Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ತೂಕ ಇಳಿಸಲು, ಆರೋಗ್ಯವಾಗಿರಲು ಕ್ವಿನೋವಾ ಬಳಸಿ ಈ ತಿಂಡಿ ಮಾಡಿ ತಿನ್ನಿ! ತುಂಬಾ ಈಸಿ ರೆಸಿಪಿ
ತೂಕ ಇಳಿಕೆಗೆ ಪರ್ಫೆಕ್ಟ್ ಬ್ರೇಕ್ಫಾಸ್ಟ್ ರೆಸಿಪಿ! ರವೆಗೆ ಬದಲು ಟ್ರೈ ಮಾಡಿ ಈ ಕ್ವಿನೋವಾದೊಂದಿಗೆ ರುಚಿಕರವಾದ ವೆಜ್ ತಿಂಡಿ ಮಾಡಿ. ಹೌದು, ಆರೋಗ್ಯಕರ ಜೀವನಶೈಲಿಗಾಗಿ ಜನರು ಈಗ ಸಾಂಪ್ರದಾಯಿಕ ಆಹಾರಗಳ ಜೊತೆಗೆ ಪೌಷ್ಟಿಕಾಂಶಭರಿತ 'ಸೂಪರ್ಫುಡ್'ಗಳತ್ತ ಆಕರ್ಷಿತರಾಗುತ್ತಿದ್ದಾರೆ. ಅಂತಹ ಉತ್ತಮ ಆಹಾರಗಳಲ್ಲಿ ಕ್ವಿನೋವಾ (Quinoa) ಪ್ರಮುಖ ಸ್ಥಾನದಲ್ಲಿದೆ.
ತೂಕ ಇಳಿಸುವ ನಿಟ್ಟಿನಲ್ಲಿರುವವರಿಗೆ ರವೆಯಿಂದ ತಯಾರಿಸುವ ರವೆ ಅಥವಾ ಸಜ್ಜಿಗೆ ಉಪ್ಪಿಟ್ಟಿಗಿಂತ, ಪೋಷಕಾಂಶಯುಕ್ತ ಕ್ವಿನೋವಾ ವೆಜ್ ಉಪ್ಪಿಟ್ಟು (Quinoa Veg Upma) ಅತ್ಯುತ್ತಮ ಆಯ್ಕೆ. ದಕ್ಷಿಣ ಭಾರತದಲ್ಲಿ ರವೆ ಉಪ್ಪಿಟ್ಟು ಸಾಮಾನ್ಯವಾಗಿ ಜನಪ್ರಿಯ. ಆದರೆ, ಪ್ರೋಟೀನ್ ಮತ್ತು ಫೈಬರ್ನಿಂದ ಸಮೃದ್ಧವಾಗಿರುವ ಕ್ವಿನೋವಾ ತೂಕ ನಿರ್ವಹಣೆಗೆ ಹೆಚ್ಚು ಸೂಕ್ತ.
ಈ ಲೇಖನದಲ್ಲಿ ಕ್ವಿನೋವಾ ವೆಜ್ ಉಪ್ಮಾ ತಯಾರಿಸುವ ವಿಧಾನ (Quinoa Veg Upma Recipe), ಅಗತ್ಯ ಪದಾರ್ಥಗಳು ಮತ್ತು ಅದರ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಾಗಿದೆ. ದೈನಂದಿನ ಆಹಾರ ಕ್ರಮದಲ್ಲಿ ನಾರಿನಂಶ ಮತ್ತು ಪ್ರೋಟೀನ್ ಹೆಚ್ಚಿದ್ದಾಗ ತೂಕ ಇಳಿಸುವುದು ಸುಲಭ. ಕ್ವಿನೋವಾ ಗ್ಲುಟನ್ ಮುಕ್ತವಾಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ. ಬೆಳಗ್ಗೆ ಹಗುರವಾದ ಹಾಗೂ ಪೌಷ್ಟಿಕ ಆಹಾರವನ್ನು ಬಯಸುವವರಿಗೆ ಇದು ಹೇಳಿ ಮಾಡಿಸಿದ ಖಾದ್ಯವಾಗಿದೆ. ಇದನ್ನು ಸುಲಭವಾಗಿ ತಯಾರಿಸಬಹುದು.
