Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಒಗ್ಗರಣೆಯುಕ್ತ ಮೂಲಂಗಿ ಚಟ್ನಿ ಒಂದ್ಸಲ ಟ್ರೈ ಮಾಡಿ
Recipes
oi-Shreeraksha
Posted By: Shreeraksha
ಮೂಲಂಗಿ ಎಂದಾಕ್ಷಣ ಮೂಗು ಮುರಿಯುವವರೇ ಹೆಚ್ಚು. ಮಕ್ಕಳಂತೂ ಇದರ ಪಲ್ಯವನ್ನು ಮಾಡಿದಾಗ ಊಟದ ಹತ್ತಿರವೇ ಸುಳಿಯುವುದಿಲ್ಲ. ಮೂಲಂಗಿ ಸವಿಯಲು ರುಚಿಯಾಗಿದ್ದರೂ, ಅದರ ವಾಸನೆ ಎಲ್ಲರಿಂದ ದೂರ ಉಳಿಯುವಂತೆ ಮಾಡಿದೆ. ಇಂತಹ ಮೂಲಂಗಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ತರಕಾರಿಯಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಿರುವುದರಿಂದ ಆರೋಗ್ಯದ ದೃಷ್ಟಿಯಲ್ಲಿ ಇದು ತುಂಬಾ ಪ್ರಯೋಜನಕಾರಿ. ಆದರೆ ಇದನ್ನು ಇಷ್ಟಪಡುವವರ ಸಂಖ್ಯೆ ಬಹಳ ಕಡಿಮೆ. ಅದಕ್ಕಾಗಿ ನಾವಿಂದು ಒಂದು ಪರ್ಯಾಯ ಉಪಾಯವನ್ನು ತಂದಿದ್ದೇವೆ. ಮೂಲಂಗಿಯ ಪಲ್ಯವನ್ನು ನಿರಾಕರಿಸುವವರಿಗೆ ಟೇಸ್ಟಿ ಮೂಲಂಗಿ ಚಟ್ನಿ ನಿಮಗಾಗಿ.

ಮೂಲಂಗಿ ಚಟ್ನಿ ಮಾಡುವ ವಿಧಾನ ಇಲ್ಲಿದೆ:
ಒಗ್ಗರಣೆಯುಕ್ತ ಮೂಲಂಗಿ ಚಟ್ನಿ ಒಂದ್ಸಲ
ಟ್ರೈ ಮಾಡಿ
ಒಗ್ಗರಣೆಯುಕ್ತ ಮೂಲಂಗಿ ಚಟ್ನಿ
ಒಂದ್ಸಲ ಟ್ರೈ ಮಾಡಿ
Prep Time
5 Mins
Cook Time
10M
Total Time
15 Mins
Recipe By: Shreeraksha
Recipe Type: Vegetarian
Serves: 3
Ingredients
-
ಬೇಕಾಗುವ ಪದಾರ್ಥಗಳು:
ಮೂಲಂಗಿ- 1
ಒಣಗಿದ ಮೆಣಸಿನಕಾಯಿ- 1-2
ದನಿಯಾ- 1/4 ಚಮಚ
ತೆಂಗಿನ ತುರಿ- 1/4 ಬಟ್ಟಲು
ಹುಣಸೆಹಣ್ಣು- ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- 1 ಚಮಚ
ಸಾಸಿವೆ- ಸ್ವಲ್ಪ
ಕರಿಬೇವು-ಸ್ವಲ್ಪ
How to Prepare
-
ತಯಾರಿಸುವ ವಿಧಾನ:
- ಮೊದಲು ಮೂಲಂಗಿಯನ್ನು ಚೆನ್ನಾಗಿ ತೊಳೆದು ತುರಿದಿಟ್ಟುಕೊಳ್ಳಿ.
- ಮಿಕ್ಸಿ ಜಾರ್ ಗೆ ತೆಂಗಿನ ತುರಿ, ಮೆಣಸಿನಕಾಯಿ, ದನಿಯಾ, ಉಪ್ಪು ಹಾಗೂ ಹುಣಸೆಹಣ್ಣು, ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
- ಬಳಿಕ ಇದೇ ಜಾರ್ ಗೆ ತುರಿದ ಮೂಲಂಗಿ ಹಾಕಿ 5 ನಿಮಿಷ ರುಬ್ಬಿಕೊಳ್ಳಿ. ಬಳಿಕ ರುಬ್ಬಿಕೊಂಡ ಚಟ್ನಿಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ.
- ನಂತರ ಒಂದು ಪ್ಯಾನ್ ಗೆ ಎಣ್ಣೆ, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಂಡು ಚಟ್ನಿಗೆ ಹಾಕಿದರೆ ರುಚಿಕರವಾದ ಮೂಲಂಗಿ ಚಟ್ನಿ ಸವಿಯಲು ಸಿದ್ಧ.
Instructions
- ಟಿಪ್ಪಣಿ: ಈ ಚಟ್ನಿಯನ್ನು ದೋಸೆ, ಇಡ್ಲಿ ಜೊತೆಗೆ ಗಂಜಿಯ ಜೊತೆಗೆ ಸೇರಿಸಿ ಸವಿಯಬಹುದು.
Nutritional Information
- People - 3
- ಎನರ್ಜಿ - 7 ಕ್ಯಾಲೋರಿ
- ಕೊಬ್ಬು - 0.3 ಗ್ರಾಂ
- ಪ್ರೋಟೀನ್ - 0.3 ಗ್ರಾಂ
- ಕಾರ್ಬೋಹೈಡ್ರೇಟ್ - 0.5 ಗ್ರಾಂ
- ಫೈಬರ್ - 0.2 ಗ್ರಾಂ
Comments
[ 5 of 5 - 75 Users]



Click it and Unblock the Notifications
