For Quick Alerts
ALLOW NOTIFICATIONS  
For Daily Alerts

ಒಗ್ಗರಣೆಯುಕ್ತ ಮೂಲಂಗಿ ಚಟ್ನಿ ಒಂದ್ಸಲ ಟ್ರೈ ಮಾಡಿ

Posted By:
|

ಮೂಲಂಗಿ ಎಂದಾಕ್ಷಣ ಮೂಗು ಮುರಿಯುವವರೇ ಹೆಚ್ಚು. ಮಕ್ಕಳಂತೂ ಇದರ ಪಲ್ಯವನ್ನು ಮಾಡಿದಾಗ ಊಟದ ಹತ್ತಿರವೇ ಸುಳಿಯುವುದಿಲ್ಲ. ಮೂಲಂಗಿ ಸವಿಯಲು ರುಚಿಯಾಗಿದ್ದರೂ, ಅದರ ವಾಸನೆ ಎಲ್ಲರಿಂದ ದೂರ ಉಳಿಯುವಂತೆ ಮಾಡಿದೆ. ಇಂತಹ ಮೂಲಂಗಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ತರಕಾರಿಯಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಿರುವುದರಿಂದ ಆರೋಗ್ಯದ ದೃಷ್ಟಿಯಲ್ಲಿ ಇದು ತುಂಬಾ ಪ್ರಯೋಜನಕಾರಿ. ಆದರೆ ಇದನ್ನು ಇಷ್ಟಪಡುವವರ ಸಂಖ್ಯೆ ಬಹಳ ಕಡಿಮೆ. ಅದಕ್ಕಾಗಿ ನಾವಿಂದು ಒಂದು ಪರ್ಯಾಯ ಉಪಾಯವನ್ನು ತಂದಿದ್ದೇವೆ. ಮೂಲಂಗಿಯ ಪಲ್ಯವನ್ನು ನಿರಾಕರಿಸುವವರಿಗೆ ಟೇಸ್ಟಿ ಮೂಲಂಗಿ ಚಟ್ನಿ ನಿಮಗಾಗಿ.

Radish Chutney Recipe In Kannada

ಮೂಲಂಗಿ ಚಟ್ನಿ ಮಾಡುವ ವಿಧಾನ ಇಲ್ಲಿದೆ:

ಒಗ್ಗರಣೆಯುಕ್ತ ಮೂಲಂಗಿ ಚಟ್ನಿ ಒಂದ್ಸಲ ಟ್ರೈ ಮಾಡಿ
ಒಗ್ಗರಣೆಯುಕ್ತ ಮೂಲಂಗಿ ಚಟ್ನಿ ಒಂದ್ಸಲ ಟ್ರೈ ಮಾಡಿ
Prep Time
5 Mins
Cook Time
10M
Total Time
15 Mins

Recipe By: Shreeraksha

Recipe Type: Vegetarian

Serves: 3

Ingredients
  • ಬೇಕಾಗುವ ಪದಾರ್ಥಗಳು:

    ಮೂಲಂಗಿ- 1

    ಒಣಗಿದ ಮೆಣಸಿನಕಾಯಿ- 1-2

    ದನಿಯಾ- 1/4 ಚಮಚ

    ತೆಂಗಿನ ತುರಿ- 1/4 ಬಟ್ಟಲು

    ಹುಣಸೆಹಣ್ಣು- ಸ್ವಲ್ಪ

    ಉಪ್ಪು- ರುಚಿಗೆ ತಕ್ಕಷ್ಟು

    ಎಣ್ಣೆ- 1 ಚಮಚ

    ಸಾಸಿವೆ- ಸ್ವಲ್ಪ

    ಕರಿಬೇವು-ಸ್ವಲ್ಪ

Red Rice Kanda Poha
How to Prepare
  • ತಯಾರಿಸುವ ವಿಧಾನ:

    • ಮೊದಲು ಮೂಲಂಗಿಯನ್ನು ಚೆನ್ನಾಗಿ ತೊಳೆದು ತುರಿದಿಟ್ಟುಕೊಳ್ಳಿ.
    • ಮಿಕ್ಸಿ ಜಾರ್ ಗೆ ತೆಂಗಿನ ತುರಿ, ಮೆಣಸಿನಕಾಯಿ, ದನಿಯಾ, ಉಪ್ಪು ಹಾಗೂ ಹುಣಸೆಹಣ್ಣು, ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
    • ಬಳಿಕ ಇದೇ ಜಾರ್ ಗೆ ತುರಿದ ಮೂಲಂಗಿ ಹಾಕಿ 5 ನಿಮಿಷ ರುಬ್ಬಿಕೊಳ್ಳಿ. ಬಳಿಕ ರುಬ್ಬಿಕೊಂಡ ಚಟ್ನಿಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ.
    • ನಂತರ ಒಂದು ಪ್ಯಾನ್ ಗೆ ಎಣ್ಣೆ, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಂಡು ಚಟ್ನಿಗೆ ಹಾಕಿದರೆ ರುಚಿಕರವಾದ ಮೂಲಂಗಿ ಚಟ್ನಿ ಸವಿಯಲು ಸಿದ್ಧ.

Instructions
  • ಟಿಪ್ಪಣಿ: ಈ ಚಟ್ನಿಯನ್ನು ದೋಸೆ, ಇಡ್ಲಿ ಜೊತೆಗೆ ಗಂಜಿಯ ಜೊತೆಗೆ ಸೇರಿಸಿ ಸವಿಯಬಹುದು.
Nutritional Information
  • People - 3
  • ಎನರ್ಜಿ - 7 ಕ್ಯಾಲೋರಿ
  • ಕೊಬ್ಬು - 0.3 ಗ್ರಾಂ
  • ಪ್ರೋಟೀನ್ - 0.3 ಗ್ರಾಂ
  • ಕಾರ್ಬೋಹೈಡ್ರೇಟ್ - 0.5 ಗ್ರಾಂ
  • ಫೈಬರ್ - 0.2 ಗ್ರಾಂ
[ 5 of 5 - 75 Users]
X
Desktop Bottom Promotion