ಈ ಉಪ್ಪಿಟ್ಟಿಗೆ ಬೇಕಾಗುವ ಪದಾರ್ಥಗಳು
• ಕ್ವಿನೋವಾ
• ನೀರು
• ಈರುಳ್ಳಿ
• ಹಸಿ ಮೆಣಸಿನಕಾಯಿ
• ಕ್ಯಾರೆಟ್
• ಬೀನ್ಸ್
• ಕ್ಯಾಪ್ಸಿಕಂ
• ಬಟಾಣಿ
• ಸಾಸಿವೆ
• ಕರಿಬೇವು
• ಎಣ್ಣೆ ಅಥವಾ ತುಪ್ಪ
• ಉಪ್ಪು
• ನಿಂಬೆ ರಸ
• ಕೊತ್ತಂಬರಿ ಸೊಪ್ಪು
ಈ ಉಪ್ಪಿಟ್ಟು ತಯಾರಿಸುವ ವಿಧಾನ
- ಕ್ವಿನೋವಾ ನೈಸರ್ಗಿಕವಾಗಿ ಸ್ವಲ್ಪ ಕಹಿಯನ್ನು ಹೊಂದಿರುತ್ತದೆ. ಅದನ್ನು ನಿವಾರಿಸಲು ಬೇಯಿಸುವ ಮೊದಲು ಕನಿಷ್ಠ ಮೂರು ಬಾರಿ ಚೆನ್ನಾಗಿ ನೀರಿನಿಂದ ತೊಳೆಯಬೇಕು.
- ಪಾತ್ರೆಯಲ್ಲಿ ಎರಡು ಕಪ್ ನೀರಿಗೆ ತೊಳೆದ ಕ್ವಿನೋವಾ ಸೇರಿಸಿ, ಹತ್ತು ನಿಮಿಷ ಬೇಯಿಸಿ. ನೀರು ಪೂರ್ಣವಾಗಿ ಆವಿಯಾಗಿ, ಕ್ವಿನೋವಾ ಮೆತ್ತಗಾದಾಗ ಒಲೆ ಆಫ್ ಮಾಡಿ. ಅದು ಮಲ್ಲಿಗೆಯಂತೆ ಅರಳಿದರೆ ಪರಿಪೂರ್ಣವಾಗಿ ಬೇಯ್ದಿದೆ ಎಂದರ್ಥ.
- ಈಗ ಕಡಾಯಿಯಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ, ಸಾಸಿವೆ ಮತ್ತು ಕರಿಬೇವು ಹಾಕಿ. ಅವು ಚಟಪಟ ಎಂದ ನಂತರ, ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ ಈರುಳ್ಳಿ ತಿಳಿ ಗುಲಾಬಿ ಬಣ್ಣಕ್ಕೆ ಬರುವವರೆಗೆ ಹುರಿಯಿರಿ.
- ಬಳಿಕ ಕತ್ತರಿಸಿದ ಕ್ಯಾರೆಟ್, ಬೀನ್ಸ್, ಬಟಾಣಿ, ಮತ್ತು ಕ್ಯಾಪ್ಸಿಕಂಗಳನ್ನು ಸೇರಿಸಿ ನಾಲ್ಕು ನಿಮಿಷ ಬೇಯಿಸಿ. ತರಕಾರಿಗಳು ಅತಿಯಾಗಿ ಬೇಯಲು ಬಿಡಬೇಡಿ, ತಿನ್ನುವಾಗ ಸ್ವಲ್ಪ ಗರಿಗರಿಯಾಗಿದ್ದರೆ ಉಪ್ಪಿಟ್ಟು ಹೆಚ್ಚು ರುಚಿಕರವಾಗಿರುತ್ತದೆ.
