredients
  • ಬೇಕಾಗುವ ಸಾಮಗ್ರಿಗಳು:

    ರಾಗಿ- 4 ಮುಷ್ಟಿ

    ಅಕ್ಕಿ- 1 ಮುಷ್ಟಿ

    ಜೋಳ- 1/2 ಮುಷ್ಟಿ

    ಗೋಧಿ-1/2 ಮುಷ್ಟಿ

    ಸೋಯಾ ಕಾಳು- ಎರಡು ಸ್ಪೂನ್

    ಕಡಲೆಬೇಳೆ- ಎರಡು ಸ್ಪೂನ್

    ನೆಲಗಡಲೆ- 10 ಕಾಳುಗಳು

    ಬಾದಾಮಿ- 5

    ಮೆಂತ್ಯೆ- ಒಂದು ಸ್ಪೂನ್

    ಹೆಸರುಕಾಳು- ನಾಲ್ಕು ಸ್ಪೂನ್

    ಗೇರುಬೀಜ- 5

    ತೊಗರಿಬೇಳೆ- ಎರಡು ಸ್ಪೂನ್

    ಬಟಾಣಿ- ಒಂದು ಸ್ಪೂನ್

    ಸಾಬಕ್ಕಿ- ಒಂದು ಸ್ಪೂನ್

    ಇತರೆ ಯಾವುದೇ ದ್ವಿದಳ ಧಾನ್ಯಗಳು- ಎರಡರಿಂದ ಮೂರು ಸ್ಪೂನ್

Red Rice Kanda Poha
How to Prepare
  • ಮಾಡುವ ವಿಧಾನ-

    ಮೇಲಿನ ಎಲ್ಲಾ ಪದಾರ್ಥಗಳನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿ. ಚೆನ್ನಾಗಿ ಒಣಗಿದ ನಂತರ ಕೆಂಬಣ್ಣಕ್ಕೆ ಬರುವವರೆಗೆ ಹುರಿಯಿರಿ. ನಂತರ ಒಂದು ಘಂಟೆ ತಣ್ಣಗಾಗಲು ಬಿಡಿ. ತಣಿದ ನಂತರ ನುಣ್ಣಗೆ ಪುಡಿಮಾಡಿ. ಅದಕ್ಕಾಗಿ ನೀವು ಮಿಕ್ಸಿ,ಗ್ರೈಂಡರ್ ಯಾವುದನ್ನು ಬಳಸಬಹುದು. ಪ್ರಮಾಣ ದುಪ್ಪಟ್ಟು ಮಾಡಿಕೊಂಡರೆ ಗಿರಣಿಯಲ್ಲೂ ಮಾಡಿಸಬಹುದು. ಹೀಗೆ ಪುಡಿ ಮಾಡಿದ ಮಿಶ್ರಣವನ್ನು ಶೇಖರಿಸಿ ಇಟ್ಟುಕೊಳ್ಳಿ. ಡಬ್ಬದಲ್ಲಿ ಗಾಳಿಯಾಡದಂತೆ ಸಂಗ್ರಹಿಸಿ ಇಟ್ಟುಕೊಂಡರೆ ಸುಮಾರು ಒಂದು ತಿಂಗಳು ಬಳಸಬಹುದು. 6 ತಿಂಗಳ ಮಗುವಿಗೆ ಪ್ರತಿ ದಿನ ಅರ್ಧ ಸ್ಪೂನ್ ಪೌಡರ್ ನ್ನು ಹಾಲಿನಲ್ಲಿ ಚೆನ್ನಾಗಿ ಬೇಯಿಸಿ ಬೆಲ್ಲ ಅಥವಾ ಸಕ್ಕರೆ ಹಾಕಿ ತಿನ್ನಿಸಬಹುದು.

Instructions
  • 6 ತಿಂಗಳ ಮಗುವಿಗೆ ಮೊದಲ ಪ್ರಾರಂಭಿಕ ದಿನಗಳಲ್ಲಿ ಬಹಳ ತೆಳುವಾಗಿ ಮಾಡಿ ತಿನ್ನಿಸಬೇಕು. ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತಿದೆ ಎಂಬುದು ಖಾತ್ರಿಯಾದ ನಂತರ ಪ್ರಮಾಣವನ್ನು ಹೆಚ್ಚಿಸಬಹುದು. ಅಷ್ಟೇ ಅಲ್ಲ ಮಗುವು ದಪ್ಪ ಮಣ್ಣಿಯನ್ನು ತಿನ್ನಲು ಶಕ್ತವಾದ ನಂತರ ಚೆನ್ನಾಗಿ ಬೇಯಿಸಿ ದಪ್ಪ ಮಣ್ಣಿ ತಿನ್ನಿಸಬಹುದು.
Nutritional Information
  • ಕೊಬ್ಬು- - 3.5 ಗ್ರಾಂ
  • ಪ್ರೊಟೀನ್ - - 16.4 ಗ್ರಾಂ
  • ಶರ್ಕರ ಪಿಷ್ಟ - 73.3ಗ್ರಾಂ
  • ನಾರು- - 0.8 ಗ್ರಾಂ
[ 4.5 of 5 - 94 Users]
X
Desktop Bottom Promotion