- ಈಗ ಮೊದಲೇ ಬೇಯಿಸಿದ ಕ್ವಿನೋವಾ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ತರಕಾರಿ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಕೊನೆಯಲ್ಲಿ ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪನ್ನು ಚಿಮುಕಿಸಿದರೆ, ಬಿಸಿಯಾದ ಕ್ವಿನೋವಾ ವೆಜ್ ಉಪ್ಪಿಟ್ಟು ಸಿದ್ಧ.
ಕ್ವಿನೋವಾ ಉಪ್ಪಿಟ್ಟಿನ ಲಾಭಗಳು
• ಇದು ತೂಕ ಇಳಿಕೆಗೆ ಸಹಕಾರಿ. ಕ್ವಿನೋವಾದಲ್ಲಿರುವ ಅಧಿಕ ನಾರಿನಂಶವು ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ, ಪದೇ ಪದೇ ಹಸಿವಾಗುವುದನ್ನು ತಡೆದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.
• ಇದು ಪ್ರೋಟೀನ್ ಮೂಲ. ಸಸ್ಯಹಾರಿಗಳಿಗೆ ಕ್ವಿನೋವಾ ಅತ್ಯುತ್ತಮ ಪ್ರೋಟೀನ್ ಮೂಲವಾಗಿದೆ. ಇದು ಸ್ನಾಯುಗಳ ಬೆಳವಣಿಗೆಗೆ ಮತ್ತು ದೇಹಕ್ಕೆ ಅಗತ್ಯ ಶಕ್ತಿ ನೀಡಲು ನೆರವಾಗುತ್ತದೆ.
• ಇದು ಜೀರ್ಣಕ್ರಿಯೆಗೆ ಉತ್ತಮ. ಇದರಲ್ಲಿರುವ ಫೈಬರ್ ಅಂಶವು ಮಲಬದ್ಧತೆಯನ್ನು ನಿವಾರಿಸಿ, ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.
• ಇದು ಮಧುಮೇಹಿಗಳಿಗೆ ಸೂಕ್ತ. ಕ್ವಿನೋವಾದ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ, ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹಠಾತ್ತಾಗಿ ಹೆಚ್ಚಿಸುವುದಿಲ್ಲ, ಹೀಗಾಗಿ ಮಧುಮೇಹಿಗಳಿಗೆ ಉತ್ತಮವಾಗಿದೆ.
ಡಯಟ್ ಮಾಡುವವರಿಗೆ ಟಿಪ್ಸ್
ಮಕ್ಕಳಿಗೆ ನೀಡುವಾಗ ಹೆಚ್ಚುವರಿ ರುಚಿ ಮತ್ತು ಪೋಷಕಾಂಶಗಳಿಗಾಗಿ ಸ್ವಲ್ಪ ಗೋಡಂಬಿ ಅಥವಾ ಕಡಲೆಬೀಜಗಳನ್ನು ಸೇರಿಸಬಹುದು. ರಾತ್ರಿ ಊಟದ ಸಮಯದಲ್ಲಿ ಈ ಉಪ್ಪಿಟ್ಟನ್ನು ಸೇವಿಸುವುದರಿಂದ ಹೊಟ್ಟೆ ಹಗುರವಾಗಿದ್ದು, ಉತ್ತಮ ನಿದ್ರೆಗೆ ಇದು ಸಹಕಾರಿಯಾಗುತ್ತದೆ. ಆರೋಗ್ಯ ಮತ್ತು ರುಚಿಯ ಅತ್ಯುತ್ತಮ ಸಂಗಮವಾದ ಈ ಕ್ವಿನೋವಾ ಉಪ್ಪಿಟ್ಟನ್ನು ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಇಂದೇ ಅಳವಡಿಸಿಕೊಂಡು ಸದೃಢವಾಗಿರಿ.



Click it and Unblock the Notifications

